ಹೈದರಾಬಾದ್: ಐಸಿಸಿ ನೀಡಿದ ಹಾಲ್ ಆಫ್ ಫೇಮ್ ಗೌರವ ಈ ವರ್ಷ ಭಾರತ ಇಬ್ಬರು ಪ್ಲೇಯರ್ಗಳಿಗೆ ಸಿಕ್ಕಿದೆ. ಭಾರತದ ಡೈನಾಮಿಕ್ ಓಪನರ್ ವೀರೇಂದ್ರ ಸೆಹ್ವಾಗ್, ಮಾಜಿ ಭಾರತೀಯ ಮಹಿಳಾ ಕ್ರಿಕೆಟ್ ಟೆಸ್ಟ್ ನಾಯಕಿ ಡಯಾನಾ ಎಡುಲ್ಜಿ ಈ ಗೌರವಕ್ಕೆ ಸ್ವೀಕರಿಸಿದ ಭಾರತೀಯರು. ಇವರ ಜೊತಗೆ ಶ್ರೀಲಂಕಾದ ಮಾಜಿ ಸ್ಟಾರ್ ಬ್ಯಾಟರ್ ಅರವಿಂದ ಡಿ ಸಿಲ್ವಾ ಸಹ ಸೇರಿದ್ದಾರೆ.
-
A trailblazer on and off the field 🌟
— ICC (@ICC) November 13, 2023 " class="align-text-top noRightClick twitterSection" data="
More on Diana Edulji's pioneering career 📲 https://t.co/FXjqkNDF7k pic.twitter.com/GpGzKNe6vM
">A trailblazer on and off the field 🌟
— ICC (@ICC) November 13, 2023
More on Diana Edulji's pioneering career 📲 https://t.co/FXjqkNDF7k pic.twitter.com/GpGzKNe6vMA trailblazer on and off the field 🌟
— ICC (@ICC) November 13, 2023
More on Diana Edulji's pioneering career 📲 https://t.co/FXjqkNDF7k pic.twitter.com/GpGzKNe6vM
ವನಿತೆಯರ ಕ್ರಿಕೆಟ್ ಟೆಸ್ಟ್ ನಾಯಕಿ ಡಯಾನಾ ಎಡುಲ್ಜಿ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ಮೊದಲ ಭಾರತದ ಆಟಗಾರ್ತಿ ಎಂಬ ಖ್ಯಾತಿಯನ್ನು ಪಡೆದರು. ಐಸಿಸಿ ಹಾಲ್ ಆಫ್ ಫೇಮ್‌ನಲ್ಲಿರುವ ಗೌರವಾನ್ವಿತ ಕ್ರಿಕೆಟಿಗರ ಒಟ್ಟು ಸಂಖ್ಯೆ 112ಕ್ಕೆ ಏರಿಕೆ ಆಗಿದೆ. ಭಾರತವು ಈ ಪಟ್ಟಿಯಲ್ಲಿ ಎಂಟು ಆಟಗಾರರನ್ನು ಹೊಂದಿದೆ, ಸುನಿಲ್ ಗವಾಸ್ಕರ್, ಬಿಶನ್ ಸಿಂಗ್ ಬೇಡಿ, ಕಪಿಲ್ ದೇವ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿನೂ ಮಂಕಡ್ ಮತ್ತು ಈಗ ಡಯಾನಾ ಎಡುಲ್ಜಿ ಮತ್ತು ವೀರೇಂದ್ರ ಸೆಹ್ವಾಗ್ ಸೇರ್ಪಡೆ ಆಗಿದ್ದಾರೆ.
ಮೂರು ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗಳಲ್ಲಿ ಡಯಾನಾ ಅವರ ನಾಯಕತ್ವ ಸೇರಿದಂತೆ ಮಹತ್ವದ ಕೊಡುಗೆಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಈ ಸಮಯದಲ್ಲಿ ನೆನಪು ಮಾಡಿಕೊಂಡಿದೆ. ಎಡುಲ್ಜಿ 1978 ಮತ್ತು 1993 ರಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು. ಆಕೆಯ ಕ್ರಿಕೆಟ್ ಮೈಲಿಗಲ್ಲುಗಳು ತನ್ನ ಎರಡನೇ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಮತ್ತು ಎಂಟು ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ ಗಮನಾರ್ಹವಾದ 64 ರನ್ ಕೊಟ್ಟು 6 ವಿಕೆಟ್ ಪಡೆದ ಬೆಸ್ಟ್ ಬೌಲಿಂಗ್ ಪ್ರದರ್ಶನ ಒಳಗೊಂಡಿವೆ.
"17 ವರ್ಷಗಳ ಅಂತಾರಾಷ್ಟ್ರೀಯ ಆಟದ ವೃತ್ತಿಜೀವನ ಮತ್ತು ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ದೇಶೀಯ ತಂಡವನ್ನು ಮುನ್ನಡೆಸಿದ ಸಾಧನೆಗಾಗಿ ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ಮೊದಲ ಭಾರತೀಯ ಮಹಿಳೆ ಎಡುಲ್ಜಿ" ಎಂದು ಐಸಿಸಿ ವಿವರಿಸಿದೆ.
