ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ(Virat Kohli) ಅವರು ಐಸಿಸಿ ಪುರುಷರ ಟಿ20 ರ್‍ಯಾಂಕಿಂಗ್ ಪಟ್ಟಿಯಲ್ಲಿ ಐದನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದರೆ, ಕೆ.ಎಲ್.ರಾಹುಲ್ (K.L.Rahul) 8ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
ವಿರಾಟ್ ಕೊಹ್ಲಿ 698 ರೇಟಿಂಗ್ ಪಾಯಿಂಟ್ನಿಂದ 8ನೇ ಸ್ಥಾನಕ್ಕೆ ಕುಸಿದರೆ, ರಾಹುಲ್ 727 ಪಾಯಿಂಟ್ಗಳಿಂದ 5ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
-
After a strong #T20WorldCup campaign, Aiden Markram continues his climb 🧗♂️
— ICC (@ICC) November 10, 2021 " class="align-text-top noRightClick twitterSection" data="
Plenty of movement in the @MRFWorldwide T20I player rankings 👉 https://t.co/vJD0IY4JPU pic.twitter.com/Y7tTwgdvPM
">After a strong #T20WorldCup campaign, Aiden Markram continues his climb 🧗♂️
— ICC (@ICC) November 10, 2021
Plenty of movement in the @MRFWorldwide T20I player rankings 👉 https://t.co/vJD0IY4JPU pic.twitter.com/Y7tTwgdvPMAfter a strong #T20WorldCup campaign, Aiden Markram continues his climb 🧗♂️
— ICC (@ICC) November 10, 2021
Plenty of movement in the @MRFWorldwide T20I player rankings 👉 https://t.co/vJD0IY4JPU pic.twitter.com/Y7tTwgdvPM
ಪಾಕಿಸ್ತಾನದ ಆರಂಭಿಕ ಆಟಗಾರ ಹಾಗೂ ನಾಯಕ ಬಾಬರ್ ಅಜಮ್ 839 ಪಾಯಿಂಟ್ನಿಂದ ನಂ. 1 ಪಟ್ಟ ಅಲಂಕರಿಸಿದ್ದಾರೆ.
ದಕ್ಷಿಣ ಆಫ್ರಿಕಾ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವನ್ನು ಪಡೆದಿದ್ದಾರೆ. ಅವರು 8ನೇ ಸ್ಥಾನದಿಂದ 3ನೇ ಸ್ಥಾನಕ್ಕೇರಿಕೆ ಕಂಡಿದ್ದಾರೆ. ಇಂಗ್ಲೆಂಡ್‌ನ ಡೇವಿಡ್ ಮಲಾನ್ (800) 2ನೇ ಸ್ಥಾನದಲ್ಲಿದ್ದಾರೆ.
ಬೌಲರ್ಗಳ ಪೈಕಿ ಶ್ರೀಲಂಕಾದ ಆಲ್ರೌಂಡರ್ ವನಿಂದು ಹಸರಂಗ 797 ರೇಟಿಂಗ್ ಪಾಯಿಂಟ್ಗಳಿಂದ ಮೊದಲನೇ ಸ್ಥಾನದಲ್ಲಿದ್ದಾರೆ. ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ 6 ಸ್ಥಾನವನ್ನು ಸ್ಪಿನ್ನರ್ಗಳು ಪಡೆದಿದ್ದಾರೆ.
ಆಲ್ರೌಂಡರ್ ವಿಭಾಗದಲ್ಲಿ ಬಾಂಗ್ಲಾದೇಶದ ಸ್ಟಾರ್ ಆಟಗಾರ ಶಕೀಬ್ ಅಲ್ ಹಸನ್ ಅಗ್ರ ಸ್ಥಾನದಿಂದ ಒಂದು ಸ್ಥಾನ ಕೆಳಗಿಳಿದ್ದು, ಅಫ್ಘಾನಿಸ್ಥಾನದ ಆಲ್ರೌಂಡರ್ ಮೊಹಮ್ಮದ್ ನಬಿ ಮೊದಲನೇ ಸ್ಥಾನದಲ್ಲಿದ್ದಾರೆ.