ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ICC) ಗುರುವಾರ ಪುರುಷರ ಟಿ20 ವಿಶ್ವಕಪ್ 2021ರ ಅಧಿಕೃತ ಗೀತೆಯನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ವೆಸ್ಟ್ ಇಂಡೀಸ್ ನಾಯಕ ಪೊಲಾರ್ಡ್ ಅವತಾರ್ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.
-
There’s somethin’ happenin’ in the air yo 🎼
— T20 World Cup (@T20WorldCup) September 23, 2021 " class="align-text-top noRightClick twitterSection" data="
Drop everything else. The #T20WorldCup anthem is here 💥#LiveTheGame pic.twitter.com/eczg0WfKwD
">There’s somethin’ happenin’ in the air yo 🎼
— T20 World Cup (@T20WorldCup) September 23, 2021
Drop everything else. The #T20WorldCup anthem is here 💥#LiveTheGame pic.twitter.com/eczg0WfKwDThere’s somethin’ happenin’ in the air yo 🎼
— T20 World Cup (@T20WorldCup) September 23, 2021
Drop everything else. The #T20WorldCup anthem is here 💥#LiveTheGame pic.twitter.com/eczg0WfKwD
ಈ ಗೀತೆಯನ್ನು ಭಾರತದ ಪ್ರಸಿದ್ಧ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸಂಯೋಜಿಸಿದ್ದಾರೆ. ವಿಡಿಯೋದಲ್ಲಿ ವಿರಾಟ್-ಪೊಲಾರ್ಡ್ ಹೊರತುಪಡಿಸಿ ಅಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಕೆಲವು ಯುವ ಅಭಿಮಾನಿಗಳು ಕಾಣಿಸಿಕೊಂಡಿದ್ದಾರೆ. ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಟಿ20 ಮಹಾಕೂಟವನ್ನು ನೋಡುವುದಕ್ಕೆ ಉತ್ಸಾಹದಿಂದ ಕಾತರಿಸುತ್ತಿರುವಂತೆ ಹಾಡು ಮೂಡಿಬಂದಿದೆ.
ಇನ್ನು ಸಂಪೂರ್ಣ ವಿಡಿಯೋವನ್ನು ಅವತಾರ್ ಆ್ಯನಿಮೇಷನ್ 3ಡಿ ಮತ್ತು 2ಡಿ ಎಫೆಕ್ಟ್ ಮೂಲಕ ಹೊಸ ಬ್ರಾಡ್ಕಾಸ್ಟಿಂಗ್ ಟೆಕ್ನಾಲಜಿ ಬಳಸಿ ನಿರ್ಮಾಣ ಮಾಡಲಾಗಿದೆ. ಆಕರ್ಷಕ ಗೀತೆ ರಚನಾ ಕಾರ್ಯದಲ್ಲಿ ಡಿಸೈನರ್, ಮಾಡೆಲರ್ಸ್, ಮ್ಯಾಟ್ ಪೇಂಟರ್ಸ್, ಆ್ಯನಿಮೇಟರ್ಸ್, ಲೈಟರ್ಸ್ ಮತ್ತು ಕಂಪೋಜಿಸಟರ್ಸ್ ಸೇರಿದಂತೆ ಒಟ್ಟು 40 ಸದಸ್ಯರ ಪ್ರೊಡಕ್ಷನ್ ತಂಡ ಭಾಗಿಯಾಗಿದ್ದಾರೆ ಎಂದು ಐಸಿಸಿ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಮುಂದೆ ಸಾಗಲು ಇದು ಉತ್ತಮ ಬುನಾದಿ; ಪಂತ್ ನಾಯಕತ್ವದ ಬಗ್ಗೆ ಶ್ರೇಯಸ್ ಅಯ್ಯರ್ ಏನಂದ್ರು ಗೊತ್ತಾ?