ದುಬೈ: ಭಾರತ ಮತ್ತು ಶ್ರೀಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ಗೆ ಐಸಿಸಿ 'ಸಾಧಾರಣಕ್ಕಿಂತ ಕಡಿಮೆ' ರೇಟ್ ನೀಡಿದೆ. ಇದಲ್ಲದೇ, ಹೊರ ಮೈದಾನದ ನಿರ್ವಹಣೆಯಲ್ಲಿ ಗುಣಮಟ್ಟ ಕಾಪಾಡದ ಹಿನ್ನೆಲೆಯಲ್ಲಿ 1 ಋಣಾತ್ಮಕ ಅಂಕ ಕೊಟ್ಟಿದೆ.
ಪಂದ್ಯದ ರೆಫ್ರಿಯಾಗಿದ್ದ ಭಾರತ ತಂಡದ ಮಾಜಿ ಆಟಗಾರ, ಕರ್ನಾಟಕದ ಜಾವಗಲ್ ಶ್ರೀನಾಥ್ ಅವರು ಪಿಚ್ ಗುಣಮಟ್ಟದ ವರದಿಯನ್ನು ಬಿಸಿಸಿಐಗೆ ರವಾನಿಸಿದ್ದಾರೆ. ಅದರಲ್ಲಿ ಮೊದಲ ದಿನವೇ ಪಿಚ್ ಸಾಕಷ್ಟು ತಿರುವು ಪಡೆಯಿತು. ಉಭಯ ತಂಡಗಳ ಸೆಣಸಾಟಕ್ಕೆ ತಕ್ಕ ಮೈದಾನ ಇದಾಗಿರಲಿಲ್ಲ. ಬ್ಯಾಟಿಂಗ್, ಬೌಲಿಂಗ್ ನಡುವೆ ಸಮಬಲ ಸಾಧಿಸಲು ಮೈದಾನ ಯಶಸ್ವಿಯಾಗಲಿಲ್ಲ ಎಂದು ಉಲ್ಲೇಖಿಸಿದ್ದಾರೆ.
-
ICC has given its verdict on the Bengaluru pitch from the recently concluded #WTC23 clash between India and Sri Lanka 👇 https://t.co/7oqiMNhpqD
— ICC (@ICC) March 20, 2022 " class="align-text-top noRightClick twitterSection" data="
">ICC has given its verdict on the Bengaluru pitch from the recently concluded #WTC23 clash between India and Sri Lanka 👇 https://t.co/7oqiMNhpqD
— ICC (@ICC) March 20, 2022ICC has given its verdict on the Bengaluru pitch from the recently concluded #WTC23 clash between India and Sri Lanka 👇 https://t.co/7oqiMNhpqD
— ICC (@ICC) March 20, 2022
ಮಾರ್ಚ್ 12 ರಿಂದ ಆರಂಭವಾಗಿದ್ದ ಪಂದ್ಯ ನಾಲ್ಕು ಇನ್ನಿಂಗ್ಸ್ ಕಂಡರೂ ಮೂರೇ ದಿನಗಳಲ್ಲಿ ಮುಕ್ತಾಯವಾಗಿತ್ತು. ಪಂದ್ಯದಲ್ಲಿ ಭಾರತವು ಶ್ರೀಲಂಕಾ ತಂಡವನ್ನು 238 ರನ್‌ಗಳಿಂದ ಸೋಲಿಸಿತ್ತು.
ಈ ಹಿಂದೆ 2017 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದ ಆತಿಥ್ಯ ವಹಿಸಿದ್ದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಸಿಸಿ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಆಗಲೂ ಕೂಡ ಸಾಧಾರಣಕ್ಕಿಂತ ಕಡಿಮೆ ರೇಟ್ ನೀಡಿದ್ದರು.
ಓದಿ: ಹುಟ್ಟೂರು ಮೆಲ್ಬೋರ್ನ್ನಲ್ಲಿ ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್ ಅಂತ್ಯಕ್ರಿಯೆ