ETV Bharat / sports

ವಿಶ್ವಕಪ್ ಕ್ರಿಕೆಟ್‌: ಡಿ ಕಾಕ್, ಮಾರ್ಕ್ರಾಮ್, ಕ್ಲಾಸೆನ್ ಅಬ್ಬರ; ಬಾಂಗ್ಲಾಕ್ಕೆ 383 ರನ್‌ಗಳ​ ಬೃಹತ್​ ಗುರಿ

author img

By ETV Bharat Karnataka Team

Published : Oct 24, 2023, 6:03 PM IST

Updated : Oct 24, 2023, 6:40 PM IST

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ತಂಡ ಅಬ್ಬರದ ಇನ್ನಿಂಗ್ಸ್ ಮೂಲಕ ಬಾಂಗ್ಲಾದೇಶಕ್ಕೆ 383 ರನ್​ಗಳ ಬೃಹತ್​ ಗುರಿ ನೀಡಿತು.

ICC Cricket World Cup 2023
ICC Cricket World Cup 2023

ಮುಂಬೈ (ಮಹಾರಾಷ್ಟ್ರ): ಇಂಗ್ಲೆಂಡ್​ ವಿರುದ್ಧದ ಹೊಡಿಬಡಿ ಇನ್ನಿಂಗ್ಸ್ ಅ​ನ್ನೇ ದಕ್ಷಿಣ ಆಫ್ರಿಕಾ ತಂಡ ಇಂದು ಬಾಂಗ್ಲಾದೇಶದ ವಿರುದ್ಧವೂ ಪ್ರಯೋಗಿಸಿತು. ಕ್ವಿಂಟನ್ ಡಿ ಕಾಕ್ ಶತಕ, ಐಡೆನ್ ಮಾರ್ಕ್ರಾಮ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಅರ್ಧಶತಕದಾಟದಿಂದ 50 ಓವರ್‌ಗಳಂತ್ಯಕ್ಕೆ ದಕ್ಷಿಣ ಆಫ್ರಿಕಾ 5 ವಿಕೆಟ್​ ನಷ್ಟಕ್ಕೆ 382 ರನ್​ ಕಲೆಹಾಕಿತು.

  • 🇿🇦 Quinton de Kock led the charge against the Tigers with an unassailable 174 runs. Heinrich Klaasen was on a rampage of 90 runs off 49 balls

    Great effort from the boys 💪

    🇧🇩 need 383 runs to win #CWC23 #BePartOfIt #SAvBAN pic.twitter.com/1UBRnZcTMu

    — Proteas Men (@ProteasMenCSA) October 24, 2023 " class="align-text-top noRightClick twitterSection" data=" ">

ಟಾಸ್​​ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಮಾತನಾಡುತ್ತಾ, ಇಂಗ್ಲೆಂಡ್​ ವಿರುದ್ಧ ಆಡಿದ ಇನ್ನಿಂಗ್ಸ್ ಅನ್ನೇ ಆಡಬಯಸುತ್ತೇವೆ. ಅದಕ್ಕಾಗಿ ಮೊದಲು ಬ್ಯಾಟಿಂಗ್ ಮಾಡುತ್ತೇವೆ ಎಂದು ಹೇಳಿದ್ದರು. ಅದರಂತೆ ಮೊದಲು ಬ್ಯಾಟಿಂಗ್​ಗೆ ಮೈದಾನಕ್ಕಿಳಿದ ಹರಿಣಗಳಿಗೆ ಬಾಂಗ್ಲಾ ಟೈಗರ್ಸ್​ ಶಾಕ್​ ನೀಡಿದರು.

