ಇಂದೋರ್ (ಮಧ್ಯ ಪ್ರದೇಶ): ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಇಂದೋರ್‌ನ ಹೋಳ್ಕರ್ಸ್ಟೇಡಿಯಂನಲ್ಲಿ ಎರಡು ದಿನ ಮತ್ತು ಒಂದು ಸೆಷನ್ಗೆ ಆಟ ಮುಕ್ತಾಯವಾಗಿತ್ತು. ಬೌನ್ಸಿ ಪಿಚ್ನಲ್ಲಿ ಸ್ಪಿನ್ನರ್ಗಳ ಪಾರಮ್ಯ ಕಂಡು ಬಂದಿತ್ತು. ಎರಡು ದಿನದಲ್ಲಿ ಬರೋಬ್ಬರಿ 30 ವಿಕೆಟ್‌ಗಳು ಪತನ ಕಂಡಿದ್ದವು.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಿಚ್ ಮತ್ತು ಔಟ್‌ಫೀಲ್ಡ್ ಮಾನಿಟರಿಂಗ್ ಪ್ರಕ್ರಿಯೆ ಅಡಿಯಲ್ಲಿ ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌ಗೆ ಬಳಸಲಾದ ಪಿಚ್ ಅನ್ನು "ಕಳಪೆ" ಎಂದು ಪರಿಗಣಿಸಿದೆ.
ಉಭಯ ತಂಡಗಳ ಸ್ಪಿನ್ನರ್‌ಗಳು ಪಿಚ್ ಮೇಲ್ಮೈ ಉತ್ತಮ ಸಹಾಯವನ್ನು ಪಡೆದರು. ಇದು ಮೊದಲ ದಿನದ ಆರಂಭದಿಂದಲೇ ಸ್ಪಿನ್‌ಗೆ ಅನುಕೂಲಕರವಾಗಿತ್ತು. ಪ್ರಥಮ ದಿನ ಪಿಚ್ನಲ್ಲಿ 14 ವಿಕೆಟ್‌ಗಳು ಪತನ ಕಂಡವು. ಇಡೀ ಪಂದ್ಯದಲ್ಲಿ ಬಿದ್ದ 31 ವಿಕೆಟ್‌ಗಳ ಪೈಕಿ 26 ವಿಕೆಟ್‌ಗಳನ್ನು ಸ್ಪಿನ್ನರ್‌ಗಳು ಉರುಳಿಸಿದರೆ, ಕೇವಲ ನಾಲ್ಕು ವಿಕೆಟ್‌ಗಳು ವೇಗಿಗಳ ಪಾಲಾದವು. ಒಬ್ಬರು ರನ್ ಔಟ್ ಆಗಿದ್ದರು.
-
The pitch for the third #INDvAUS Test has been deemed as “poor” under the ICC Pitch and Outfield Monitoring Process.
— ICC (@ICC) March 4, 2023 " class="align-text-top noRightClick twitterSection" data="
Details ⬇️https://t.co/r4GukNU2Zc
">The pitch for the third #INDvAUS Test has been deemed as “poor” under the ICC Pitch and Outfield Monitoring Process.
— ICC (@ICC) March 4, 2023
Details ⬇️https://t.co/r4GukNU2ZcThe pitch for the third #INDvAUS Test has been deemed as “poor” under the ICC Pitch and Outfield Monitoring Process.
— ICC (@ICC) March 4, 2023
Details ⬇️https://t.co/r4GukNU2Zc
ಮೂರನೇ ಟೆಸ್ಟ್‌ನಲ್ಲಿ ಎರಡೂ ತಂಡಗಳ ನಾಯಕರಾದ ರೋಹಿತ್ ಶರ್ಮಾ ಮತ್ತು ಸ್ಟೀವ್ ಸ್ಮಿತ್ ಇಬ್ಬರೊಂದಿಗೆ ಸಮಾಲೋಚಿಸಿದ ನಂತರ ಐಸಿಸಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ತಮ್ಮ ವರದಿಯನ್ನು ಸಲ್ಲಿಸಿದ ನಂತರ ಹೋಳ್ಕರ್ ಕ್ರೀಡಾಂಗಣವು ಮೂರು ಡಿಮೆರಿಟ್ (-3) ಅಂಕಗಳನ್ನು ಪಡೆದಿದೆ. ಈ ಬಗ್ಗೆ ಐಸಿಸಿ ಮೇಲ್ಮನವಿ ಸಲ್ಲಿಸಲು ಬಿಸಿಸಿಐಗೆ 14 ದಿನಗಳ ಅವಕಾಶವಿದೆ.
