ದುಬೈ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಮುನ್ನ ಭಾರತ ತಂಡ ಆಸ್ಟ್ರೇಲಿಯಾವನ್ನು ಮಣಿಸಿದೆ. ಐಸಿಸಿ ಬಿಡುಗಡೆ ಮಾಡಿರುವ ಪುರುಷರ ಟೆಸ್ಟ್ ಟೀಮ್ನ ಶ್ರೇಯಾಂಕದಲ್ಲಿ ಭಾರತ ಅಗ್ರಸ್ಥಾನಕ್ಕೆ ಏರಿದೆ. ಪುರುಷರ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಕಳೆದ 15 ತಿಂಗಳಿಂದ ಆಸ್ಟ್ರೇಲಿಯಾ ತನ್ನ ಸ್ಥಾನವನ್ನು ಉಳಿಸಿಕೊಂಡಿತ್ತು. ಈಗ ರೋಹಿತ್ ನಾಯಕತ್ವ ಪಡೆ 121 ರೇಟಿಂಗ್ನಿಂದ ಮೊದಲ ಸ್ಥಾನಕ್ಕೆ ಏರಿದೆ.
ಮುಂದಿನ ತಿಂಗಳು ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುಂಚಿತವಾಗಿ ಭಾರತವು ಆಸೀಸ್ ತಂಡವನ್ನು ಹಿಂದಿಕ್ಕಿದೆ. ಜೂನ್ 7 ರಿಂದ 11 ವರೆಗೆ ಟೆಸ್ಟ್ ಚಾಂಪಿಯನ್‌ಶಿಪ್ ಇಂಗ್ಲೆಂಡ್ನ ಓವೆಲ್ನಲ್ಲಿ ನಡೆಯಲಿದೆ. ನಂತರ ಆಸ್ಟ್ರೇಲಿಯಾ ಇಂಗ್ಲೆಂಡ್ ನೆಲದಲ್ಲೇ ಜೂನ್ 16 ರಿಂದ ಜುಲೈ 31 ವರೆಗೆ ಆಶಸ್ ಸರಣಿ ಆಡಲಿದೆ.
-
🚨 New World No.1 🚨
— ICC (@ICC) May 2, 2023 " class="align-text-top noRightClick twitterSection" data="
India dethrone Australia in the annual update of the @MRFWorldwide ICC Men's Test Rankings ahead of the #WTC23 Final 👀
">🚨 New World No.1 🚨
— ICC (@ICC) May 2, 2023
India dethrone Australia in the annual update of the @MRFWorldwide ICC Men's Test Rankings ahead of the #WTC23 Final 👀🚨 New World No.1 🚨
— ICC (@ICC) May 2, 2023
India dethrone Australia in the annual update of the @MRFWorldwide ICC Men's Test Rankings ahead of the #WTC23 Final 👀
ವಾರ್ಷಿಕ ಶ್ರೇಯಾಂಕಗಳ ನವೀಕರಣದ ಮೊದಲು, ಆಸ್ಟ್ರೇಲಿಯಾವು 122 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿತ್ತು ಮತ್ತು ಭಾರತವು ಮೂರು ಅಂಕಗಳಿಂದ (119) ಹಿಂದುಳಿದಿತ್ತು. ವಾರ್ಷಿಕ ಶ್ರೇಯಾಂಕದಲ್ಲಿ ಮೇ 2020 ರಲ್ಲಿ ಪೂರ್ಣಗೊಂಡ ಎಲ್ಲಾ ಸರಣಿಗಳನ್ನು ಪರಿಗಣಿಸಲಾಗುತ್ತದೆ. ಮೇ 2022 ರ ಮೊದಲು ಪೂರ್ಣಗೊಂಡ ಸರಣಿಗಳನ್ನು ಶೇಕಡಾ 50 ರಷ್ಟು ಮತ್ತು ನಂತರದ ಎಲ್ಲಾ ಸರಣಿಗಳನ್ನು ಶೇಕಡಾ 100 ರಷ್ಟನ್ನು ಬಳಸಿ ಅಂಕ ನೀಡಲಾಗಿದೆ.
