ನವದೆಹಲಿ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲುವ ಮೂಲಕ ಟೆಸ್ಟ್ಗೆ ಬಾಸ್ ಆಗಿ ಹೊರಹೊಮ್ಮಿದ ಆಸ್ಟ್ರೇಲಿಯಾ, ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲೂ ಮೊದಲ ಮೂರು ಸ್ಥಾನಗಳನ್ನು ಆಕ್ರಮಿಸಿಕೊಂಡಿದೆ. ಒಂದೇ ದೇಶದ ಆಟಗಾರರು ಮೊದಲ ಮೂರು ಸ್ಥಾನ ಪಡೆದಿದ್ದು, ಟೆಸ್ಟ್ ಕ್ರಿಕೆಟ್ನಲ್ಲಿ 39 ವರ್ಷಗಳ ಬಳಿಕದ ಅಪರೂಪದ ದಾಖಲೆಯಾಗಿದೆ. ಇದೇ ವೇಳೆ 2 ವರ್ಷಗಳ ಬಳಿಕ ಟೆಸ್ಟ್ಗೆ ಮರಳಿ ಡಬ್ಲ್ಯೂಟಿಸಿಯಲ್ಲಿ ಭಾರತದ ಆಪತ್ಬಾಂಧವನಾಗಿದ್ದ ಅಜಿಂಕ್ಯ ರಹಾನೆ ರ‍್ಯಾಂಕಿಂಗ್ ಪಟ್ಟಿಯೊಳಗೆ ಪ್ರವೇಶ ಮಾಡಿದ್ದಾರೆ.
-
Reigning at the 🔝
— ICC (@ICC) June 14, 2023 " class="align-text-top noRightClick twitterSection" data="
Australian superstars occupy the top three @MRFWorldwide ICC Test Men's Batting Rankings positions after #WTC23 dominance 💪
More 👉 https://t.co/zfUfV5PuRO pic.twitter.com/nsbhYn8QND
">Reigning at the 🔝
— ICC (@ICC) June 14, 2023
Australian superstars occupy the top three @MRFWorldwide ICC Test Men's Batting Rankings positions after #WTC23 dominance 💪
More 👉 https://t.co/zfUfV5PuRO pic.twitter.com/nsbhYn8QNDReigning at the 🔝
— ICC (@ICC) June 14, 2023
Australian superstars occupy the top three @MRFWorldwide ICC Test Men's Batting Rankings positions after #WTC23 dominance 💪
More 👉 https://t.co/zfUfV5PuRO pic.twitter.com/nsbhYn8QND
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಬುಧವಾರ ಟೆಸ್ಟ್ ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆಸೀಸ್ ಬ್ಯಾಟರ್ಗಳು ವಿಶೇಷ ದಾಖಲೆ ಬರೆದಿದ್ದಾರೆ. ಡಬ್ಲ್ಯೂಟಿಸಿಯಲ್ಲಿ ತೋರಿದ ಅಮೋಘ ಪ್ರದರ್ಶನದಿಂದಾಗಿ ಮಾರ್ನಸ್ ಲಬುಶೇನ್ ಅಗ್ರಸ್ಥಾನ ಪಡೆದರೆ, ಸ್ಟೀವ್ ಸ್ಮಿತ್ 2ನೇ, ಟ್ರೇವಿಸ್ ಹೆಡ್ 3ನೇ ಕ್ರಮಾಂಕವನ್ನು ಪಡೆದುಕೊಂಡಿದ್ದಾರೆ. ಲಬುಶೇನ್ 903 ರೇಟಿಂಗ್ ಅಂಕ ಹೊಂದಿದ್ದರೆ, ಸ್ಮಿತ್ 885, ಹೆಡ್ 884 ಅಂಕ ಪಡೆದಿದ್ದಾರೆ.
