ಓವಲ್(ನ್ಯೂಜಿಲ್ಯಾಂಡ್): ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ಗೆಲುವಿನ ನಾಗಾಲೋಟ ಮುಂದುವರೆದಿದೆ. ಬಲಿಷ್ಠ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ರೋಚಕ ಗೆಲುವು ದಾಖಲು ಮಾಡಿದ್ದು, ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.
-
WEST INDIES WIN BY 7 RUNS! 👏
— ICC (@ICC) March 9, 2022 " class="align-text-top noRightClick twitterSection" data="
What a nail-biting finish. Incredible! 🔥#CWC22 pic.twitter.com/izEGqaZSaI
">WEST INDIES WIN BY 7 RUNS! 👏
— ICC (@ICC) March 9, 2022
What a nail-biting finish. Incredible! 🔥#CWC22 pic.twitter.com/izEGqaZSaIWEST INDIES WIN BY 7 RUNS! 👏
— ICC (@ICC) March 9, 2022
What a nail-biting finish. Incredible! 🔥#CWC22 pic.twitter.com/izEGqaZSaI
ನ್ಯೂಜಿಲ್ಯಾಂಡ್ನ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 7ರನ್ಗಳ ಅಂತರದಿಂದ ಗೆಲುವು ದಾಖಲು ಮಾಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆರಿಬಿಯನ್ ತಂಡ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 225ರನ್ಗಳಿಕೆ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ಡೊಟಿನ್ 31ರನ್ ಮತ್ತು ಮ್ಯಾಥಿವ್ಸ್ 45ರನ್ಗಳ ಮೂಲಕ ಮೊದಲ ವಿಕೆಟ್ಗೆ 81ರನ್ಗಳ ಉತ್ತಮ ಅಡಿಪಾಯ ಹಾಕಿದರು. ಇದರ ಬೆನ್ನಲ್ಲೇ ಇಂಗ್ಲೆಂಡ್ ಬೌಲರ್ ಮೆಲುಗೈ ಸಾಧಿಸಿ 98 ರನ್ಗಳಿಸುವ ವೇಳೆಗೆ ಪ್ರಮುಖ ನಾಲ್ಕು ವಿಕೆಟ್ ಪಡೆದುಕೊಂಡಿತು.
ಮಧ್ಯಮ ಕ್ರಮಾಂಕದಲ್ಲಿ ಒಂದಾದ ವಿಕೆಟ್ ಕೀಪರ್ ಕ್ಯಾಂಪ್ಬೆಲ್ಲೆ 66ರನ್ ಹಾಗೂ ಚೆಡಿಯನ್ ಅಜೇಯ 49ರನ್ಗಳಿಕೆ ಮಾಡಿ ತಂಡ 200ರ ಗಡಿ ದಾಟುವಂತೆ ಮಾಡಿದರು. ಇಂಗ್ಲೆಂಡ್ ಪರ ಎಕ್ಲೆಸ್ಟೋನ್ ತಲಾ 3 ವಿಕೆಟ್ ಪಡೆದುಕೊಂಡರೆ, ಸಿವರ್ 1 ವಿಕೆಟ್ ಕಿತ್ತರು.
226ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಆರಂಭದಲ್ಲೇ 12ರನ್ಗಳಿಸಿದ್ದ ಹಿಲ್ ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಕ್ಯಾಪ್ಟನ್ ನೈಟ್ 5ರನ್, ಸಿವರ್ 2, ಜಾನ್ಸ್ 1 ರನ್ಗಳಿಕೆ ಮಾಡಿ ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ವೈಟ್ 33ರನ್ ಹಾಗೂ ಸೊಪಿಯಾ 38 ರನ್ಗಳಿಕೆ ಮಾಡಿ ತಂಡಕ್ಕೆ ಚೇತರಿಕೆ ಮಾಡುವ ಕೆಲಸ ಮಾಡಿದರೂ, ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ವೆಸ್ಟ್ ಇಂಡೀಸ್ ಯಶಸ್ವಿಯಾಯಿತು.
8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಎಕ್ಲೆಸ್ಟೋನ್ 33ರನ್ ಹಾಗೂ ಕೆಟ್ ಕ್ರಾಸ್ 27ರನ್ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸುವ ಕೆಲಸ ಮಾಡುವ ಜವಾಬ್ದಾರಿ ಹೊತ್ತುಕೊಂಡರು. ಆದರೆ, ವೆಸ್ಟ್ ಇಂಡೀಸ್ನ ಅನಿಸಾ ಮೊಹಮ್ಮದ್ ಒಂದೇ ಓವರ್ನಲ್ಲಿ 2 ವಿಕೆಟ್ ಪಡೆದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಯದಾಗಿ ಇಂಗ್ಲೆಂಡ್ ತಂಡ ತನ್ನೆಲ್ಲ ವಿಕೆಟ್ ಕಳೆದುಕೊಂಡು 218ರನ್ಗಳಿಕೆ ಮಾಡುವಲ್ಲಿ ಮಾತ್ರ ಯಶಸ್ವಿಯಾಯಿತು.
ವೆಸ್ಟ್ ಇಂಡೀಸ್ ಪರ ಕಾನೆಲ್ 3 ವಿಕೆಟ್, ಮ್ಯಾಥೂಸ್ಸ್, ಅನಿಸಾ ತಲಾ 2 ವಿಕೆಟ್ ಪಡೆದುಕೊಂಡರೆ, ಅಲೈನಿ ಹಾಗೂ ಟೈಲರ್ 1 ವಿಕೆಟ್ ಕಿತ್ತರು. ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.