ಇದರ ಪರಿಣಾಮವಾಗಿ, 2019/20 ರಲ್ಲಿ ಪಾಕಿಸ್ತಾನ (2-0) ಮತ್ತು ನ್ಯೂಜಿಲ್ಯಾಂಡ್ (3-0) ವಿರುದ್ಧ ಆಸ್ಟ್ರೇಲಿಯಾದ ಸ್ವದೇಶಿ ಸರಣಿ ಗೆಲುವುಗಳು ಆಸ್ಟ್ರೇಲಿಯಾಕ್ಕೆ ಪರಿಗಣನೆಗೆ ತೆಗೆದುಕೊಂಡಿಲ್ಲ. ಆಸಿಸ್ 2021/22 ರಲ್ಲಿ ಇಂಗ್ಲೆಂಡ್ ವಿರುದ್ಧ ಆಶಸ್‌ನಲ್ಲಿ 4-0 ಗೆಲುವು ದಾಖಲಿಸಿದೆ ಆದರ ರೇಟಿಂಗ್‌ಗಳು 121 ರಿಂದ 116 ಕ್ಕೆ ಇಳಿದಿದೆ.
ಭಾರತಕ್ಕೆ, 2019/20 ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಅವರ 2-0 ಸೋಲು ಕಂಡಿದ್ದು, ಶ್ರೇಯಾಂಕಗಳಿಗೆ ಪರಿಗಣನೆಯಲ್ಲಿಲ್ಲ, ಹೀಗಾಗಿ 119 ರಿಂದ 121ಕ್ಕೆ ಎರಡು ಪಾಯಿಂಟ್ ಹೆಚ್ಚಳವಾಗಿದೆ. 2022 ರ ಜನವರಿಯಲ್ಲಿ ತವರಿನ ಆಶಸ್‌ನಲ್ಲಿ ಇಂಗ್ಲೆಂಡ್ ಅನ್ನು 4-0 ಅಂತರದಿಂದ ಸೋಲಿಸಿದ ಕಾರಣ ಆಸ್ಟ್ರೇಲಿಯಾವು ಪ್ಯಾಟ್ ಕಮ್ಮಿನ್ಸ್ ಅವರ ನಾಯಕತ್ವದಲ್ಲಿ ಮೊದಲ ಸರಣಿಯ ಟೆಸ್ಟ್ ಶ್ರೇಯಾಂಕದ ಶಿಖರಕ್ಕೆ ಏರಿತು. ನಂತರ 15 ತಿಂಗಳ ಕಾಲ ಅಲ್ಲೇ ಮುಂದುವರೆದಿತ್ತು.
ಭಾರತ ತಂಡ ಪ್ರಸ್ತುತ ಟಿ20 ಮತ್ತು ಟೆಸ್ಟ್ನಲ್ಲಿ ಅಗ್ರಸ್ಥಾನದಲ್ಲಿದೆ. ಏಕದಿನ ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಮೂರನೇ ಸ್ಥಾನದದಲ್ಲಿದೆ. ಇದೇ ವರ್ಷ ಏಕದಿನ ಮಾದರಿಯ ಏಷ್ಯಾಕಪ್ ಮತ್ತು ವಿಶ್ವಕಪ್ ಪಂದ್ಯಗಳನ್ನು ಭಾರತ ಆಡಲಿದ್ದು, ಉತ್ತಮ ಪ್ರದರ್ಶನ ನೀಡಿದ್ದಲ್ಲಿ ಅಗ್ರಸ್ಥಾನಕ್ಕೇರಲಿದೆ. ಧೋನಿ ನಾಯಕತ್ವದಲ್ಲಿ ಭಾರತ ಮೂರು ವಿಭಾಗದ ಪಂದ್ಯಗಳಲ್ಲಿ ಅಗ್ರಸ್ಥಾನವನ್ನು ಕಾಯ್ದಿಕೊಂಡಿತ್ತು.
ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಟ್ವಿಟರ್ನಲ್ಲಿ ಟೀ ಇಂಡಿಯಾಗೆ ಶುಭಕೋರಿದ್ದಾರೆ. ಟೀ ಇಂಡಿಯಾ ವಿಶ್ವದ ನಂಬರ್ 1 ಟೆಸ್ಟ್ ತಂಡವಾಗಿದ್ದಕ್ಕೆ ಅಭಿನಂದನೆಗಳು. ಅಗ್ರ ಸ್ಥಾನವು ಟೆಸ್ಟ್ ಕ್ರಿಕೆಟ್‌ಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ತವರು ಮತ್ತು ಹೊರಗಿನ ಸ್ಥಿರ ಪ್ರದರ್ಶನಗಳನ್ನು ಪ್ರತಿಬಿಂಬಿಸುತ್ತದೆ. ಭಾರತ ಕೂಡ ಟಿ20ಯಲ್ಲಿ ನಂ.1 ತಂಡವಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮೈದಾನದಲ್ಲಿ ಮತ್ತೆ ಕಾದಾಡಿದ ಕಿಂಗ್ ಕೊಹ್ಲಿ- ಗಂಭೀರ್: ನೋವಿನಲ್ಲೂ ಬ್ಯಾಟ್ ಮಾಡಿದ ರಾಹುಲ್