ವಾಂಖೆಡೆ ಪಿಚ್​ನಲ್ಲಿ ಆರಂಭಿಕರನ್ನು ಅಬ್ಬರಿಸದಂತೆ ಯಶಸ್ವಿಯಾಗಿ ಕಟ್ಟಿಹಾಕಿದ್ದಲ್ಲದೇ, ಎರಡು ವಿಕೆಟ್​ ಸಹ ಕಬಳಿಸಿ ಒತ್ತಡ ಹೇರಿದರು. ರೀಜಾ ಹೆಂಡ್ರಿಕ್ಸ್ (12) ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (1) ವಿಕೆಟ್​ ನಷ್ಟದಿಂದ ತಂಡ ಮೊದಲ ಪವರ್​ ಪ್ಲೇ ಅಂತ್ಯಕ್ಕೆ 44 ರನ್​ ಮಾತ್ರ ಗಳಿಸಿತ್ತು.

ಡಿ ಕಾಕ್, ಮಾರ್ಕ್ರಾಮ್​ ಶತಕದ ಜತೆಯಾಟ: ಎರಡು ವಿಕೆಟ್​ ಕುಸಿದರೂ ನಂತರ ಮೂರನೇ ವಿಕೆಟ್‌ಗೆ ಒಂದಾದ ಕ್ವಿಂಟನ್ ಡಿ ಕಾಕ್ ಮತ್ತು ನಾಯಕ ಐಡೆನ್ ಮಾರ್ಕ್ರಾಮ್ ಪಿಚ್​ಗೆ ಹೊಂದಿಕೊಂಡ ನಂತರ ಅಬ್ಬರದ ಇನ್ನಿಂಗ್ಸ್​ ಆರಂಭಿಸಿದರು. 25ನೇ ಓವರ್​ಗೆ ತಂಡ 131 ರನ್​ ಗಳಿಸಿತು. ನಂತರ ಈ ಜೋಡಿ ರನ್​ ಗಳಿಸುವ ವೇಗ ಹೆಚ್ಚಿಸಿದರು. ಮಾರ್ಕ್ರಾಮ್​ ತಾಳ್ಮೆಯ ಇನ್ನಿಂಗ್ಸ್​ ಆಡುತ್ತಾ ಡಿ ಕಾಕ್​ಗೆ ಅವಕಾಶ ನೀಡುತ್ತಾ ಬಂದರು. ಐಡೆನ್ ಮಾರ್ಕ್ರಾಮ್ 69 ಬಾಲ್​ ಆಡಿ 7 ಬೌಂಡರಿಯ ಸಹಾಯದಿಂದ 60 ರನ್​ ಗಳಿಸಿ ವಿಕೆಟ್​ ಕೊಟ್ಟರು. ಇದರಿಂದ ಈ ಜೋಡಿಯ 131 ರನ್‌ಗಳ ಪಾಲುದಾರಿಕೆ ಅಂತ್ಯವಾಯಿತು.

ದ್ವಿಶತಕದ ಅಂಚಿನಲ್ಲಿ ಎಡವಿದ ಡಿ ಕಾಕ್​: ಕ್ವಿಂಟನ್ ಡಿ ಕಾಕ್ ಏಕದಿನ ವಿಶ್ವಕಪ್​ನ ಮೂರನೇ ಶತಕ ದಾಖಲಿಸಿದರು. ನಂತರ ರನ್​ ಗತಿಗೆ ವೇಗ ನೀಡಿದರು. ವಾಂಖೆಡೆ ಮೈದಾನದಲ್ಲಿ ಸಿಕ್ಸರ್​, ಬೌಂಡರಿಗಳ ಮಳೆ ಸುರಿಸಿದರು. ಇವರಿಗೆ ನಾಲ್ಕನೇ ವಿಕೆಟ್​ಗೆ ಸಾಥ್​ ನೀಡಿದ ಹೆನ್ರಿಚ್ ಕ್ಲಾಸೆನ್ ಇಂಗ್ಲೆಂಡ್​ ವಿರುದ್ಧದ ಶತಕದ ಇನ್ನಿಂಗ್ಸ್​ನ ಬ್ಯಾಟಿಂಗ್​ ಶೈಲಿಯನ್ನೇ ಇಲ್ಲೂ ಮುಂದುವರೆಸಿದರು. ಇಬ್ಬರೂ ಬ್ಯಾಟರ್​ಗಳು ಎರಡು ತುದಿಯಲ್ಲಿ ದೊಡ್ಡ ಹೊಡೆತಗಳನ್ನೇ ಆಡಿದರು. ಶತಕ ಸಾಧಿಸಿದ ಡಿ ಕಾಕ್ ದ್ವಿಶತಕದತ್ತ ದಾಪುಗಾಲು ಹಾಕುತ್ತಿದ್ದಾಗ ಕ್ಯಾಚ್ ಕೊಟ್ಟು ಔಟಾದರು. 26 ರನ್​ನಿಂದ ವಿಶ್ವಕಪ್​ನ 3ನೇ ದ್ವಿಶತಕ ದಾಖಲಿಸುವ ಅವಕಾಶ ಕೈಚೆಲ್ಲಿದರು. ಇನ್ನಿಂಗ್ಸ್​ನಲ್ಲಿ ಡಿ ಕಾಕ್​ 140 ಬಾಲ್​ ಎದುರಿಸಿ 15 ಬೌಂಡರಿ, 7 ಸಿಕ್ಸ್​ನಿಂದ 174 ರನ್​ ಕಲೆಹಾಕಿದರು.

