ETV Bharat / sports

ಟಿ-20 ವಿಶ್ವಕಪ್​: ಮಿಂಚಿದ ಆಸೀಫ್ ಅಲಿ... ಆಫ್ಘಾನ್ ವಿರುದ್ಧ ಪಾಕ್​ಗೆ 5 ವಿಕೆಟ್​ಗಳ ಜಯ - ಐಸಿಸಿ ಟಿ-20 ವಿಶ್ವಕಪ್​

ರೋಚಕ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಪಾಕ್​ನ​ ಆಸೀಫ್​ ಅಲಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದ್ದಾರೆ. ಈ ಮೂಲಕ ಆಫ್ಘಾನ್ ವಿರುದ್ಧ 5 ವಿಕೆಟ್​ಗಳ ಗೆಲುವು ದಾಖಲು ಮಾಡಿದೆ.

ICC T20 World cup
ICC T20 World cup
author img

By

Published : Oct 29, 2021, 11:39 PM IST

ದುಬೈ: ಐಸಿಸಿ ಟಿ-20 ವಿಶ್ವಕಪ್​ನ ಸೂಪರ್​-12ರ ಗ್ರೂಪ್​ 2 ಪಂದ್ಯದಲ್ಲಿ ಆಫ್ಘಾನಿಸ್ತಾನದ ವಿರುದ್ಧ 5 ವಿಕೆಟ್​​ಗಳ ಭರ್ಜರಿ ಜಯ ದಾಖಲು ಮಾಡುವ ಮೂಲಕ ಪಾಕ್​ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಇಲ್ಲಿಯವರೆಗೆ ತಾನು ಆಡಿರುವ ಮೂರು ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ಆರಂಭಿಕ ಆಘಾತದ ನಡುವೆ ಕೂಡ ನಿಗದಿತ 20 ಓವರ್​​ಗಳಲ್ಲಿ 6ವಿಕೆಟ್​ನಷ್ಟಕ್ಕೆ 147ರನ್​ಗಳಿಕೆ ಮಾಡಿತು.

ಆಫ್ಘನ್​ ಪರ ಆರಂಭಿಕರಾಗಿ ಕಣಕ್ಕಿಳಿದ ಹಜರುತುಲ್ಲಾ ಝಾಝಿ ಹಾಗೂ ಮೊಹಮ್ಮದ್​ ಶಹಜಾದ್​ ಜೋಡಿ​ ತಂಡಕ್ಕೆ ಉತ್ತಮ ಅಡಿಪಾಯ ಹಾಕುವಲ್ಲಿ ವಿಫಲವಾಯಿತು. ಝಾಝಿ ಮೊದಲ ಓವರ್​ನಲ್ಲಿ ಶೂನ್ಯಕ್ಕೆ ಶಹೀನ್​ ಅಫ್ರೀದಿಗೆ ವಿಕೆಟ್​​ ಒಪ್ಪಿಸಿದರು. ಮೊಹಮ್ಮದ್​ ಶಹಜಾದ್​​ ಕೂಡಾ ಕೇವಲ 8 ರನ್​ಗಳಿಸ ಔಟಾದ್ರು. ನಂತರ ಯಾವೊಬ್ಬ ಬ್ಯಾಟರ್​ ಕಡೆಯಿಂದ ಉತ್ತಮ ಆಟ ಬರಲಿಲ್ಲ.

