ETV Bharat / sports

ಕ್ರಿಕೆಟ್ ವಿಶ್ವಕಪ್ 2023: ಇಲ್ಲಿಯವರೆಗಿನ ಹಲವು ದಾಖಲೆಗಳು ಧೂಳಿಪಟ

author img

By ETV Bharat Karnataka Team

Published : Oct 11, 2023, 8:19 AM IST

Updated : Oct 11, 2023, 11:53 AM IST

Icc world cup 2023 ರ ವಿಶ್ವಕಪ್​ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿವೆ. ಕೆಲ ಪಂದ್ಯಗಳು ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿವೆ. ಯಾವೆಲ್ಲ ದಾಖಲೆಗಳು ನಿರ್ಮಾಣ ಆಗಿವೆ ಎಂಬುದನ್ನು ನೋಡುವುದಾದರೆ,

ಕ್ರಿಕೆಟ್ ವಿಶ್ವಕಪ್ 2023: ಇಲ್ಲಿಯವರೆಗಿನ ಹಲವು ದಾಖಲೆಗಳು ಧೂಳಿಪಟ
ಕ್ರಿಕೆಟ್ ವಿಶ್ವಕಪ್ 2023: ಇಲ್ಲಿಯವರೆಗಿನ ಹಲವು ದಾಖಲೆಗಳು ಧೂಳಿಪಟ

ಹೈದರಾಬಾದ್: ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯ ಹಲವು ದಾಖಲೆಗಳು ಸಾಕ್ಷಿಯಾಯಿತು. ಮೊಹಮ್ಮದ್ ರಿಜ್ವಾನ್ ಶ್ರೀಲಂಕಾ ವಿರುದ್ಧ ಗೆಲುವಿನ ರನ್ ಬಾರಿಸುತ್ತಿದ್ದಂತೆ ಪಾಕಿಸ್ತಾನ ದಾಖಲೆ ಪುಸ್ತಕ ಸೇರಿತು. ಅಕ್ಟೋಬರ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾದ ವಿಶ್ವಕಪ್ ಕ್ರಿಕೆಟ್‌ನಲ್ಲಿ ಇದುವರೆಗೆ ಎಂಟು ಪಂದ್ಯಗಳು ನಡೆದಿವೆ. ಈ ಬಾರಿಯ ವಿಶ್ವಕಪ್​ನಲ್ಲಿ ಕೆಲವು ಬ್ಯಾಟಿಂಗ್ ದಾಖಲೆಗಳು ಈಗಾಗಲೇ ಪುಡಿಪುಡಿಯಾಗಿವೆ. ಪ್ರಮುಖ ಏಳು ದಾಖಲೆಗಳನ್ನು ನೋಡುವುದಾದರೆ,

1. ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಭರ್ಜರಿ 428 ರನ್​ಗಳ ಹೊಳೆಯನ್ನೇ ಹರಿಸಿತು. ಇದು ಈಗ ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದರ ಗರಿಷ್ಠ ಮೊತ್ತವಾಗಿದೆ.

2. ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ವಿಶ್ವಕಪ್‌ನಲ್ಲಿ ಅತಿ ವೇಗದ ಶತಕ ದಾಖಲಿಸಿ ಗಮನ ಸೆಳೆದಿದ್ದಾರೆ. ಅವರು ದೆಹಲಿಯಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಇವರು ಕೇವಲ 49 ಎಸೆತಗಳಲ್ಲಿ ತಮ್ಮ ಶತಕ ಪೂರೈಸುವ ಮೂಲಕ ವಿಶ್ವಕಪ್ ದಾಖಲೆ ಬರೆದಿದ್ದಾರೆ.

3. ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ ಪಂದ್ಯದಲ್ಲಿ ಮತ್ತೊಂದು ದಾಖಲೆಯೂ ಸೃಷ್ಟಿಯಾಗಿದೆ. ವಿಶ್ವಕಪ್‌ನ ಪಂದ್ಯವೊಂದರಲ್ಲಿ ಗರಿಷ್ಠ ಒಟ್ಟು 754 ರನ್‌ಗಳು ಹರಿದು ಬಂದಿವೆ. ಇದೊಂದು ದಾಖಲೆಯಾಗಿ ದಾಖಲಾಗಿರುವುದು ವಿಶೇಷ

