ETV Bharat / sports

ಐಸಿಸಿ ಟಿ20 ರ‍್ಯಾಂಕಿಂಗ್: ಹಾರ್ದಿಕ್​, ಇಶಾನ್​, ಹೂಡಾ ಸ್ಥಾನಗಳಲ್ಲಿ ಏರಿಕೆ.. ಕೊಹ್ಲಿ, ರಾಹುಲ್​, ರೋಹಿತ್​ಗೆ ಯಾವ ಸ್ಥಾನ?

ಐಸಿಸಿ ಟಿ20 ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ - ಹಾರ್ದಿಕ್​, ಇಶಾನ್​, ಹೂಡಾ ಸ್ಥಾನಗಳಲ್ಲಿ ಏರಿಕೆ - ಅಗ್ರಸ್ಥಾನ ಉಳಿಸಿಕೊಂಡ ಸೂರ್ಯ

ICC Men T20I Rankings  Deepak Hooda make gains  Ishan Kishan make gains  Hardik Pandya make gains  ICC Men test Rankings  ಐಸಿಸಿ ಟಿ20 ರ‍್ಯಾಂಕಿಂಗ್  ಐಸಿಸಿ ಟಿ20 ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ  ಐಸಿಸಿ ಟಿ20 ರ‍್ಯಾಂಕಿಂಗ್​ನಲ್ಲಿ ಏರಿಕೆ  ಹೂಡಾ 40 ಸ್ಥಾನಗಳ ಜಿಗಿತ  ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್
ಐಸಿಸಿ ಟಿ20 ರ‍್ಯಾಂಕಿಂಗ್
author img

By

Published : Jan 5, 2023, 3:43 PM IST

ಆಲ್ ರೌಂಡರ್​ಗಳಾದ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಮತ್ತು ದೀಪಕ್ ಹೂಡಾ ಐಸಿಸಿ ಟಿ20 ರ‍್ಯಾಂಕಿಂಗ್​ನಲ್ಲಿ ಏರಿಕೆ ದಾಖಲಿಸಿದ್ದಾರೆ. ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಹೂಡಾ 40 ಸ್ಥಾನಗಳ ಜಿಗಿತವನ್ನು ಕಂಡಿದ್ದು, ಅಚ್ಚರಿಯ ಕಮ್​ಬ್ಯಾಕ್​ ಮಾಡಿದ್ದಾರೆ. ಇವರಲ್ಲದೇ, ಆಸ್ಟ್ರೇಲಿಯಾದ ಸ್ಟಾರ್ ಸ್ಟೀವ್ ಸ್ಮಿತ್ ಅವರು ಟೆಸ್ಟ್ ರ‍್ಯಾಂಕಿಂಗ್​ನಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರನ್ನು ಹಿಂದಿಕ್ಕಿದ್ದಾರೆ.

ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ 10 ಸ್ಥಾನ ಮೇಲೇರಿ 23ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಗುರುವಾರ ಬಿಡುಗಡೆ ಮಾಡಿರುವ ಟಿ-20 ಬ್ಯಾಟ್ಸ್‌ಮನ್‌ಗಳ ಇತ್ತೀಚಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ರ‍್ಯಾಂಕಿಂಗ್​ನಲ್ಲಿ ದೀಪಕ್ ಹೂಡಾ ಟಾಪ್-100 ರೊಳಗೆ ಮರು ಪ್ರವೇಶಿಸಿರುವುದು ಸಂತಸ ಮೂಡಿದೆ. ಮಂಗಳವಾರ ಮುಂಬೈನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಐಸಿಸಿ ರ‍್ಯಾಂಕಿಂಗ್​ನಲ್ಲಿ ಏರಿಕೆ ಕಂಡರು.

