ETV Bharat / sports

ಲಿಂಗಸಮಾನತೆಗೆ ಮನ್ನಣೆ: ಟಿ-20 ವಿಶ್ವಕಪ್​ನಿಂದ ಬ್ಯಾಟ್ಸ್​ಮನ್​ ಬದಲಿಗೆ ಬ್ಯಾಟರ್​ ಬಳಕೆಗೆ ಐಸಿಸಿ ನಿರ್ಧಾರ - ಲಿಂಗ ತಟಸ್ಥ ಪದ

ಕಳೆದ ತಿಂಗಳು ಮೆರಿಲ್ಬೋನ್​ ಕ್ರಿಕೆಟ್​ ಕ್ಲಬ್ ​(MCC) ಕ್ರಿಕೆಟ್​ ಸಂವಿದಾನದಲ್ಲಿ ಬ್ಯಾಟ್ಸ್​ಮನ್​ ಬದಲಿಗೆ ಬ್ಯಾಟರ್​ ಪದವನ್ನು ಬಳಸಲು ಬದಲಾವಣೆ ತಂದಿತ್ತು. ಆ ಬದಲಾವಣೆಯು ಮುಂದೆ ಎಲ್ಲಾ ಐಸಿಸಿ ಆಟದ ಪರಿಸ್ಥಿತಿಗಳಲ್ಲಿ ಪ್ರತಿಫಲಿಸಲಿದೆ.

ICC to replace 'batsman' with 'batter' from T20 WC onwards
ಟಿ20 ವಿಶ್ವಕಪ್​ನಿಂದ ಬ್ಯಾಟ್ಸ್​ಮನ್​ ಬದಲಿಗೆ ಬ್ಯಾಟರ್​ ಬಳಕೆಗೆ ಐಸಿಸಿ ನಿರ್ಧಾರ
author img

By

Published : Oct 7, 2021, 8:05 PM IST

Updated : Oct 7, 2021, 8:15 PM IST

ದುಬೈ: ಮುಂಬರುವ ಟಿ-20 ವಿಶ್ವಕಪ್​ನಿಂದ ಕ್ರಿಕೆಟ್​ನಲ್ಲಿ ಲಿಂಗ ಸಮಾನತೆಗಾಗಿ ಬ್ಯಾಟಿಂಗ್ ಮಾಡುವವರಿಗೆ ಬ್ಯಾಟ್ಸ್​ಮನ್ ಎಂದು ಬಳಸುವ ಬದಲು ಬ್ಯಾಟರ್​ ಎಂದು ಬಳಸುವುದಕ್ಕೆ ಗುರುವಾರ ಐಸಿಸಿ ನಿರ್ಧರಿಸಿದೆ. ಈ ಕ್ರಮವನ್ನು ಕ್ರೀಡೆಯಲ್ಲಿನ ನೈಸರ್ಗಿಕ ಮತ್ತು ಕ್ರೀಡೆಯ ಅತಿಯಾದ ವಿಕಾಸ ಎಂದು ವಿವರಿಸಿದೆ.

ಕಳೆದ ತಿಂಗಳು ಮೆರಿಲ್ಬೋನ್​ ಕ್ರಿಕೆಟ್​ ಕ್ಲಬ್ ​(MCC) ಕ್ರಿಕೆಟ್​ ಸಂವಿದಾನದಲ್ಲಿ ಬ್ಯಾಟ್ಸ್​ಮನ್​ ಬದಲಿಗೆ ಬ್ಯಾಟರ್​ ಪದವನ್ನು ಬಳಸಲು ಬದಲಾವಣೆ ತಂದಿತ್ತು. ಆ ಬದಲಾವಣೆಯು ಮುಂದೆ ಎಲ್ಲಾ ಐಸಿಸಿ ಎಲ್ಲಾ ಪಂದ್ಯಗಳಲ್ಲೂ ಬಳಕೆಯಾಗಲಿದೆ.

ಕಳೆದ ನಾಲ್ಕು ವರ್ಷಗಳಲ್ಲಿ 'ಬ್ಯಾಟ್ಸ್‌ಮನ್' ಪದ ಕ್ರಿಕೆಟ್​ನಿಂದ ದೂರ ಸರಿಯುತ್ತಿದೆ. ಬ್ಯಾಟರ್ ಪದವನ್ನು ನಿಯಮಿತವಾಗಿ ಕಾಮೆಂಟರಿಯಲ್ಲಿ ಮತ್ತು ವಿವಿಧ ಚಾನೆಲ್‌ಗಳಲ್ಲಿ ಬಳಸಲಾಗುತ್ತಿದೆ ಎಂದು ಐಸಿಸಿ ತಿಳಿಸಿದೆ.

ಈ ಕುರಿತು ಮಾತನಾಡಿರುವ ಐಸಿಸಿ ಸಿಇಒ ಜೆಫ್​ ಅಲಾಡೈಸ್​​, ಬ್ಯಾಟ್ಸ್​ಮನ್​ ಬದಲಿಗೆ ಬ್ಯಾಟರ್​ ಬಳಸಲು ಎಂಸಿಸಿ ತಂದಿರುವ ಕಾನೂನು ಐಸಿಸಿ ಸ್ವಾಗತಿಸುತ್ತದೆ ಎಂದಿದ್ದಾರೆ.

ಐಸಿಸಿ ಕೆಲವು ಸಮಯದಿಂದ ಬ್ಯಾಟರ್ ಎಂಬ ಪದವನ್ನು ನಮ್ಮ ಚಾನೆಲ್‌ಗಳಲ್ಲಿ ಮತ್ತು ಕಾಮೆಂಟರಿಯಲ್ಲಿ ಬಳಸುತ್ತಿದೆ. ಇದನ್ನು ಎಂಸಿಸಿ ಕ್ರಿಕೆಟ್ ನಿಯಮಗಳಲ್ಲಿ ಅಳವಡಿಸಿರುವುದನ್ನು ನಾವು ಸ್ವಾಗತಿಸುತ್ತೇವೆ ಮತ್ತು ಈ ಕಾನೂನುಗಳಿಂದ ನಮ್ಮ ಎಲ್ಲ ಆಟದ ಪರಿಸ್ಥಿತಿಗಳಲ್ಲಿ ಅನುಸರಿಸುತ್ತೇವೆ ಎಂದು ಅಲ್ಲಾರ್ಡೈಸ್ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಇದೊಂದು ಕ್ರಿಕೆಟ್​ನಲ್ಲಿನ ವಿಕಾಸ ಮತ್ತು ಇದೀಗ ನಮ್ಮ ಬ್ಯಾಟರ್​ಗಳು, ಬೌಲರ್​ಗಳು, ಪೀಲ್ಡರ್​ಗಳು ಮತ್ತು ವಿಕೆಟ್​ ಕೀಪರ್​ಗಳಂತೆಯೆ​ ಲಿಂಗ ತಟಸ್ಥರಾಗಲಿದ್ದಾರೆ. ಇದೊಂದು ಸಣ್ಣ ಬದಲಾವಣೆಯಾದರೂ ಕ್ರಿಕೆಟ್​ ನೋಡುವ ದೃಷ್ಟಿಕೋನದಲ್ಲಿ ಗಮನಾರ್ಹ ಪರಿಣಾಮ ಬೀರಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ:ಇನ್ಮುಂದೆ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್ ಪದದ ಬದಲಿಗೆ 'ಬ್ಯಾಟರ್'​ ಬಳಸಲು MCC ಘೋಷಣೆ: ಕಾರಣವೇನು?

Last Updated : Oct 7, 2021, 8:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.