ETV Bharat / sports

World Cup 2023: ಮೋದಿ ಸ್ಟೇಡಿಯಂನಲ್ಲಿ ಸಾಂಪ್ರಾಯಿಕ ಎದುರಾಳಿಗಳ ಕದನ.. ಈ ಹಿಂದಿನ ಮುಖಾಮುಖಿ ಹೀಗಿದೆ..

100 ದಿನ ಬಾಕಿ ಇರುವಂತೆ ಐಸಿಸಿ ವಿಶ್ವಕಪ್​ನ ವೇಳಾಪಟ್ಟಿ ಬಿಡುಗಡೆಯಾಗಿದೆ. ಬಹುತೇಕರು ಎದುರು ನೋಡುತ್ತಿದ್ದ ಭಾರತ ಪಾಕಿಸ್ತಾನ ಪಂದ್ಯ ಅಕ್ಟೋಬರ್​ 15 ರಂದು ಅಹಮದಾಬಾದ್​ನಲ್ಲಿ ನಡೆಯಲಿದೆ.

ICC World Cup 2023
ICC World Cup 2023
author img

By

Published : Jun 27, 2023, 2:22 PM IST

ICC World Cup 2023
2023ರ ವಿಶ್ವಕಪ್‌ಗೆ ಭಾರತ ತಂಡದ ವೇಳಾಪಟ್ಟಿ

ಬಹಳ ದಿನಗಳಿಂದ ಕ್ರಿಕೆಟ್​ ಅಭಿಮಾನಿಗಳು ಕಾಯ್ದು ಕುಳಿತಿದ್ದ 2023ರ ಪುರುಷರ ವಿಶ್ವಕಪ್​ನ ವೇಳಾಪಟ್ಟಿ ಬಿಡುಗಡೆಯಾಗಿದೆ. ಹೆಚ್ಚು ಕಡಿಮೆ ವಿಶ್ವಕಪ್​ ನೂರು ದಿನಗಳು ಮಾತ್ರ ಬಾಕಿ ಇದೆ. ಹೀಗಾಗಿ ಭಾರತದಲ್ಲಿ ಆಯೋಜನೆಗೊಳ್ಳುತ್ತಿರುವ ವಿಶ್ವಕಪ್​ಗೆ ದಿನಗಣನೆಯೂ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ದೇಶಗಳು ಏಕದಿನ ಕ್ರಿಕೆಟ್​ನ ಅಭ್ಯಾಸಕ್ಕೆ ಅಣಿಯಾಗುತ್ತಿವೆ.

ಐಸಿಸಿ ಕ್ರಿಕೆಟ್​ ಟೂರ್ನಿಗಳು ಅತಿ ಹೆಚ್ಚು ಜನಪ್ರಿಯವಾಗಿದೆ. ಆದರೆ, ಇದರಲ್ಲಿ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೋಡಲ್ಪಡುವ ಪಂದ್ಯ ಎಂದರೆ ಅದು ಭಾರತ ಮತ್ತು ಪಾಕಿಸ್ತಾನ ಪಂದ್ಯ. ಭಾರತ ಮತ್ತು ಪಾಕಿಸ್ತಾನ ದೇಶದ ನಡುವ ದ್ವಿಪಕ್ಷೀಯ ಪಂದ್ಯಗಳು ಆಯೋಜನೆ ಆಗದಿರುವ ಕಾರಣ ಐಸಿಸಿ ನಡೆಸುವ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಎದುರಾಗುತ್ತವೆ. ಹೀಗಾಗಿ ಈ ತಂಡಗಳ ಫೈಟ್​ಗೆ ಜಗತ್ತೇ ಕಣ್ತೆರೆಯುತ್ತದೆ.

2023ರ ವಿಶ್ವಕಪ್​ನಲ್ಲಿ ಭಾರತ ತಂಡ ಪಾಕಿಸ್ತಾನ ತಂಡದ ಜೊತೆ ಗುಜರಾತ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಕ್ಟೋಬರ್​ 15 ರಂದು ಪಂದ್ಯವನ್ನು ಆಡಲಿದೆ. ಅತಿ ಹೆಚ್ಚು ಅಂದರೆ 1,32,000 ಜನ ಪ್ರೇಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರುವ ಕ್ರಿಡಾಂಗಣ ಇದಾಗಿದ್ದು, ಪಂದ್ಯಕ್ಕೆ ಮೈದಾನ ತುಂಬುವುದಂತೂ ಖಂಡಿತಾ. ಭಾರತ - ಪಾಕಿಸ್ತಾನದ ನಡುವೆ ಪುರುಷರ ವಿಶ್ವಕಪ್‌ನ ಎಂಟನೇ ಮುಖಾಮುಖಿ ಇದಾಗಿದೆ.

