ಲಖನೌ, ಉತ್ತರಪ್ರದೇಶ: ಹೈಕೋರ್ಟ್‌ನ ಲಖನೌ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಐಸಿಸಿ ಮತ್ತು ಬಿಸಿಸಿಐ ಜೊತೆಗೆ ಸ್ಟೇಡಿಯಂ ಅಸೋಸಿಯೇಷನ್ ಮತ್ತು ಯುಪಿ ಕ್ರಿಕೆಟ್ ಅಸೋಸಿಯೇಷನ್‌ಗೆ ಅರ್ಜಿಯ ಪ್ರತಿಯನ್ನು ನೀಡುವಂತೆ ಅರ್ಜಿದಾರರಿಗೆ ಹೇಳಿದೆ. ಅರ್ಜಿಯಲ್ಲಿ ಲಖನೌದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಪಂದ್ಯಗಳ ದುಬಾರಿ ಟಿಕೆಟ್ ವಿಚಾರವನ್ನು ಪ್ರಸ್ತಾಪಿಸಲಾಗಿದೆ.
Cricket World Cup: ವಿಪುಲ್ ತ್ರಿಪಾಠಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಆರ್ ಮಸೂದಿ ಮತ್ತು ಓಂ ಪ್ರಕಾಶ್ ಶುಕ್ಲಾ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಏಕನಾ ಸ್ಟೇಡಿಯಂನಲ್ಲಿ ನಡೆಯಲಿರುವ ಕೆಲವು ಪಂದ್ಯಗಳ ಟಿಕೆಟ್ ದರ 499 ರೂಪಾಯಿ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಕೆಲವು ಟಿಕೆಟ್‌ಗಳನ್ನು ಕನಿಷ್ಠ 3,250 ರೂ.ಗೆ ಮಾರಾಟ ಮಾಡಲಾಗುತ್ತಿದೆ. ದೇಶದಲ್ಲಿ ಕ್ರಿಕೆಟ್ ವಿಶ್ವಕಪ್ ನಡೆಯುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಬಯಸುತ್ತಾರೆ. ಆದರೆ, ದುಬಾರಿ ಟಿಕೆಟ್‌ಗಳಿಂದಾಗಿ ಜನರು ಇದರಿಂದ ವಂಚಿತರಾಗುತ್ತಿದ್ದಾರೆ. ಇದು ಸಂವಿಧಾನದ 14 ನೇ ವಿಧಿಯ ಉಲ್ಲಂಘನೆಯಾಗಿದೆ. ಟಿಕೆಟ್ ದರ ನಿಗದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುತ್ತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಅರ್ಜಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಐಸಿಸಿ, ಬಿಸಿಸಿಐ ಮತ್ತು ಸ್ಟೇಡಿಯಂ ಅಸೋಸಿಯೇಷನ್ ಖಾಸಗಿ ಪಕ್ಷಗಳಾಗಿದ್ದು, ಇವುಗಳ ಮೇಲೆ ಸರ್ಕಾರದ ನಿಯಂತ್ರಣವಿಲ್ಲ ಎಂದು ಹೇಳಲಾಗಿದೆ. ಸಂವಿಧಾನದ 226 ನೇ ವಿಧಿ ಅಡಿಯಲ್ಲಿ ಖಾಸಗಿ ಪಕ್ಷಗಳ ವಿರುದ್ಧ PIL ಅನ್ನು ನಿರ್ವಹಿಸಲಾಗುವುದಿಲ್ಲ ಎಂದು ವಾದಿಸಲಾಯಿತು. ಉಭಯ ಪಕ್ಷಗಳ ವಾದವನ್ನು ಆಲಿಸಿದ ನ್ಯಾಯಾಲಯ, ಅರ್ಜಿಯ ನಿರ್ವಹಣೆಯ ಬಗ್ಗೆ ಕೇಂದ್ರ ಸರ್ಕಾರ ಎತ್ತಿರುವ ಆಕ್ಷೇಪಣೆಯ ಬಗ್ಗೆಯೂ ಸಂಬಂಧಪಟ್ಟ ಕಕ್ಷಿದಾರರ ವಿಚಾರಣೆ ನಡೆಸಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಮೇಲಿನ ಅವಲೋಕನಗಳೊಂದಿಗೆ ನ್ಯಾಯಾಲಯವು ಅರ್ಜಿದಾರರಿಗೆ ಅರ್ಜಿಯ ಪ್ರತಿಯನ್ನು ಐಸಿಸಿ, ಬಿಸಿಸಿಐ ಮತ್ತು ಇತರ ಪಕ್ಷಗಳಿಗೆ ಒದಗಿಸಲು ಅನುಮತಿ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 19 ರಂದು ನಡೆಯಲಿದೆ.
ಇಂದು ಗುಜರಾತ್ನ ಅಹಮದಾಬಾದ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭಗೊಳ್ಳಲಿದ್ದು, 1.30ಕ್ಕೆ ಟಾಸ್ ನಡೆಯಲಿದೆ.
ಓದಿ: World Cup 2023: ಗುಜರಾತಿ ಖಾದ್ಯ ಸವಿದ ಪಾಕ್ ತಂಡ.. ತವರು ಬೆಂಬಲ ಸಿಗದ ಆಜಾಮ್ ಬಳಗಕ್ಕೆ ಏಕಾಂಗಿ ಫೀಲಿಂಗ್