ETV Bharat / sports

ಮುಂದಿನ 4 ವರ್ಷಗಳ ಕ್ರಿಕೆಟ್‌ ವೇಳಾಪಟ್ಟಿ ರಿಲೀಸ್: ಏಕದಿನ, ಟಿ20, ಟೆಸ್ಟ್‌ ಸೇರಿ 777 ಪಂದ್ಯ - ಈಟಿವಿ ಭಾರತ ಕರ್ನಾಟಕ

2023-2027ರ ಪುರುಷರ ಕ್ರಿಕೆಟ್ ಫ್ಯೂಚರ್ಸ್​ ಟೂರ್ಸ್ ರಿಲೀಸ್ ಆಗಿದೆ. ಐಸಿಸಿ ವೇಳಾಪಟ್ಟಿಯ ಪ್ರಕಾರ, 777 ಅಂತಾರಾಷ್ಟ್ರೀಯ ಪಂದ್ಯಗಳು ಆಯೋಜನೆಗೊಳ್ಳಲಿವೆ. ಇದರಲ್ಲಿ 173 ಟೆಸ್ಟ್, 281 ಏಕದಿನ ಮತ್ತು 323 ಟಿ20 ಪಂದ್ಯಗಳು ಸೇರಿವೆ.

ICC mens new Future Tours Program cycle
ICC mens new Future Tours Program cycle
author img

By

Published : Aug 17, 2022, 3:21 PM IST

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​ (ಐಸಿಸಿ) 2023-2027ರ ಪುರುಷರ ಕ್ರಿಕೆಟ್​​ ಫ್ಯೂಚರ್ಸ್​ ಟೂರ್ಸ್ ಆ್ಯಂಡ್​​ ಪ್ರೊಗ್ರಾಮ್ಸ್​(ಎಫ್​ಟಿಐ) ಸಿದ್ಧಪಡಿಸಿದೆ. ಇದರಲ್ಲಿ ಒಟ್ಟು 777 ಪಂದ್ಯಗಳು ನಡೆಯಲಿವೆ. ಟೀಂ ಇಂಡಿಯಾ 20 ಟೆಸ್ಟ್​​ ಪಂದ್ಯಗಳಲ್ಲಿ ಭಾಗಿಯಾಗಲಿದೆ.

ಪ್ರಮುಖವಾಗಿ 2023ರಲ್ಲಿ ಭಾರತ ಬಹುನಿರೀಕ್ಷಿತ ಬಾರ್ಡರ್​​​-ಗವಾಸ್ಕರ್ ಟ್ರೋಫಿ ಆಯೋಜಿಸಲಿದ್ದು, ಇದರಲ್ಲಿ ಆಸ್ಟ್ರೇಲಿಯಾ ಪಾಲ್ಗೊಳ್ಳಲಿದೆ. ಫೆಬ್ರವರಿ-ಮಾರ್ಚ್​ ಅವಧಿಯಲ್ಲಿ ನಾಲ್ಕು ಟೆಸ್ಟ್​ ಪಂದ್ಯಗಳ ಸರಣಿ ನಿಗದಿಯಾಗಿದೆ. ಇದಾದ ಬಳಿಕ ಭಾರತ ತಂಡ ವೆಸ್ಟ್​ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. 2024ರಲ್ಲಿ ಭಾರತ ತಂಡ ಇಂಗ್ಲೆಂಡ್​, ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್ ಟೂರ್ನಿಗೆ ಆತಿಥ್ಯ ವಹಿಸಲಿದೆ.

ಐಸಿಸಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯಲ್ಲಿ ಒಟ್ಟು 777 ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಲಿದ್ದು, 12 ತಂಡಗಳು ಭಾಗಿಯಾಗಲಿವೆ. 2024ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 2055ರಲ್ಲಿ ಇಂಗ್ಲೆಂಡ್​ ಪ್ರವಾಸ ಕೈಗೊಂಡು ಐದು ಪಂದ್ಯಗಳ ಟೆಸ್ಟ್​ ಸರಣಿ ನಡೆಯಲಿದೆ. 2026ರಲ್ಲಿ ಆಫ್ಘಾನಿಸ್ತಾನ ಭಾರತ ಪ್ರವಾಸ ಕೈಗೊಳ್ಳಲಿದ್ದು ಏಕಮಾತ್ರ ಟೆಸ್ಟ್​ ಪಂದ್ಯದಲ್ಲಿ ಸೆಣಸಲಿವೆ. 2023-27ರ ವೇಳಾಪಟ್ಟಿಯಲ್ಲಿ ಭಾರತ ಅಂತಿಮವಾಗಿ(2027) ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿ ನಡೆಯಲಿದೆ ಭಾಗಿಯಾಗಲಿದೆ.

ಇದನ್ನೂ ಓದಿ: 2025ರ ಮಹಿಳಾ ವಿಶ್ವಕಪ್‌ಗೆ ಭಾರತ ಆತಿಥ್ಯ: 301 ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ

ವೆಸ್ಟ್​ ಇಂಡೀಸ್​​ 2024ರ ಟಿ20 ವಿಶ್ವಕಪ್ ಆಯೋಜನೆ ಮಾಡಲಿದೆ. 2025ರಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಹಾಗೂ 2026ರಲ್ಲಿ ಭಾರತ-ಶ್ರೀಲಂಕಾ ಜಂಟಿಯಾಗಿ ಟಿ20 ವಿಶ್ವಕಪ್​ ಆಯೋಜಿಸಲಿವೆ. 2027ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಐಸಿಸಿ ಏಕದಿನ ವಿಶ್ವಕಪ್​ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.