ಇದಕ್ಕೂ ಮೊದಲು ಈ ಮೂವರೂ ಆಟಗಾರರು ಅಗ್ರ 10 ರೊಳಗೆ ಇದ್ದರು. ಟ್ರೇವಿಸ್ ಹೆಡ್ 6 ರಿಂದ 3 ನೇ ಸ್ಥಾನಕ್ಕೆ ಬಡ್ತಿ ಪಡೆದರೆ, 3 ರಲ್ಲಿದ್ದ ಸ್ಮಿತ್ 2 ಕ್ಕೆ ಜಿಗಿದಿದ್ದಾರೆ. ಅಗ್ರಸ್ಥಾನದಲ್ಲಿದ್ದ ಲಬುಶೇನ್ ಅಲ್ಲಿಯೇ ಮುಂದುವರಿದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಇನಿಂಗ್ಸ್ನಲ್ಲಿ ಶತಕ ಸಾಧನೆ ಮಾಡುವ ಮೂಲಕ ಸ್ಮಿತ್ ಮತ್ತು ಹೆಡ್ ಭಾರತವನ್ನು ಕಾಡಿದ್ದರು. ಎಡಗೈ ದಾಂಡಿಗ ಹೆಡ್ 163 ಮತ್ತು 18 ರನ್ ಮಾಡಿದರೆ, ಸ್ಮಿತ್ 121 ಮತ್ತು 34 ರನ್ ಗಳಿಸಿದ್ದರು. ಇದು ರೇಟಿಂಗ್ ಏರಿಕೆಗೆ ಕಾರಣವಾಗಿದೆ.
39 ವರ್ಷ ಬಳಿಕ ದಾಖಲೆ: ಟೆಸ್ಟ್ ಕ್ರಿಕೆಟ್ನಲ್ಲಿ ಒಂದೇ ದೇಶದ ಮೂವರು ಆಟಗಾರರು ಅಗ್ರ ಮೂರರಲ್ಲಿ ಕಾಣಿಸಿಕೊಂಡಿದ್ದು 1984 ರಲ್ಲಿ. ವೆಸ್ಟ್ ಇಂಡೀಸ್ನ ದೈತ್ಯರು ಈ ಸಾಧನೆ ಮಾಡಿದ್ದರು. ದಿಗ್ಗಜ ಆಟಗಾರರಾದ ಗ್ರಾರ್ಡನ್ ಗ್ರೀನಿಡ್ಜ್ 810 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದರೆ, ಕ್ಲೈವ್ ಲಾಯ್ಡ್(787 ರೇಟಿಂಗ್) 2ನೇ ಹಾಗೂ ಲ್ಯಾರಿ ಗೋಮ್ಸ್(773 ಅಂಕ) ಮೂರನೇ ಸ್ಥಾನ ಪಡೆದುಕೊಂಡಿದ್ದರು. ಈ ಸಾಧನೆಯನ್ನು ಆಸೀಸ್ ಆಟಗಾರರು 39 ವರ್ಷಗಳ ಬಳಿಕ ಸರಿಗಟ್ಟಿದ್ದಾರೆ.
ಪಟ್ಟಿಗೆ ಮರಳಿದ ಅನುಭವಿ ರಹಾನೆ: ಟೀಂ ಇಂಡಿಯಾದ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಮತ್ತು ವೇಗದ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಟೆಸ್ಟ್ ಶ್ರೇಯಾಂಕದೊಳಕ್ಕೆ ಪ್ರವೇಶ ಪಡೆದಿದ್ದಾರೆ. 2 ವರ್ಷಗಳಿಂದ ತಂಡದಿಂದ ಹೊರಬಿದ್ದಿದ್ದ ರಹಾನೆ ಡಬ್ಲ್ಯೂಟಿಸಿಯಲ್ಲಿ ಅದ್ಭುತ ಪ್ರದರ್ಶನ ನೀಡಿ, ತಮ್ಮನ್ನು ಸಾಬೀತು ಪಡಿಸಿಕೊಂಡಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಆಪತ್ಬಾಂಧವನಾಗಿ 89 ರನ್, 2ನೇ ಇನಿಂಗ್ಸ್ನಲ್ಲಿ 46 ರನ್ ಗಳಿಸಿದ್ದರು. ಇದು ಶ್ರೇಯಾಂಕ ಪಟ್ಟಿಗೆ ಮರಳಿಸಿದ್ದು, 37 ನೇ ಸ್ಥಾನ ಪಡೆದಿದ್ದಾರೆ. ಮೊಹಮ್ಮದ್ ಸಿರಾಜ್ 36ನೇ ಸ್ಥಾನ ಪಡೆದರೆ, ಶಾರ್ದೂಲ್ ಠಾಕೂರ್ 94ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಆರ್ ಅಶ್ವಿನ್ 860 ಅಂಕಗಳೊಂದಿಗೆ ನಂಬರ್ ಒನ್ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2023 - 25ರ ವೇಳಾಪಟ್ಟಿ ಪ್ರಕಟ : ಈ ಬಾರಿ 19 ಟೆಸ್ಟ್ ಆಡಲಿರುವ ಭಾರತ