ದಕ್ಷಿಣ ಗೀಲಾಂಗ್ (ಆಸ್ಟ್ರೇಲಿಯಾ): ಗೀಲಾಂಗ್‌ನಲ್ಲಿ ಭಾನುವಾರ ನಡೆದ ಐಸಿಸಿ ಟಿ20 ವಿಶ್ವಕಪ್ 2022ರ ಗ್ರೂಪ್ ಎ ಮೊದಲ ಸುತ್ತಿನ ಪಂದ್ಯದಲ್ಲಿ 2022ರ ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾಗೆ ನಮೀಬಿಯಾ ತಂಡ ಆಘಾತ ನೀಡಿದೆ. ಸಿಂಹಳೀಯರ ವಿರುದ್ಧ ನಮೀಬಿಯಾ 55 ರನ್‌ಗಳ ಅಂತರದ ಅವಿಸ್ಮರಣೀಯ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ನಮೀಬಿಯಾವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ ಲಂಕನ್ನರು ಇನ್ನಿಂಗ್ಸ್ನ ಮೊದಲಾರ್ಧದಲ್ಲಿ ಅದ್ಭುತ ಯಶಸ್ಸು ಕಂಡರು. ಶ್ರೀಲಂಕಾದ ಕರಾರುವಾಕ್ ಬೌಲಿಂಗ್ ದಾಳಿಗೆ ಸಿಲುಕಿದ ನಮೀಬಿಯಾ 93ಕ್ಕೆ 6 ವಿಕೆಟ್ ಕಳೆದುಕೊಂಡಿತ್ತು. ಮೈಕೆಲ್ ವ್ಯಾನ್ ಲಿಂಗನ್ 3, ದಿವಾನ್ ಲಾ ಕಾಕ್ 9, ಲಾಫ್ಟಿ-ಈಟನ್ 20, ಬಾರ್ಡ್ 26, ಎರಾಸ್ಮಸ್ 20 ರನ್ ಹಾಗೂ ವೈಸ್ ಶೂನ್ಯಕ್ಕೆ ಔಟಾಗಿದ್ದರು.
ಆದರೆ ಈ ನಂತತ ಒಂದಾದ ಜಾನ್ ಫ್ರಿಲಿಂಕ್(44, 28 ಎಸೆತ) ಹಾಗೂ ಜೆಜೆ ಸ್ಮಿತ್ (31, 16 ಎಸೆತ) ಅಬ್ಬರದ ಬ್ಯಾಟಿಂಗ್ ಮೂಲಕ ಲಂಕನ್ನರಿಗೆ ಬೆವರಿಳಿಸಿದರು. ಈ ಜೋಡಿ 7ನೇ ವಿಕೆಟ್ಗೆ 5.4 ಓವರ್‌ಗಳಲ್ಲಿ 70 ರನ್ ದೋಚಿತಲ್ಲದೆ, ತಂಡದ ಮೊತ್ತವನ್ನು 163 ರನ್ಗೆ ಕೊಂಡೊಯ್ದರು.
-
A day Namibia won't forget anytime soon 😍#T20WorldCup pic.twitter.com/KCdzxUORsb
— ICC (@ICC) October 16, 2022 " class="align-text-top noRightClick twitterSection" data="
">A day Namibia won't forget anytime soon 😍#T20WorldCup pic.twitter.com/KCdzxUORsb
— ICC (@ICC) October 16, 2022A day Namibia won't forget anytime soon 😍#T20WorldCup pic.twitter.com/KCdzxUORsb
— ICC (@ICC) October 16, 2022
ಬಳಿಕ 164 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಧನಂಜಯ್ ಡಿ ಸಿಲ್ವಾ(12), ಭಾನುಕಾ ರಾಜಪಕ್ಸೆ (20) ಹಾಗೂ ನಾಯಕ ದಸುನ್ ಶನಕಾ (29) ಹೊರತುಪಡಿಸಿ ಉಳಿದ ಯಾರೂ ಕೂಡ ಎರಡಂಕಿ ಮೊತ್ತವನ್ನೂ ಕೂಡ ತಲುಪಲಿಲ್ಲ. 10 ಓವರ್‌ಗಳಲ್ಲಿ 4 ವಿಕೆಟ್ಗೆ 72 ರನ್ ಗಳಿಸಿದ್ದ ಸಿಂಹಳೀಯರು ಬಳಿಕ 9 ಓವರ್‌ಗಳಲ್ಲಿ ಅಂದರೆ 19 ಓವರ್ಗಳಲ್ಲೇ 108 ರನ್ಗೆ ಆಲೌಟ್ ಆಗುವ ಮೂಲಕ ಸೋಲುಂಡರು.
ಸಂಕ್ಷಿಪ್ತ ಸ್ಕೋರ್: ನಮೀಬಿಯಾ: 20 ಓವರ್‌ಗಳಲ್ಲಿ 163/7 (ಜಾನ್ ಫ್ರಿಲಿಂಕ್ 44, ಜೆಜೆ ಸ್ಮಿತ್ 31*, ಪ್ರಮೋದ್ ಮದುಶನ್ 2/37).
ಶ್ರೀಲಂಕಾ: 19 ಓವರ್‌ಗಳಲ್ಲಿ 108 (ದಾಸುನ್ ಶನಕ 29, ಭಾನುಕಾ ರಾಜಪಕ್ಸೆ 20, ಡೇವಿಡ್ ವೈಸ್ 2/16).
ಇದನ್ನೂ ಓದಿ: ವಿಶ್ವಕಪ್ಗಿಂತ ಜಸ್ಪ್ರೀತ್ ಬೂಮ್ರಾ ಕೆರಿಯರ್ ಮುಖ್ಯ: ರೋಹಿತ್ ಶರ್ಮಾ