4. ಪಾಕಿಸ್ತಾನ ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಗುರಿಯನ್ನು ಬೆನ್ನಟ್ಟಿ ಜಯ ಸಾಧಿಸಿದೆ. ಮೊಹಮ್ಮದ್ ರಿಜ್ವಾನ್ ಮತ್ತು ಅಬ್ದುಲ್ಲಾ ಶಫೀಕ್ ಅವರ ಶತಕಗಳ ನೆರವಿನಿಂದ ಪಾಕಿಸ್ತಾನ ರೋಚಕತೆ ಕೂಡಿದ ಪಂದ್ಯದಲ್ಲಿ 345 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಈ ಹಿಂದೆ 2011ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 328 ರನ್​ಗಳನ್ನು ಐರ್ಲೆಂಡ್​ ಬೆನ್ನಟ್ಟಿದ್ದು ದಾಖಲೆಯಾಗಿತ್ತು.

5. ಪಾಕಿಸ್ತಾನ ಮತ್ತು ಶ್ರೀಲಂಕಾ ಪಂದ್ಯವು ವಿಶ್ವಕಪ್‌ ಇತಿಹಾಸದಲ್ಲಿ ಮೊದಲ ನಿದರ್ಶನವಾಗಿದೆ. ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ನಾಲ್ಕು ಶತಕಗಳು ದಾಖಲಾಗಿವೆ. ಶ್ರೀಲಂಕಾದ ಕುಸಾಲ್ ಮೆಂಡಿಸ್ ಮತ್ತು ಎಸ್ ಸದೀರ ಸಮರವಿಕ್ರಮ ಶತಕ ಸಿಡಿಸಿದರೆ, ಪಾಕಿಸ್ತಾನದ ಪರವಾಗಿ ಅಬ್ದುಲ್ಲಾ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ಮೂರಂಕಿಯ ಗಡಿ ತಲುಪಿ ವಿಶೇಷ ದಾಖಲೆ ಬರೆದರು. ಕ್ವಿಂಟನ್ ಡಿ ಕಾಕ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮತ್ತು ಏಡೆನ್ ಮರ್ಕರಮ್ ಶತಕಗಳನ್ನು ಸಿಡಿಸುವ ಮೂಲಕ ಕ್ರಿಕೆಟ್​ ಪಂದ್ಯವೊಂದರಲ್ಲಿ ಮೊದಲ ಬಾರಿಗೆ ತಂಡವೊಂದರಿಂದ ಮೂರು ಶತಕಗಳು ದಾಖಲಾಗಿವೆ. ಈ ದಾಖಲೆಯನ್ನು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬರೆದಿತ್ತು.

6. ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಅವರ ಅಜೇಯ 131 ರನ್​ ಸ್ಕೋರ್​, ಏಕದಿನ ಪಂದ್ಯವೊಂದರಲ್ಲಿ ಪಾಕಿಸ್ತಾನದ ವಿಕೆಟ್ ಕೀಪರ್ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ. ಅವರು 2005 ರಲ್ಲಿ ಬ್ರಿಸ್ಬೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 124 ರನ್ ಸಿಡಿಸಿದ್ದ ಕಮ್ರಾನ್ ಅಕ್ಮಲ್ ಅವರ ದಾಖಲೆಯನ್ನು ಮುರಿದಿದ್ದಾರೆ.

7. ಪಾಕಿಸ್ತಾನ ಈಗ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಆಡಿದ ಎಲ್ಲಾ ಎಂಟು ಪಂದ್ಯಗಳನ್ನು ಗೆದ್ದಿರುವುದು ಕೂಡಾ ಒಂದು ದಾಖಲೆಯಾಗಿದೆ. 2023 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಇನ್ನಷ್ಟು ದಾಖಲೆಗಳು ಅಳಿದು ಹೊಸ ದಾಖಲೆಗಳು ಸೃಷ್ಟಿಯಾಗಲಿ ಎಂದು ಕ್ರಿಕೆಟ್ ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಇದನ್ನು ಓದಿ: ಅಬ್ದುಲ್ಲಾ ಶಫೀಕ್- ರಿಜ್ವಾನ್‌ ಭರ್ಜರಿ ಜೊತೆಯಾಟ; ಶ್ರೀಲಂಕಾ ವಿರುದ್ಧ ಪಾಕಿಸ್ತಾನಕ್ಕೆ ದಾಖಲೆಯ ಗೆಲುವು

Last Updated : Oct 11, 2023, 11:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.