ETV Bharat / sports

ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ರೋಹಿತ್, ಪಂತ್, ಅಶ್ವಿನ್​ಗೆ ಸ್ಥಾನ... ವಿಲಿಯಮ್ಸನ್​ ನಾಯಕ - ರವಿಚಂದ್ರನ್ ಅಶ್ವಿನ್​

ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್​ 2021ರಲ್ಲಿ 15 ಪಂದ್ಯಗಳಿಂದ ಬರೋಬ್ಬರಿ 6 ಶತಕಗಳ ಸಹಿತ 1708 ರನ್​ ಸಿಡಿಸಿ 4ನೇ ಕ್ರಮಾಂಕದಲ್ಲಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ಪರ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್​ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.

ICC Test Team of the Year 2021
ICC Test Team of the Year 2021
author img

By

Published : Jan 20, 2022, 4:43 PM IST

ದುಬೈ: ಭಾರತ ತಂಡದ ಆರಂಭಿಕ ಬ್ಯಾಟರ್​ ರೋಹಿತ್ ಶರ್ಮಾ, ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಆಫ್​ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಸಿಸಿ ಗುರುವಾರ ಘೋಷಿಸಿರುವ​ 2021ರ 'ಐಸಿಸಿ ವರ್ಷದ ಟೆಸ್ಟ್ ತಂಡ'ದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಈ 11ರ ಬಳಗವನ್ನು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಗೆದ್ದ ನ್ಯೂಜಿಲ್ಯಾಂಡ್​ ತಂಡದ ಕೇನ್​​ ವಿಲಿಯಮ್ಸನ್​ರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿದೆ.

ಆರಂಭಿಕರಾಗಿ ಶ್ರೀಲಂಕಾದ ದಿಮುತ್ ಕರುಣರತ್ನೆ7 ಪಂದ್ಯಗಳಲ್ಲಿ 4 ಶತಕಗಳ ಸಹಿತ 902 ರನ್​ಗಳಿಸಿದ್ದಾರೆ. ರೋಹಿತ್ ಶರ್ಮಾ 47.68ರ ಸರಾಸರಿಯಲ್ಲಿ 2 ಶತಕಗಳ ಸಹಿತ 906 ರನ್​, ಅದ್ದೂರಿ ಫಾರ್ಮ್​ನಲ್ಲಿರುವ ವಿಶ್ವದ ನಂಬರ್​ 1 ಬ್ಯಾಟರ್​ ಆಸ್ಟ್ರೇಲಿಯಾದ ಮಾರ್ನಸ್​ ಲಾಬುಶೇನ್ 5 ಪಂದ್ಯಗಳಿಂದ 526 ರನ್​ಗಳಿಸಿ ಮೊದಲ ಮೂರು ಕ್ರಮಾಂಕದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್​ 2021ರಲ್ಲಿ 15 ಪಂದ್ಯಗಳಿಂದ ಬರೋಬ್ಬರಿ 6 ಶತಕಗಳ ಸಹಿತ 1708 ರನ್​ ಸಿಡಿಸಿ 4ನೇ ಕ್ರಮಾಂಕದಲ್ಲಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ಪರ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್​ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

5ನೇ ಕ್ರಮಾಂದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಗೆದ್ದ ನ್ಯೂಜಿಲ್ಯಾಂಡ್​ ತಂಡದ ನಾಯಕ ಕೇನ್ ವಿಲಿಯಮ್ಸನ್​ ಇದ್ದಾರೆ. ಅವರೇ ಈ ತಂಡದ ನಾಯಕನಾಗಿಯೂ ಕೂಡ ನೇಮವಾಗಿದ್ದಾರೆ. ಕೀವಿಸ್ ಸ್ಟಾರ್ 2021ರಲ್ಲಿ 4 ಪಂದ್ಯಗಳಿಂದ 395 ರನ್​ಗಳಿಸಿದ್ದರು. 9 ಪಂದ್ಯಗಳಲ್ಲಿ 571 ರನ್​ಗಳಿಸಿರುವ ಪಾಕಿಸ್ತಾನದ ಫವಾದ್ ಆಲಮ್​ 6 ನೇ ಕ್ರಮಾಂಕದಲ್ಲಿದ್ದಾರೆ. ವಿಕೆಟ್ ಕೀಪರ್ ಸ್ಥಾನದಲ್ಲಿ ಭಾರತದ ರಿಷಭ್ ಪಂತ್ ಆಯ್ಕೆಯಾಗಿದ್ದಾರೆ. ಅವರು​ 12 ಪಂದ್ಯಗಳಲ್ಲಿ 748 ರನ್ ಮತ್ತು ಕೀಪಿಂಗ್​ನಲ್ಲಿ 39 ಬ್ಯಾಟರ್​ಗಳನ್ನು ಪೆವಿಲಿಯನ್​​ಗಟ್ಟಿದ್ದಾರೆ.

ಬೌಲರ್​ಗಳ ವಿಭಾದಲ್ಲಿ 9 ಪಂದ್ಯಗಳಿಂದ 54 ವಿಕೆಟ್ ಮತ್ತು 355 ರನ್​ಗಳಿಸಿರುವ ರವಿಚಂದ್ರನ್ ಅಶ್ವಿನ್, 5 ಪಂದ್ಯಗಳಿಂದ 27 ವಿಕೆಟ್ ಮತ್ತು 105 ರನ್​ಗಳಿಸಿರುವ ಕಿವೀಸ್​ನ ಕೈಲ್ ಜೇಮಿಸನ್​ ಹಾಗೂ ಪಾಕಿಸ್ತಾನದ ಹಸನ್ ಅಲಿ ಮತ್ತು ಶಾಹೀನ್ ಅಫ್ರಿದಿ ಅವಕಾಶ ಪಡೆದಿದ್ದಾರೆ. ಇವರಿಬ್ಬರು ಕ್ರಮವಾಗಿ 41 ಮತ್ತು 47 ವಿಕೆಟ್ ಪಡೆದಿದ್ದರು.

ಐಸಿಸಿ 2021ರ ಟೆಸ್ಟ್ ತಂಡ

ದಿಮುತ್ ಕರುಣರತ್ನೆ(ಶ್ರೀಲಂಕಾ), ರೋಹಿತ್ ಶರ್ಮಾ(ಭಾರತ), ಮಾರ್ನಸ್ ಲಾಬುಶೇನ್(ಆಸ್ಟ್ರೇಲಿಯಾ), ಜೋ ರೂಟ್​(ಇಂಗ್ಲೆಂಡ್​​), ಕೇನ್​ ವಿಲಿಯಮ್ಸನ್​(ನಾಯಕ,ನ್ಯೂಜಿಲ್ಯಾಂಡ್​​), ಫವಾದ್ ಆಲಮ್(ಪಾಕಿಸ್ತಾನ) ಮತ್ತು ರಿಷಭ್ ಪಂತ್(ಭಾರತ,ವಿಕೀ),ರವಿಚಂದ್ರನ್ ಅಶ್ವಿನ್(ಭಾರತ), ಕೈಲ್ ಜೇಮಿಸನ್​(ನ್ಯೂಜಿಲ್ಯಾಂಡ್),ಹಸನ್ ಅಲಿ(ಪಾಕಿಸ್ತಾನ) ಶಾಹೀನ್ ಅಫ್ರಿದಿ( ಪಾಕಿಸ್ತಾನ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.