ಈ ಪಂದ್ಯವನ್ನು ಭಾರತ ಎರಡು ರನ್‌ಗಳಿಂದ ಗೆದ್ದುಕೊಂಡಿತು. ಐಸಿಸಿ ಟಿ-20 ರ‍್ಯಾಂಕಿಂಗ್​ನ ಬ್ಯಾಟಿಂಗ್​ ವಿಭಾಗದಲ್ಲಿ ಇಶಾನ್ ಕಿಶನ್ 23ನೇ ಸ್ಥಾನಕ್ಕೆ ಜಂಪ್​ ಆಗಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ -20 ಸರಣಿಯಲ್ಲಿ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ 50ನೇ ಸ್ಥಾನಕ್ಕೆ ತಲುಪಿದ್ದಾರೆ. ಇವರಲ್ಲದೇ ಸ್ಪಿನ್ ಆಲ್ ರೌಂಡರ್ ದೀಪಕ್ ಹೂಡಾ ಕೂಡ ಬಂಪರ್ ಲಾಭ ಪಡೆದಿದ್ದಾರೆ. ಹೂಡಾ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ 40 ಸ್ಥಾನಗಳ ಬೃಹತ್ ಜಿಗಿತವನ್ನು ಕಂಡಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ದೀಪಕ್ ಹೂಡಾ ಗೆಲುವಿನ ಹೀರೋ ಆಗಿದ್ದರು. ಈ ಪಂದ್ಯದಲ್ಲಿ ದೀಪಕ್ ಹೂಡಾ 23 ಎಸೆತಗಳಲ್ಲಿ 41 ರನ್ ಗಳಿಸಿ ಬಿರುಸಿನ ಆಟವಾಡಿದರು. ಇದು ಅವರಿಗೆ ಬಂಪರ್ ಲಾಭ ತಂದುಕೊಟ್ಟಿದ್ದು, 40 ಸ್ಥಾನ ಜಿಗಿಯುವ ಮೂಲಕ ಟಾಪ್-100ರೊಳಗೆ ಪ್ರವೇಶಿಸಿದರು. ಇದೀಗ ದೀಪಕ್ ಹೂಡಾ 97ನೇ ಸ್ಥಾನಕ್ಕೆ ತಲುಪಿದ್ದಾರೆ. ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್​ ಯಾದವ್​ ಬ್ಯಾಟಿಂಗ್​ನಲ್ಲಿ ವಿಫಲವಾದ ನಂತರವೂ ಟಿ20 ಶ್ರೇಯಾಂಕದಲ್ಲಿ 883 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಬೌಲರ್‌ಗಳ ಪೈಕಿ ಭಾರತದ ನೂತನ ಟಿ-20 ನಾಯಕ ಹಾರ್ದಿಕ್ ಪಾಂಡ್ಯ ಒಂಬತ್ತು ಸ್ಥಾನ ಸುಧಾರಿಸಿ 76ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಪಂದ್ಯದಲ್ಲಿ ಶ್ರೀಲಂಕಾ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ವನಿಂದು ಹಸರಂಗಾ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡರು. 25 ವರ್ಷದ ಆಲ್‌ರೌಂಡರ್ ಹಸರಂಗಾ ಸಹ ತಮ್ಮ ಬಿರುಸಿನ ಆಟದ ಮೂಲಕ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ವಿಫಲರಾಗಿದ್ದರೂ (ಡಿಸೆಂಬರ್ 26 ರಿಂದ ಆಡಲು) ಮಾರ್ನಸ್ ಲ್ಯಾಬುಸ್ಚಾಗ್ನೆ ಬ್ಯಾಟ್ಸ್‌ಮನ್‌ಗಳ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ್ದ ವಿಲಿಯಮ್ಸನ್ ಎರಡು ಸ್ಥಾನ ಸುಧಾರಿಸಿ ಟೆಸ್ಟ್​ ರ‍್ಯಾಂಕಿಂಗ್​ನ ಬ್ಯಾಟಿಂಗ್​ ವಿಭಾಗದಲ್ಲಿ ಐದನೇ ಸ್ಥಾನಕ್ಕೆ ತಲುಪಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮತ್ತು ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ ಮೊದಲ ಎರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇನ್ನು ವಿರಾಟ್​ ಕೊಹ್ಲಿ 13ನೇ ಸ್ಥಾನ, ಕೆಎಲ್​ ರಾಹುಲ್​ 20ನೇ ಸ್ಥಾನ ಮತ್ತು ನಾಯಕ ರೋಹಿತ್​ ಶರ್ಮಾ 21 ನೇ ಸ್ಥಾನದಲ್ಲಿ ತಟಸ್ಥರಾಗಿದ್ದಾರೆ.

ಓದಿ: ಮೊಣಕಾಲಿಗೆ ಗಾಯ, ಲಂಕಾ ಸರಣಿಯಿಂದ ಸಂಜು ಸ್ಯಾಮ್ಸನ್​ ಔಟ್​: ಜಿತೇಶ್ ಶರ್ಮಾಗೆ ಚಾನ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.