ETV Bharat / sports

ವಿರಾಟ್​ ಕೊಹ್ಲಿ ಜನ್ಮದಿನದಂದು ಈಡನ್​ಗಾರ್ಡನ್​ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಪಂದ್ಯ; ವಿಶೇಷ ಸಿದ್ಧತೆ - ETV Bharath Karnataka

ನ.5 ರಂದು ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ಕೋಲ್ಕತ್ತಾದ ಈಡನ್​​ಗಾರ್ಡನ್‌ನಲ್ಲಿ ಎದುರಿಸಲಿದೆ. ಅದೇ ದಿನ ವಿರಾಟ್​ ಕೊಹ್ಲಿ ಜನ್ಮದಿನವೂ ಆಗಿರುವುದರಿಂದ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Etv Bharat
Etv Bharat
author img

By ETV Bharat Karnataka Team

Published : Oct 30, 2023, 10:53 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಟೀಮ್​ ಇಂಡಿಯಾದ ಮಾಜಿ ನಾಯಕ, ವಿಶ್ವ ಖ್ಯಾತಿಯ ಆಟಗಾರ ವಿರಾಟ್​ ಕೊಹ್ಲಿ ಜನ್ಮದಿನದಂದು ವಿಶ್ವಕಪ್​ ಪಂದ್ಯ ನಡೆಯಲಿರುವ ಕಾರಣ ವಿಶೇಷ ಆಚರಣೆಗೆ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಸಿದ್ಧತೆ ನಡೆಸಿದೆ. ನವೆಂಬರ್​ 5ರಂದು ಕಿಂಗ್​ ಕೊಹ್ಲಿ 36ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅಂದು ಕೋಲ್ಕತ್ತಾದ ಈಡನ್​ಗಾರ್ಡನ್​ ಮೈದಾನದಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರತ ಎದುರಿಸಲಿದೆ.

ಹೀಗಾಗಿ ಮೈದಾನಕ್ಕೆ ಬರುವ ಅಭಿಮಾನಿಗಳೊಂದಿಗೆ ವಿಶೇಷವಾಗಿ ವಿರಾಟ್​ ಕೊಹ್ಲಿ ಅವರ ಜನ್ಮದಿನ ಆಚರಿಸಲು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ನಿರ್ಧರಿಸಿದೆ. ಬಾಲಿವುಡ್ ಗಾಯಕಿ ಶಿಲ್ಪಾ ರಾವ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಶಿಲ್ಪಾ ಇತ್ತೀಚೆಗೆ 'ಜವಾನ್' ಚಿತ್ರದ 'ಚಲೇಯ' ಹಾಡು ಹಾಡಿದ್ದು ಜನಮೆಚ್ಚುಗೆಗೆ ಪಾತ್ರವಾಗಿತ್ತು. ಶಿಲ್ಪಾ ಜನಪ್ರಿಯ ಹಿಂದಿ ಚಲನಚಿತ್ರಗಳಾದ 'ಬಚ್ನಾ ಏ ಹಸೀನೋ', 'ಧೂಮ್ 3' ಮತ್ತು ಚಿತ್ರಗಳಲ್ಲಿ ಹಾಡಿದ್ದಾರೆ.

ವಿರಾಟ್​ ಜನ್ಮದಿನದ ಪ್ರಯುಕ್ತ ಸಂಗೀತ ಕಾರ್ಯಕ್ರಮದ ಜೊತೆಗೆ ಲೇಸರ್​​ ಲೈಟ್​ ಪ್ರದರ್ಶನ, ಕ್ರೀಡಾಂಗಣದ ಮೇಲೆ ಅದ್ಭುತವಾದ ಪಟಾಕಿ ಪ್ರದರ್ಶನ. ಹಾಗೆಯೇ ಮೈದಾನದಲ್ಲಿ ವಿಶೇಷವಾಗಿ ಕೇಕ್​ ಕತ್ತರಿಸುವ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ. ಈ ಎಲ್ಲಾ ವಿಚಾರಗಳನ್ನು ಐಸಿಸಿ ಮುಂದೆ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಸಲ್ಲಿಸಿದ್ದು ಇದಕ್ಕೆ ಒಪ್ಪಿಗೆ ಇನ್ನಷ್ಟೇ ಸಿಗಬೇಕಿದೆ.