ಪಿಚ್ ಬಗ್ಗೆ ಮಾತನಾಡಿದ ಕ್ರಿಸ್ ಬ್ರಾಡ್, "ತುಂಬಾ ಶುಷ್ಕವಾಗಿದ್ದ ಪಿಚ್, ಬ್ಯಾಟ್ ಮತ್ತು ಬಾಲ್ ನಡುವೆ ಸಮತೋಲನವನ್ನು ಕಂಡು ಬರಲಿಲ್ಲ. ಆರಂಭದಿಂದಲೂ ಸ್ಪಿನ್ನರ್‌ಗಳಿಗೆ ಅನುಕೂಲವಾಗಿತ್ತು. ಪಂದ್ಯದ ಐದನೇ ಚೆಂಡು ಪಿಚ್ ಮೇಲ್ಮೈಯಿಂದ ಭೇದಿಸಲ್ಪಟ್ಟಿತು ಮತ್ತು ಯಾವುದೇ ಸೀಮ್ನ್ನು ಬಾಲ್ಗೆ ಒದಗಿಸಲಿಲ್ಲ. ಪಂದ್ಯದ ಉದ್ದಕ್ಕೂ ವಿಪರೀತವಾದ ಬೌನ್ಸ್ ಕಂಡು ಬಂತು" ಎಂದಿದ್ದಾರೆ.
ಈ ಕಳೆಪ ಅಂಕದಿಂದಾಗುವ ಪರಿಣಾಮ ಏನು?: ಐಸಿಸಿ ಪಿಚ್ ಮತ್ತು ಔಟ್‌ಫೀಲ್ಡ್ ಮಾನಿಟರಿಂಗ್ ಪ್ರಕ್ರಿಯೆಯ ಪ್ರಕಾರ, ಐದು ವರ್ಷಗಳ ರೋಲಿಂಗ್ ಅವಧಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಡಿಮೆರಿಟ್ ಪಾಯಿಂಟ್‌ಗಳನ್ನು ಸಂಗ್ರಹಿಸಿದರೆ 12 ತಿಂಗಳ ಅವಧಿಗೆ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆತಿಥ್ಯ ವಹಿಸದಂತೆ ಸ್ಥಳವನ್ನು ಅಮಾನತುಗೊಳಿಸಲಾಗುತ್ತದೆ.
ನಾಲ್ಕು ಪಂದ್ಯಗಳ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ. ನಾಲ್ಕನೇ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾರ್ಚ್ 9 ರಿಂದ 13ರ ವರೆಗೆ ನಡೆಯಲಿದೆ. ಇಂದೋರ್‌ನ ಗೆಲುವಿನೊಂದಿಗೆ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದೆ. ಅಂತಿಮ ಟೆಸ್ಟ್ ಗೆದ್ದರೆ ಭಾರತ ಫೈನಲ್ ಪ್ರವೇಶವೂ ಪಕ್ಕಾ ಆಗಲಿದೆ.
ನಾಲ್ಕನೇ ಪಂದ್ಯದಲ್ಲಿ ಭಾರತ ಸೋತಲ್ಲಿ ಶ್ರೀಲಂಕಾಗೆ WTC ಫೈನಲ್ಗೆ ಹೋಗುವ ಅವಕಾಶ ತೆರೆದುಕೊಳ್ಳಲಿದೆ. ಆದರೆ ಕಿವೀಸ್ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಅಗತ್ಯ ಇದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಹಾಲಿ ಚಾಂಪಿಯನ್ ಎದುರು ಮಾರ್ಚ್ 9ರಿಂದ ಪಂದ್ಯ ಆರಂಭವಾಗಲಿದೆ. ಜೂನ್ 7 ರಿಂದ ಓವಲ್‌ನಲ್ಲಿ WTC ಫೈನಲ್ ಪಂದ್ಯ ಆರಂಭವಾಗಲಿದ್ದು, ಆಸೀಸ್ ಎದುರಾಳಿ ಯಾರು ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: WTC: ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳಿವರು.. ಮೂರನೇ ಪಂದ್ಯ ಸೋತ ಭಾರತಕ್ಕೆ ಫೈನಲ್ ಹಾದಿ ಹೇಗಿದೆ?