ದುಬೈ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾಗವಹಿಸದಿದ್ದರೂ ಕೂಡಾ ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. 18 ತಿಂಗಳ ನಂತರ ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದು ಅಂತಿಮ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡಿದ ಅಜಿಂಕ್ಯ ರಹಾನೆ ಅವರ ರ್ಯಾಂಕಿಂಗ್ನಲ್ಲಿಯೂ ಏರಿಕೆಯಾಗಿದೆ. ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರ ಬ್ಯಾಟಿಂಗ್ ರ್‍ಯಾಂಕಿಂಗ್ ಹೆಚ್ಚಳವಾಗಿದೆ.
ಇಂಗ್ಲೆಂಡ್ನ ಓವೆಲ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿತು. ಆದರೆ ಕೆಲವು ಬ್ಯಾಟರ್‌ಗಳು ತಂಡದ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಐಸಿಸಿ ನವೀಕರಿಸಿರುವ ರ್ಯಾಂಕಿಂಗ್ನಲ್ಲಿ ಏರಿಕೆ ಕಂಡಿದ್ದಾರೆ. ಟೆಸ್ಟ್ ಚಾಂಪಿಯನ್ಶಿಪ್ನ ಎರಡು ಇನ್ನಿಂಗ್ಸ್ನಲ್ಲಿ ಅಜಿಂಕ್ಯ ರಹಾನೆ 135 ರನ್ ಗಳಿಸಿದ್ದಾರೆ. ರಹಾನೆ ಭಾರತ ಪರ ಅತಿ ಹೆಚ್ಚು ರನ್ ಗಳಿಸಿ ಬ್ಯಾಟರ್ ಆಗಿದ್ದಾರೆ. ಶ್ರೇಯಾಂಕದಲ್ಲಿ 588 ಅಂಕ ಪಡೆದು ರಹಾನೆ 37ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
-
A unique stat repeats itself after nearly 39 years in the latest @MRFWorldwide ICC Men’s Test Player Rankings 🤯
— ICC (@ICC) June 14, 2023 " class="align-text-top noRightClick twitterSection" data="
More 👇https://t.co/7sP4bhf19W
">A unique stat repeats itself after nearly 39 years in the latest @MRFWorldwide ICC Men’s Test Player Rankings 🤯
— ICC (@ICC) June 14, 2023
More 👇https://t.co/7sP4bhf19WA unique stat repeats itself after nearly 39 years in the latest @MRFWorldwide ICC Men’s Test Player Rankings 🤯
— ICC (@ICC) June 14, 2023
More 👇https://t.co/7sP4bhf19W
ವೇಗದ ಬೌಲಿಂಗ್ ಮತ್ತು ಬ್ಯಾಟಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ 6 ಸ್ಥಾನಗಳ ಏರಿಕೆ ಕಂಡು 94 ಶ್ರೇಯಾಂಕದಲ್ಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಶಾರ್ದೂಲ್ ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದರು. ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ ವಿಕೆಟ್ ಕೊಟ್ಟಿದ್ದರು. ಉಳಿದಂತೆ, 10ನೇ ಶ್ರೇಯಾಂಕದಲ್ಲಿ ರಿಷಬ್ ಪಂತ್ ಇದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಕ್ರಮವಾಗಿ 12,13 ಮತ್ತು 25ನೇ ಸ್ಥಾದಲ್ಲಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಶ್ವಿನ್ ಅಗ್ರ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಗಾಯದಿಂದ ಆಡದ ಬೂಮ್ರಾ ಎರಡು ಸ್ಥಾನಗಳ ಇಳಿಕೆ ಕಂಡು 8 ಹಾಗೂ ಜಡೇಜ 9ನೇ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್ ಶ್ರೇಯಾಂಕದಲ್ಲಿ ರವೀಂದ್ರ ಜಡೇಜ ಮೊದಲ ಸ್ಥಾನದಲ್ಲಿ ಮುಂದುವರೆದರೆ, ಅಶ್ವಿನ್ ಎರಡು ಮತ್ತು ಅಕ್ಷರ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ತ್ರಿವಳಿಗಳಿಗೆ ಅಗ್ರಸ್ಥಾನ: ಆಸ್ಟ್ರೇಲಿಯಾದ ಮೂವರು ಬ್ಯಾಟರ್‌ಗಳು ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದು, ಅಪರೂಪದ ಸಾಧನೆಯಾಗಿದೆ. ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಕ್ರಮವಾಗಿ ಟಾಪ್ ಮೂರರಲ್ಲಿದ್ದಾರೆ. ಟೆಸ್ಟ್ ಚಾಂಪಿಯನ್ಶಿಪ್ನ ಅಂತಿಮ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಮತ್ತು ಹೆಡ್ ಶತಕ ಗಳಿಸಿದ ಕಾರಣ ಆಸ್ಟ್ರೇಲಿಯಾ ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತ ಕಲೆಹಾಕಿತ್ತು. ಟ್ರಾವಿಸ್ ಹೆಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಆಸ್ಟ್ರೇಲಿಯಾದ ವಿಕೆಟ್‌ಕೀಪರ್ ಅಲೆಕ್ಸ್ ಕ್ಯಾರಿ 11 ಸ್ಥಾನ ಏರಿಕೆ ಕಂಡು 36ನೇ ಸ್ಥಾನ ಪಡೆದರೆ, ಸ್ಪಿನ್ನರ್ ನಾಥನ್ ಲಿಯಾನ್ ಎರಡು ಸ್ಥಾನ ಮೇಲೇರಿ ಆರನೇ ಶ್ರೇಯಾಂಕ ಮತ್ತು ಸ್ಕಾಟ್ ಬೋಲ್ಯಾಂಡ್ 6 ಸ್ಥಾನ ಮೇಲೇರಿ 36ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Worst bowling: 1 ಎಸೆತದಲ್ಲಿ 18 ರನ್, ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ದುಬಾರಿ ಬೌಲಿಂಗ್