ಶಾರ್ಜಾ: ಐಸಿಸಿ ಟಿ-20 ವಿಶ್ವಕಪ್ನ ಸೂಪರ್ 12 ಹಂತದ ಗ್ರೂಪ್ 2ರಲ್ಲಿಂದು ಬಲಿಷ್ಠ ಪಾಕಿಸ್ತಾನ ಹಾಗೂ ನ್ಯೂಜಿಲ್ಯಾಂಡ್ ತಂಡ ಮುಖಾಮುಖಿಯಾಗಿವೆ. ಟಾಸ್ ಸೋತು ಬ್ಯಾಟಿಂಗ್ಗಿಳಿದ ನ್ಯೂಜಿಲ್ಯಾಂಡ್ ತಂಡ ನಿಗದಿತ 20 ಓವರ್ಗಳಲ್ಲಿ 134 ರನ್ ಗಳಿಸುವ ಮೂಲಕ, ಪಾಕಿಸ್ತಾನಕ್ಕೆ 135 ರನ್ಗಳ ಟಾರ್ಗೆಟ್ ನೀಡಿದೆ.
-
Another day, another sizzling performance from the Pakistan bowlers 🔥
— T20 World Cup (@T20WorldCup) October 26, 2021 " class="align-text-top noRightClick twitterSection" data="
They restrict New Zealand to 134/8.
Will their batters get the job done? #T20WorldCup | #PAKvNZ | https://t.co/rpw034CkPm pic.twitter.com/4LcY3wZun6
">Another day, another sizzling performance from the Pakistan bowlers 🔥
— T20 World Cup (@T20WorldCup) October 26, 2021
They restrict New Zealand to 134/8.
Will their batters get the job done? #T20WorldCup | #PAKvNZ | https://t.co/rpw034CkPm pic.twitter.com/4LcY3wZun6Another day, another sizzling performance from the Pakistan bowlers 🔥
— T20 World Cup (@T20WorldCup) October 26, 2021
They restrict New Zealand to 134/8.
Will their batters get the job done? #T20WorldCup | #PAKvNZ | https://t.co/rpw034CkPm pic.twitter.com/4LcY3wZun6
ಕೀವಿಸ್ ಪರ ಓಪನರ್ ಆಗಿ ಕಣಕ್ಕಿಳಿದ ಮಾರ್ಟಿನ್ ಗಫ್ಟಿಲ್ ಹಾಗೂ ಡರ್ಲೆ ಮಿಚೆಲ್ ಮೊದಲ ವಿಕೆಟ್ಗೆ 5.2 ಓವರ್ಗಳಲ್ಲಿ 36 ರನ್ಗಳಿಸಿದ್ದರು. 17 ರನ್ಗಳಿಸಿದಾಗ ಗಫ್ಟಿಲ್, ಹರೀಸ್ ರೌಫ್ಗೆ ವಿಕೆಟ್ ಒಪ್ಪಿಸಿದರು. ನಂತರ ಡರ್ಲೆ ಮಿಚೆಲ್ ಕೂಡಾ 27 ರನ್ಗಳಿಸಿದಾಗ ಇಮಾದ್ ವಾಸಿಂಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಿಶಮ್ ಕೂಡಾ 1ರನ್ಗಳಿಸಿ ಔಟಾಗುವ ಮೂಲಕ ತಂಡವನ್ನ ಸಂಕಷ್ಟಕ್ಕೆ ಸಿಲುಕಿಸಿದರು.
ನಂತರ ಒಂದಾದ ವಿಲಿಯಮ್ಸ್ ಮತ್ತು ಡಿವೊನ್ ಕಾನ್ವೆ ಜೋಡಿ 40 ರನ್ಗಳ ಜೊತೆಯಾಟವಾಡಿತು. ವಿಲಿಯಮ್ಸನ್ 25 ರನ್ಗಳಿಸಿದ್ದಾಗ ಬೇಡದ ರನ್ ಕಿದಿಯಲು ಹೋಗಿ ರನ್ ಔಟಾಗಿ ಪೇವಿಲಿಯನ್ಗೆ ತೆರಳಿದರು. ಡಿವೊನ್ ಕಾನ್ವೆ(27) ರನ್ಗಳಿಸಿದಾಗ ಹರೀಸ್ ರೌಫ್ ವಿಕೆಟ್ ಒಪ್ಪಿಸಿದರು. ಇವರ ಹಿಂದೇಯೆ ಅದೇ ಓವರ್ನಲ್ಲಿ ಗ್ಲೇನ್ ಪಿಲಿಪ್ಸ್ (13) ಔಟಾದರು.
ನಂತರ ಬಂದ ಥಿಮ್ ಸಿಫರ್ಟ್ (8) ಅಂತಿಮ ಓವರ್ಗಳಲ್ಲಿ ಹೊಡಿ ಬಡಿ ಆಟಕ್ಕೆ ಮುಂದಾದರು ಕೂಡಾ ತಂಡದ ಮೊತ್ತವನ್ನ ಹೆಚ್ಚಿಸುವಲ್ಲಿ ವಿಫಲರಾದರು. ಸ್ಯಾಂಟ್ನರ್ (6) ರನ್ಗಳಿಸಿ ರೌಫ್ಗೆ ವಿಕೆಟ್ ಒಪ್ಪಿಸಿದರು. ಇಶ್ ಸೋಧಿ (2) ರನ್ಗಳಿಸಿ ಔಟಾಗದೇ ಉಳಿದರು. ಅಂತಿಮವಾಗಿ 20 ಓವರ್ಗಳಲ್ಲಿ ಕಿವೀಸ್ ಪಡೆ 134 ರನ್ಗಳಿಸಲಷ್ಟೇ ಶಕ್ತವಾಯಿತು.
ಇನ್ನು ಪಾಕ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ರೌಫ್ 4ವಿಕೆಟ್ ಪಡೆದರೆ, ಇವರಿಗೆ ಉತ್ತಮ ಸಾಥ್ ನೀಡಿದ ಇಮಾದ್ ವಾಸೀಂ, ಹಫೀಜ್, ಶಾಹಿನ್ ಆಫ್ರೀದಿ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.