ETV Bharat / sports

T20 World Cup: ಅಕ್ಟೋಬರ್‌ 24 ರಂದು ಭಾರತ-ಪಾಕ್‌ ಹಣಾಹಣಿ: ಮುಂದಿನ ಪಂದ್ಯಗಳ ವಿವರ ಇಲ್ಲಿದೆ.. - ಸಾಂಪ್ರದಾಯಿಕ ಎದುರಾಳಿಗಳು

ಐಸಿಸಿ ಟಿ20 ವಿಶ್ವಕಪ್‌ ಪಂದ್ಯಗಳ ದಿನಾಂಕ ಪ್ರಕಟವಾಗಿದೆ. ಅಕ್ಟೋಬರ್‌ 24 ರಂದು ಗುಂಪು ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ, ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ.

ICC T20 World Cup: India to face Pakistan on October 24
ICC T20 World Cup: ಅಕ್ಟೋಬರ್‌ 24 ರಂದು ಭಾರತ, ಪಾಕ್‌ ಹಣಾಹಣಿ
author img

By

Published : Aug 17, 2021, 12:06 PM IST

Updated : Aug 17, 2021, 3:03 PM IST

ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯಗಳ ದಿನಾಂಕ ಘೋಷಣೆಯಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 24 ರಂದು ದುಬೈನಲ್ಲಿ ಗುಂಪು ಹಂತದಲ್ಲಿ ಮುಖಾಮುಖಿಯಾಗಲಿವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿಳಿಸಿದೆ.

  • Mark your calendars 📆

    Get ready for the 2021 ICC Men’s #T20WorldCup bonanza 🤩

    — ICC (@ICC) August 17, 2021 " class="align-text-top noRightClick twitterSection" data=" ">

ಯುಎಇ ಮತ್ತು ಒಮಾನ್‌ನಲ್ಲಿ ಐಸಿಸಿ ಪುರುಷರ ಟಿ20 ವಿಶ್ವಕಪ್ 2021 ಅಕ್ಟೋಬರ್ 17ರಿಂದ ಆರಂಭವಾಗಲಿದ್ದು, ಅಂತಿಮ ಪಂದ್ಯ ನವೆಂಬರ್ 14 ರಂದು ದುಬೈನಲ್ಲಿ ನಡೆಯಲಿದೆ.

ಪಂದ್ಯಾವಳಿಯು ಅಕ್ಟೋಬರ್ 17 ರಂದು ಓಮನ್ ಮತ್ತು ಪಪುವಾ ನ್ಯೂಗಿನಿಯ ನಡುವಿನ ರೌಂಡ್ 1 ಗ್ರೂಪ್ ಬಿ ಮುಖಾಮುಖಿಯೊಂದಿಗೆ ಆರಂಭವಾಗಲಿದೆ. ಸ್ಕಾಟ್ಲೆಂಡ್ ಮತ್ತು ಬಾಂಗ್ಲಾದೇಶ, ಬಿ ಗುಂಪಿನ ಇತರ ತಂಡಗಳು ಅಂದು ಸಂಜೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ICC T20 World Cup: India to face Pakistan on October 24
T20 World Cup: ಪಂದ್ಯಗಳ ವಿವರ

ಐರ್ಲೆಂಡ್, ನೆದರ್‌ಲ್ಯಾಂಡ್, ಶ್ರೀಲಂಕಾ ಮತ್ತು ನಮೀಬಿಯಾ ಎ ಗುಂಪಿನಲ್ಲಿ ಅಕ್ಟೋಬರ್‌ 18 ರಿಂದ ಅಬುಧಾಬಿಯಲ್ಲಿ ಸೆಣಸಾಡಲಿವೆ. ರೌಂಡ್ 1ರ ಪಂದ್ಯಗಳು ಅಕ್ಟೋಬರ್ 22 ರವರೆಗೆ ನಡೆಯುತ್ತವೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೂಪರ್ 12 ಹಂತಕ್ಕೆ ಬರಲಿವೆ. ಈ ಪಂದ್ಯಗಳು ಅಕ್ಟೋಬರ್ 23 ರಿಂದ ಆರಂಭವಾಗುತ್ತದೆ.

ಪಂದ್ಯಗಳ ಎರಡನೇ ಸುತ್ತು, ಸೂಪರ್ 12 ಹಂತ ಅಕ್ಟೋಬರ್ 23 ರಂದು ಅಬುಧಾಬಿಯಲ್ಲಿ ನಡೆಯಲಿದ್ದು, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಗುಂಪು 1 ಸ್ಪರ್ಧೆ ನಡೆಯಲಿದೆ. ಇದರ ನಂತರ ದುಬೈನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಅಂದು ಸಂಜೆ ಪೈಪೋಟಿ ನಡೆಸಲಿವೆ.

Last Updated : Aug 17, 2021, 3:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.