ದುಬೈ: ಭಾರತದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಲು ಇನ್ನು ಎರಡು ಮೆಟ್ಟಿಲು ಮಾತ್ರ ಬಾಕಿ ಇದೆ. ವಿಶ್ವಕಪ್ಗೂ ಮುನ್ನ ಶ್ರೇಯಾಂಕದಲ್ಲಿ ಏರಿಕೆ ಕಂಡಿರುವುದು ಗಿಲ್ಗೆ ಪಾಸಿಟೀವ್ ಆಗಲಿದೆ. ಏಷ್ಯಾಕಪ್ನ ಗುಂಪು ಹಂತದ ಪಂದ್ಯದಲ್ಲಿ ನೇಪಾಳದ ವಿರುದ್ಧ ಆಕರ್ಷಕ ಅರ್ಧಶತಕ ಗಳಿಸಿರುವ ಗಿಲ್ ರೇಟಿಂಗ್ನಲ್ಲಿ ಏರಿಕೆ ಕಂಡು ಮೂರನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನದಲ್ಲಿದ್ದಾರೆ.
-
Asia Cup stars have sparkled in the latest @MRFWorldwide ICC Men’s ODI Player Rankings 💥
— ICC (@ICC) September 6, 2023 " class="align-text-top noRightClick twitterSection" data="
More 👇 https://t.co/VEAX5KQOPg
">Asia Cup stars have sparkled in the latest @MRFWorldwide ICC Men’s ODI Player Rankings 💥
— ICC (@ICC) September 6, 2023
More 👇 https://t.co/VEAX5KQOPgAsia Cup stars have sparkled in the latest @MRFWorldwide ICC Men’s ODI Player Rankings 💥
— ICC (@ICC) September 6, 2023
More 👇 https://t.co/VEAX5KQOPg
ಗಿಲ್ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರಿಗಿಂತ 27 ರೇಟಿಂಗ್ ಹಿಂದಿದ್ದಾರೆ. ಹಾಗೇ ಅಗ್ರ ಸ್ಥಾನದಲ್ಲಿರುವ ಬಾಬರ್ ಅಜಮ್ ಅವರಿಗಿಂತ 132 ರೇಟಿಂಗ್ ಪಾಯಿಂಟ್ನಿಂದ ಹಿಂದಿದ್ದಾರೆ. ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಗಿಲ್ ಅಗ್ರ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಕೊಹ್ಲಿ ರೇಟಿಂಗ್ ಕುಸಿತ: ರನ್ ಮಷಿನ್ ಎಂದೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಅಲ್ಲದೇ ಸದ್ಯ ಯಾವುದೇ ಏಕದಿನದಲ್ಲಿ ವಿರಾಟ್ ಕಾಣಿಸಿಕೊಂಡಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ 9 ರಿಂದ 10ನೇ ಸ್ಥಾನಕ್ಕೆ ಇಳಿಕೆ ಕಂಡಿದ್ದಾರೆ. 11ನೇ ಶ್ರೇಯಾಂಕದಲ್ಲಿದ್ದ ಭಾರತ ತಂಡದ ನಾಯಕ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಉಳಿದಂತೆ ಪಾಕಿಸ್ತಾನದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಇಶಾನ್ ಕಿಶನ್ 24ನೇ ಸ್ಥಾನದಲ್ಲಿದ್ದಾರೆ. ಏಷ್ಯಾಕಪ್ ಮತ್ತು ವಿಶ್ವಕಪ್ಗೆ ಗಾಯದಿಂದ ಚೇತರಿಸಿಕೊಂಡು ಮಧ್ಯಮ ಕ್ರಮಾಂಕಕ್ಕೆ ಆಯ್ಕೆ ಆಗಿರುವ ಶ್ರೇಯಸ್ ಅಯ್ಯರ್ 33 ಸ್ಥಾನದಲ್ಲಿದ್ದಾರೆ. ಉಳಿದಂತೆ ವಿಶ್ವಕಪ್ಗೆ ಆಯ್ಕೆ ಆಗಿರುವವರಲ್ಲಿ ನೂರರೊಳಗಿನ ಶ್ರೇಯಾಂಕದಲ್ಲಿ ಕೆಎಲ್ ರಾಹುಲ್ (46) ಮತ್ತು ಹಾರ್ದಿಕ್ ಪಾಂಡ್ಯ (61) ಇದ್ದಾರೆ.
ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಏಷ್ಯಾನ್ ರಾಷ್ಟ್ರಗಳು ಪೂರ್ವ ಸಿದ್ಧತೆಗಾಗಿ ಏಕದಿನ ಮಾದರಿಯ ಏಷ್ಯಾಕಪ್ ಆಡುತ್ತಿವೆ. ಹೀಗಾಗಿ ಇತರ ರಾಷ್ಟ್ರಗಳ ಆಟಗಾರರ ಶ್ರೇಯಾಂಕದಲ್ಲೂ ಕೆಲ ಬದಲಾವಣೆಗಳಾಗಿದೆ. ಶ್ರೀಲಂಕಾ ಡೈನಮೋ ಚರಿತ್ ಅಸಲಂಕಾ ಎಂಟು ಸ್ಥಾನಗಳ ಏರಿಕೆ ಕಂಡಿದ್ದಾರೆ. ಬೌಲಿಂಗ್ನಲ್ಲಿ ಏಷ್ಯಾಕಪ್ನ ಗುಂಪು ಪಂದ್ಯದಲ್ಲಿ 6 ವಿಕೆಟ್ ಕಬಳಿಸಿದ ಶಾಹೀನ್ ಶಾ ಅಫ್ರಿದಿ 1 ಸ್ಥಾನದ ಏರಿಕೆ ಕಂಡು 5ನೇ ಶ್ರೇಯಾಂಕದಲ್ಲಿದ್ದಾರೆ. ಇನ್ನು ಪಾಕ್ನ ಸ್ಟಾರ್ ವೇಗಿಗಳ ಪಟ್ಟಿಯಲ್ಲಿರುವ ಹ್ಯಾರಿಸ್ ರೌಫ್ 14 ಸ್ಥಾನಗಳ ಏರಿಕೆ ಕಂಡು 29ನೇ ಶ್ರೇಯಾಂಕದಲ್ಲಿದ್ದಾರೆ ಮತ್ತು ನಸೀಮ್ ಶಾ 68ನೇ ರೇಟಿಂಗ್ ಹೊಂದಿದ್ದಾರೆ. ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ 10ನೇ ರ್ಯಾಂಕಿಂಗ್, ಶ್ರೀಲಂಕಾದ ಸ್ಪಿನ್ನರ್ ಮಹೀಶ್ ತೀಕ್ಷಣ 15ನೇ ಶ್ರೇಯಾಂಕವನ್ನು ಪಡೆದಿದ್ದಾರೆ.
ಇದನ್ನೂ ಓದಿ: ಏಷ್ಯಾಕಪ್ 2023: ಇಂದಿನಿಂದ ಸೂಪರ್ - 4 ಹಣಾಹಣಿ.. ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