ದುಬೈ: ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಭಾರತ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಶ್ರೇಯಾಂಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾ ಬ್ಯಾಟರ್ ಸ್ಟೀವ್ ಸ್ಮಿತ್ ಅವರು ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ರನ್ನು ಹಿಂದಿಕ್ಕೆ 3ನೇ ಸ್ಥಾನಕ್ಕೆ ಮರಳಿದ್ದಾರೆ.
4ನೇ ಆ್ಯಶಸ್ ಮತ್ತು ದಕ್ಷಿಣ ಆಫ್ರಿಕಾ ಹಾಗೂ ಭಾರತದ ನಡುವಿನ 2ನೇ ಟೆಸ್ಟ್ ಪಂದ್ಯ ಹಾಗೂ ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶಗಳ ನಡುವಿನ ಟೆಸ್ಟ್ ಸರಣಿಯ ನಂತರ ಕೆಲವು ಆಟಗಾರರ ಶ್ರೇಯಾಂಕದಲ್ಲಿ ಬದಲಾವಣೆ ಕಂಡುಬಂದಿದೆ.
-
🔼 Steve Smith overtakes Kane Williamson
— ICC (@ICC) January 12, 2022 " class="align-text-top noRightClick twitterSection" data="
🔼 Kyle Jamieson launches into third spot
The latest @MRFWorldwide ICC Men’s Test Player Rankings 👇
Full list: https://t.co/0D6kbTluOW pic.twitter.com/vXD07fPoES
">🔼 Steve Smith overtakes Kane Williamson
— ICC (@ICC) January 12, 2022
🔼 Kyle Jamieson launches into third spot
The latest @MRFWorldwide ICC Men’s Test Player Rankings 👇
Full list: https://t.co/0D6kbTluOW pic.twitter.com/vXD07fPoES🔼 Steve Smith overtakes Kane Williamson
— ICC (@ICC) January 12, 2022
🔼 Kyle Jamieson launches into third spot
The latest @MRFWorldwide ICC Men’s Test Player Rankings 👇
Full list: https://t.co/0D6kbTluOW pic.twitter.com/vXD07fPoES
ಆಸೀಸ್ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಒಂದು ಸ್ಥಾನ ಮೇಲೇರಿ 3ನೇ ಶ್ರೇಯಾಂಕ ಪಡೆದಿದ್ದಾರೆ. ಭಾರತದೆದುರು ಅಜೇಯ 96 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಹರಿಣಗಳ ನಾಯಕ ಡೀನ್ ಎಲ್ಗರ್(10) 4 ಸ್ಥಾನ ಏರಿಕೆ ಕಂಡು ಅಗ್ರ 10ಕ್ಕೆ ಪ್ರವೇಶಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಕಳೆದ ಆ್ಯಶಸ್ ಟೆಸ್ಟ್ನಲ್ಲಿ 2 ಶತಕ ಸಿಡಿಸಿದ್ದ ಉಸ್ಮಾನ್ ಖವಾಜ 26ನೇ ಸ್ಥಾನ ಪಡೆದಿದ್ದಾರೆ. ಲಾಬುಶೇನ್(924) ಹಾಗೂ ರೂಟ್(881) ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತದ ಪರ ರೋಹಿತ್ (781) ಮತ್ತು ಕೊಹ್ಲಿ(740) ಕ್ರಮವಾಗಿ 5 ಮತ್ತು 9ನೇ ಸ್ಥಾನ ಗಿಟ್ಟಿಸಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಕಿವೀಸ್ ಬೌಲರ್ ಕೈಲ್ ಜೇಮಿಸನ್ 8 ಸ್ಥಾನ ಬಡ್ತಿ ಪಡೆದು ಜೀವನಶ್ರೇಷ್ಠ 3ನೇ ಶ್ರೇಯಾಂಕ ಪಡೆದಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್(895) ಮತ್ತು ರವಿಚಂದ್ರನ್ ಅಶ್ವಿನ್(861) ಅಗ್ರ 2ರಲ್ಲಿ ಮುಂದುವರಿದಿದ್ದಾರೆ.
ಇದನ್ನೂ ಓದಿ:ಐಪಿಎಲ್ 2022: ರಿಟೈನ್ ಆಟಗಾರರನ್ನು ಘೋಷಿಸಲು ಹೊಸ ಫ್ರಾಂಚೈಸಿಗಳಿಗೆ ಜನವರಿ 22 ಡೆಡ್ಲೈನ್