-
🇮🇳 🇱🇰 🇮🇳
— ICC (@ICC) November 13, 2023 " class="align-text-top noRightClick twitterSection" data="
Three stars of the game have been added to the ICC Hall of Fame 🏅
Details 👇https://t.co/gLSJSU4FvI
">🇮🇳 🇱🇰 🇮🇳
— ICC (@ICC) November 13, 2023
Three stars of the game have been added to the ICC Hall of Fame 🏅
Details 👇https://t.co/gLSJSU4FvI🇮🇳 🇱🇰 🇮🇳
— ICC (@ICC) November 13, 2023
Three stars of the game have been added to the ICC Hall of Fame 🏅
Details 👇https://t.co/gLSJSU4FvI
ಅನಿರೀಕ್ಷಿತ ಘಟನೆ: ಈಟಿವಿ ಭಾರತ್ ಜೊತೆ ಮಾತನಾಡಿದ ಎಡುಲ್ಜಿ, ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್‌ನಲ್ಲಿ ತಮ್ಮ ಸೇರ್ಪಡೆ ಸಂಪೂರ್ಣವಾಗಿ ಅನಿರೀಕ್ಷಿತವಾಗಿತ್ತು ಎಂದಿದ್ದಾರೆ. "ಇದು ನನಗೆ ಮಾತ್ರವಲ್ಲ ಭಾರತೀಯ ಮಹಿಳಾ ಕ್ರಿಕೆಟ್ ಮತ್ತು ಬಿಸಿಸಿಐಗೆ ದೊಡ್ಡ ಗೌರವವಾಗಿದೆ. ಈ ಗೌರವಕ್ಕಾಗಿ ನಾನು ಐಸಿಸಿ ಮತ್ತು ಹಾಲ್ ಆಫ್ ಫೇಮ್ ಮತದಾನ ಸಮಿತಿಗೆ ನನ್ನ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಇದು ಸಂಪೂರ್ಣವಾಗಿ ಅನಿರೀಕ್ಷಿತವಾಗಿದೆ. ನನ್ನೊಂದಿಗೆ ನಿಂತು ನನ್ನನ್ನು ರೂಪಿಸಿದ ಎಲ್ಲರಿಗೂ ನಾನು ಇದನ್ನು ಅರ್ಪಿಸುತ್ತೇನೆ" ಎಂದು ಅವರು ಹೇಳಿದರು.
ಮಹಿಳಾ ಕ್ರಿಕೆಟ್ನ ಹೆಮ್ಮೆಯ ಕ್ಷಣ: "ನಮ್ಮ ಕಾಲದಲ್ಲಿ ಮಾಧ್ಯಮದ ಕೊರತೆ ಸೇರಿದಂತೆ ಹಲವಾರು ಸವಾಲುಗಳನ್ನು ನಾವು ಎದುರಿಸಿದ್ದೇವೆ. ಆದರೆ, ನಮ್ಮ ದೇಶ ಮತ್ತು ಕ್ರಿಕೆಟ್‌ಗಾಗಿ ಎಲ್ಲವನ್ನೂ ಮಾಡಲು ನಾವು ಉತ್ಸಾಹ ಹೊಂದಿದ್ದೆವು. ಐಸಿಸಿಯಿಂದ ಬಂದಿರುವ ಮನ್ನಣೆಯು ಇಡೀ ಮಹಿಳಾ ಕ್ರಿಕೆಟ್ ಹೆಮ್ಮೆಯ ಕ್ಷಣವಾಗಿದೆ. ಹಿರಿಯ ವನಿತೆಯರ ತಂಡವೂ 19 ವರ್ಷದೊಳಗಿನವರ ತಂಡದಂತೆ ಐಸಿಸಿ ಟ್ರೋಫಿಯನ್ನು ಗೆಲ್ಲಲಿ" ಎಂದು ಆಶಿಸಿದರು.
ವನಿತೆಯರಿಗೂ ವೃತ್ತಿಯಾಗಿ ಕ್ರಿಕೆಟ್: "ಈಗ ಹುಡುಗಿಯರು ಸಹ ಕ್ರಿಕೆಟ್ ಅನ್ನು ವೃತ್ತಿಯಾಗಿ ಮುಂದುವರಿಸಬಹುದು. ಪುರುಷರಂತೆ ಮಹಿಳೆಯರು ಹೆಜ್ಜೆ ಹಾಕಲು ವೇದಿಕೆ ಸಜ್ಜಾಗಿದೆ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ಭಾರತಕ್ಕೆ ಹೆಚ್ಚಿನ ಕೀರ್ತಿ ತರಲು ವೇದಿಕೆ ಸಿದ್ಧವಾಗಿದೆ. ಪರಿಶ್ರಮ ಮತ್ತು ಕೌಶಲ್ಯಗಳು ಇದ್ದಲ್ಲಿ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್ ಸೇರಿ ಮೂವರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