ಭಾರತ ಮತ್ತು ಪಾಕಿಸ್ತಾನ ಈ ಹಿಂದೆ ಏಳು ಬಾರಿ ಮುಖಾಮುಖಿಯಾಗಿದ್ದವು 1992, 1996, 1999, 2003, 2011, 2015 ಮತ್ತು 2019 ರಲ್ಲಿ. ಭಾರತವು ಹಿಂದಿನ ಏಳು ಮುಖಾಮುಖಿಗಳಲ್ಲಿ ಗೆದ್ದಿದೆ. ಭಾರತ ಇತ್ತೀಚಿನ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೋಲನುಭವಿಸಿದೆ.

ವಿರಾಟ್ ಕೊಹ್ಲಿಯ ಅವಿಸ್ಮರಣೀಯ ಆಟದಿಂದಾಗಿ 2022 ರ ಟಿ20 ವಿಶ್ವಕಪ್​ನಲ್ಲಿ ಭಾರತ ಗೆಲುವು ಸಾಧಿಸಿತ್ತು. ಇದರಿಂದ ಭಾರತ 2021ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧದ 10ರನ್ ನಿಂದ ಸೋಲನುಭವಿಸಿದ್ದ ಸೇಡನ್ನು ತೀರಿಸಿಕೊಂಡಿತ್ತು. 2019 ರಲ್ಲಿ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್‌ನಲ್ಲಿ ಈ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದು, ರೋಹಿತ್ ಶರ್ಮಾ ಅವರ ಅದ್ಭುತ 113 ಎಸೆತಗಳ 140 ರ ಹಿನ್ನೆಲೆಯಲ್ಲಿ ಭಾರತ 336/5 ಅನ್ನು ಗಳಿಸಿತು. ಮಳೆಯಿಂದಾಗಿ ಪಂದ್ಯದ 10 ಓವರ್​ ಕಡಿತ ಮಾಡಲಾಯಿತು. ಪಾಕಿಸ್ತಾನಕ್ಕೆ ಡಿಎಲ್​ಎಸ್​​ ನಿಯಮದಂತೆ 40 ಓವರ್​ನಲ್ಲಿ 301 ರನ್ ಗಳಿಸುವಂತೆ ಗುರಿಯನ್ನು ನೀಡಲಾಗಿತ್ತು. ಪಾಕಿಸ್ತಾನ ನಿಗದಿತ ಓವರ್​ನಲ್ಲಿ 6 ವಿಕೆಟ್​ಗೆ 212 ರನ್​ ಗಳಿಸಿತ್ತು.

2011ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿಯಾಗಿತ್ತು. ಮೊಹಾಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಪಾಕ್​ನ್ನು 29 ರನ್​ನಿಂದ ಮಣಿಸಿತ್ತು. ಸಚಿನ್ ತೆಂಡೂಲ್ಕರ್ ಭಾರತದ ಪರ 85 ವಿಜಯದ ಆಟ ಆಡಿದ್ದರು. ಭಾರತ 2011 ವಿಶ್ವಕಪ್​ ಫೈನಲ್​ನಲ್ಲಿ ಶ್ರೀಲಂಕಾವನ್ನು ಭಾರತ ಎದುರಿಸಿ ಜಯ ಸಾಧಿಸಿತ್ತು. ಈ ವರ್ಷ ಮತ್ತೆ ಭಾರತದಲ್ಲಿ ಪಂದ್ಯ ನಡೆಯುತ್ತಿದ್ದು 10 ವರ್ಷಗಳಿಂದ 8 ಐಸಿಸಿ ಕಪ್​ಗಳನ್ನು ಸೋತಿರುವ ಭಾರತಕ್ಕೆ ಈ ವಿಶ್ವಕಪ್​ ಗೆಲ್ಲುವ ಗುರಿ ಇದೆ.

ಇದನ್ನೂ ಓದಿ: World cup 2023: ಅಕ್ಟೋಬರ್ 5 ರಿಂದ ವಿಶ್ವಕಪ್​​​ ಆರಂಭ.. ಗುಜರಾತ್​ ಮೈದಾನದಲ್ಲಿ ಇಂಡೋ-ಪಾಕ್​ ಮ್ಯಾಚ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.