ರಹಮಾನುಲ್ಲಾ ಗುರ್ಬಾಜ್ 10,ಅಸ್ಗರ್ ಅಫಘಾನ್ 10, ಕರೀಂ ಜನತ್ 15​, ಹಾಗೂ ನಜೀಬುಲ್ಲಾ ಜದ್ರಾನ್ 22 ರನ್​ಗಳಿಸಿ ಔಟಾದರು. ಆನಂತರ ಒಂದಾದ ಮೊಹಮ್ಮದ್​​ ನಬಿ ಹಾಗೂ ಗುಲ್ಬದಿನ್ ನಯಿಬ್ ಜೋಡಿ ಸಂಕಷ್ಟದಲ್ಲಿ ತಂಡಕ್ಕೆ ಆಸರೆಯಾದರು. ಅಂತಿಮ ಓವರ್​​ಗಳಲ್ಲಿ ಅಬ್ಬರದ ಬ್ಯಾಟಿಂಗ್​ ಮಾಡಿದ ಮೊಹಮ್ಮದ್​​ ನಬಿ 35 ಮತ್ತು ಗುಲ್ಬದಿನ್ ನಯಿಬ್ 35* ರನ್​​ಗಳಿಸುವ ಮೂಲಕ ತಂಡದ ಮೊತ್ತವನ್ನ 140ರ ಗಡಿ ದಾಟಿಸಿದರು. ಅಂತಿಮವಾಗಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 147ರನ್​​​ಗಳಿಸಿತು.

ಪಾಕ್​​ ಪರ ಉತ್ತಮ ದಾಳಿ ನಡೆಸಿದ ಇಮಾದ್​ ವಾಸೀಂ 2, ಶಹೀನ್​ ಅಫ್ರೀದಿ ,ಹ್ಯಾರೀಸ್​ ರೌಫ್​ ,ಹಸನ್​ ಅಲಿ, ಶದಬ್ದ್​ ಖಾನ್​​ ತಲಾ 1 ವಿಕೆಟ್​ ಪಡೆದು ಮಿಂಚಿದರು. ​​

148ರನ್​ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ಆರಂಭದಲ್ಲೇ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್​(8ರನ್​) ವಿಕೆಟ್ ಕಳೆದುಕೊಂಡರು ಕೂಡ ಕ್ಯಾಪ್ಟನ್ ಬಾಬರ್​ ಆಜಂ ಜವಾಬ್ದಾರಿಯುತ ಅರ್ಧಶತಕ, ಫಖರ್ ಜಮಾನ್​​ರ 30ರನ್​ ಹಾಗೂ ಆಸೀಫ್​ ಅಲಿ ಸ್ಫೋಟಕ 25ರನ್​ಗಳ ನೆರವಿನಿಂದ ಜಯ ಸಾಧಿಸಿದೆ.

ಪಾಕ್ ತಂಡಕ್ಕೆ ಕೊನೆ ಎರಡು ಓವರ್​ಗಳಲ್ಲಿ 24ರನ್​ಗಳ ಅವಶ್ಯಕತೆ ಇತು. ಈ ವೇಳೆ ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಆಸೀಫ್​ ಅಲಿ ತಾವು ಎದುರಿಸಿದ 7 ಎಸೆತಗಳಲ್ಲಿ 4 ಸಿಕ್ಸರ್​ ಸೇರಿ 25ರನ್​ಗಳಿಕೆ ಮಾಡಿ ತಂಡಕ್ಕೆ ಸುಲಭ ಜಯ ತಂದಿಟ್ಟರು. ಒಂದೇ ಓವರ್​ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ ಆಸೀಫ್​ ಅಲಿ(25*) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಪಾಕ್ ತಂಡ 19 ಓವರ್​ಗಳಲ್ಲಿ 5 ವಿಕೆಟ್​ನಷ್ಟಕ್ಕೆ 148ರನ್​ಗಳಿಕೆ ಮಾಡಿ ಗೆಲುವಿನ ನಗೆ ಬೀರಿದ್ದು, ತಾನು ಆಡಿರುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ, ಗೆಲುವಿನ ನಾಗಾಲೋಟ ಮುಂದುವರೆಸಿದೆ. ​ಆಫ್ಘಾನ್ ತಂಡದ ಪರ ರಾಶೀದ್ ಖಾನ್ 2 ವಿಕೆಟ್​, ರಹಮಾನ್​, ನಬಿ ಹಾಗೂ ನವೀನ್ ಉಲ್ಲ ಹಕ್ ತಲಾ 1 ವಿಕೆಟ್ ಪಡೆದುಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.