ETV Bharat / sports

ಮಹಿಳಾ ವಿಶ್ವಕಪ್: ಕಿವೀಸ್ ವಿರುದ್ಧ​ 62 ರನ್​ಗಳ ಹೀನಾಯ ಸೋಲು ಕಂಡ ಭಾರತ

author img

By

Published : Mar 10, 2022, 3:31 PM IST

ಭಾರತ ಮಹಿಳಾ ತಂಡ ಕಿವೀಸ್​ ವಿರುದ್ಧ ತನ್ನ ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದು, ಇಂದು ನಡೆದ ವಿಶ್ವಕಪ್​ ಪಂದ್ಯದಲ್ಲಿ 62 ರನ್​ಗಳಿಂದ ಶರಣಾಗಿದೆ.

ICC Women's World Cup
ಭಾರತ vs ನ್ಯೂಜಿಲ್ಯಾಂಡ್​

ಹ್ಯಾಮಿಲ್ಟನ್: ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್​ನ ತನ್ನ 2ನೇ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್​ ವಿರುದ್ಧ​ ವಿರುದ್ಧ 62 ರನ್​ಗಳ ಹೀನಾಯ ಸೋಲು ಕಂಡಿತು.

ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಕಿವೀಸ್‌ ತಂಡದ ಅನುಭವಿ ಬ್ಯಾಟರ್​​ ಆ್ಯಮಿ ಸ್ಯಾಟರ್ಥ್​ವೇಟ್​ 75(84 ಎಸೆತ) ಅಮೆಲಿಯಾ ಕೆರ್​ 50(64 ಎಸೆತ) ಹಾಗೂ ಕೇಟಿ ಮಾರ್ಟಿನ್ 41(51 ಎಸೆತ) ರನ್​ಗಳ ನೆರವಿನಿಂದ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 260 ರನ್​ಗಳಿಸಿತ್ತು.

ಭಾರತದ ಪರ ಯುವ ವೇಗಿ ಪೂಜಾ ವಸ್ತ್ರಾಕರ್​ 34ಕ್ಕೆ 4 ವಿಕೆಟ್​ ಪಡೆದರೆ, ಗಾಯಕ್ವಾಡ್ 46ಕ್ಕೆ 2, ಗೋಸ್ವಾಮಿ 41ಕ್ಕೆ 1 ವಿಕೆಟ್​ ಪಡೆದರು.

261ರನ್​ಗಳ ಗುರಿ ಪಡೆದ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 198ಕ್ಕೆ ಸರ್ವಪತನ ಕಂಡಿತು.

ಹರ್ಮನ್​ಪ್ರೀತ್ ಕೌರ್​ ಹೊರತುಪಡಿಸಿ ಬೇರೆ ಯಾವ ಬ್ಯಾಟರ್​ಗಳೂ ಕೂಡಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾದರು. ನಾಯಕಿ ಮಿಥಾಲಿ ರಾಜ್​ 56 ಎಸೆತಗಳಲ್ಲಿ 31, ಆರಂಭಿಕ ಬ್ಯಾಟರ್ ಯಸ್ತಿಕ ಭಾಟಿಯಾ 59 ಎಸೆತಗಳಲ್ಲಿ 29 ರನ್​ಗಳಿಸಿದರು.

ಆರಂಭದಿಂದಲೂ ಅತಿ ನಿಧಾನಗತಿ ಬ್ಯಾಟಿಂಗ್ ಮೊರೆ ಹೋದ ಭಾರತೀಯ ಮಹಿಳಾ ತಂಡ ಅಗತ್ಯಕ್ಕಿಂತಲೂ ಹೆಚ್ಚಿನ ಒತ್ತಡವನ್ನು ಹೇರಿಕೊಂಡು ವಿಕೆಟ್​ ಒಪ್ಪಿಸಿದರು. ಆರಂಭದ ನಾಲ್ಕು ಬ್ಯಾಟರ್​ಗಳು ರನ್​ರೇಟ್​ಗೆ ತಕ್ಕಂತೆ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. ಯಸ್ತಿಕಾ 47.4, ಮಂಧಾನ 28.5, ದೀಪ್ತಿ ಶರ್ಮಾ 38.4 ಮಿಥಾಲಿ 55.36ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿ ಹೆಚ್ಚು ಎಸೆತಗಳನ್ನು ಪೋಲು ಮಾಡಿದರು.

ಕೌರ್​ 63 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಸಹಿತ 71 ರನ್​ಗಳಿಸಿದರು. ಇವರೂ ಕೂಡ ಆರಂಭದಲ್ಲಿ ಸಾಕಷ್ಟು ಎಸೆತಗಳನ್ನು ಡಾಟ್​ ಮಾಡಿದ್ದರು.

ಆತಿಥೇಯ ತಂಡದ ಪರ ಲೀ ತಹುಹು 10 ಓವರ್​ಗಳಲ್ಲಿ 17 ರನ್​ ನೀಡಿ 3 ವಿಕೆಟ್​ ಪಡೆದರು. ಹೇಲಿ ಜಾನ್ಸೆನ್​ 30ಕ್ಕೆ2, ಅಮೆಲಿಯಾ ಕೆರ್​ 56ಕ್ಕೆ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ: ಐಸಿಸಿಯ 'ತಿಂಗಳ ಆಟಗಾರ ಪ್ರಶಸ್ತಿ'ಗೆ ಶ್ರೇಯಸ್, ಮಿಥಾಲಿ, ದೀಪ್ತಿ ನಾಮನಿರ್ದೇಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.