ಅಲ್ಲದೇ ಹುಟ್ಟುಹಬ್ಬದ ಅಂಗವಾಗಿ ಪ್ರೇಕ್ಷಕರಿಗೆ ವಿರಾಟ್‌ ಅವರ ಸುಮಾರು 70,000 ಮಾಸ್ಕ್​ ವಿತರಣೆ, ವಿರಾಟ್​ಗೆ ಹುಟ್ಟುಹಬ್ಬದ ವಿಶೇಷ ಉಡುಗೊರೆ, ಹಾಗೆಯೇ ವಿರಾಟ್​ಗಾಗಿ ಬೆಳ್ಳಿಯ ಸ್ಮರಣಿಕೆ ಸಿದ್ಧಪಡಿಸಲಾಗಿದೆ. ಸಿಎಬಿ 70,000 ಪ್ರೇಕ್ಷಕರಿಗೆ ಕೇಕ್ ವಿತರಿಸಲು ವ್ಯವಸ್ಥೆ ಮಾಡಲು ಬಯಸಿತ್ತು. ಇದಕ್ಕೆ ಐಸಿಸಿ ಸಮ್ಮತಿಸಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಈಡನ್ ಗಾರ್ಡನ್‌ನಲ್ಲಿರುವ ದೊಡ್ಡ ಸ್ರ್ಕೀನ್​ನಲ್ಲಿ ವಿಶೇಷ ಕೊಡುಗೆ ನೀಡಲು ಚಿಂತಿಸಲಾಗಿದೆ.

ಶತಕದ ದಾಖಲೆ ನಿರೀಕ್ಷೆ: ಪ್ರಸ್ತುತ ವಿಶ್ವಕಪ್​ನಲ್ಲಿ ಅದ್ಭುತ ಫಾರ್ಮ್​ನಲ್ಲಿರುವ ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾದ ಆಟಗಾರರ ಪೈಕಿ ಎರಡನೇ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ. ಈಗಾಗಲೇ ವಿಶ್ವಕಪ್​ನಲ್ಲಿ ಒಂದು ಶತಕ ಮಾಡಿರುವ ವಿರಾಟ್​ ಇನ್ನು ಒಂದು 100 ರನ್​ ಮಾಡಿದಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಸಚಿನ್​ ತೆಂಡೂಲ್ಕರ್ ಅವರ ದಾಖಲೆ ಸರಿಗಟ್ಟಲಿದ್ದಾರೆ. ಅವರ ಈ ಶತಕಕ್ಕಾಗಿ ವಿಶ್ವ ಕ್ರಿಕೆಟ್​ ಅಭಿಮಾನಿಗಳು ಕಾತರದಿಂದ ಕಾಯುತ್ತಿದೆ. ಆ ಶತಕವನ್ನು ನವೆಂಬರ್​ 2 ರಂದು ಲಂಕಾ ವಿರುದ್ಧ ವಾಂಖೆಡೆಯಲ್ಲಿ ಸಿಡಿಸುತ್ತಾರಾ ಅಥವಾ ಜನ್ಮದಿನದಂದೇ ಈ ದಾಖಲೆ ಮಾಡ್ತಾರಾ? ಎಂಬ ಕುತೂಹಲ ಎಲ್ಲರಲ್ಲಿದೆ.

ಇದನ್ನೂ ಓದಿ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಪಾಕಿಸ್ತಾನಕ್ಕೆ ಸತತ ಸೋಲು: ಕೋಚ್​ ಗ್ರಾಂಟ್ ಬ್ರಾಡ್‌ಬರ್ನ್ ಕೊಟ್ಟ ಕಾರಣ ಇದು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.