ಮಿಲ್ಲರ್​, ಕ್ಲಾಸೆನ್​ ಜತೆಯಾಟ: ಕೊನೆಯ ಐದು ಓವರ್‌ಗಳಿದ್ದಾಗ​ ಒಂದಾದ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ 65 ರನ್​ ಜತೆಯಾಟ ಕಟ್ಟಿದರು. ಎದುರಾಳಿಗಳ ಮೇಲೆ ಭರ್ಜರಿ ಹಿಟ್​ಗಳ ಮೂಲಕ ಸವಾರಿ ಮಾಡಿದ ಬ್ಯಾಟರ್​ಗಳು ತಂಡದ ಮೊತ್ತವನ್ನು 350 ರನ್‌ಗಳ ಗಡಿ ದಾಟಿಸಿದರು. ಇಂಗ್ಲೆಂಡ್​ ವಿರುದ್ಧ ಶತಕ ಗಳಿಸಿದ್ದ ಕ್ಲಾಸೆನ್​ 10 ರನ್​ನಿಂದ ಶತಕ ಸಾಧನೆ ಮಾಡುವಲ್ಲಿ ವಿಫಲರಾದರು. 49 ಬಾಲ್​ ಆಡಿದ ಅವರು 2 ಬೌಂಡರಿ, 8 ಸಿಕ್ಸ್​ನಿಂದ 90 ರನ್​ ಕಲೆಹಾಕಿ 49.2 ನೇ ಓವರ್​ನಲ್ಲಿ ಶತಕ ಗಳಿಸುವ ಪ್ರಯತ್ನದಲ್ಲಿ ವಿಕೆಟ್​ ಕೊಟ್ಟರು. ಕ್ಲಾಸೆನ್ ಜತೆ ಇನ್ನಿಂಗ್ಸ್​ ಕಟ್ಟಿದ್ದ ಡೇವಿಡ್ ಮಿಲ್ಲರ್ 34 ರನ್ ಗಳಿಸಿದರು.

  • " class="align-text-top noRightClick twitterSection" data="">

ಬಾಂಗ್ಲಾ ನಾಯಕ ಶಕೀಬ್​ ಅಲ್​ ಹಸನ್​ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಿಯಂತ್ರಣ ಸಾಧಿಸಿದರು. ಆದರೆ ನಂತರ ಹರಿಣಗಳು ಬಾಂಗ್ಲಾ ಬೌಲರ್​ಗಳನ್ನು ಇನ್ನಿಲ್ಲದಂತೆ ಕಾಡಿದರು. 7 ಬೌಲರ್​ಗಳು ಎಷ್ಟೇ ಪ್ರಯತ್ನಿಸಿದರೂ ರನ್​ ಗತಿ ಕಡಿಮೆ ಆಗಲೇ ಇಲ್ಲ. ಮೆಹಿದಿ ಹಸನ್ ಮಿರಾಜ್ 4.90 ಎಕಾನಮಿಯಲ್ಲಿ ಬೌಲ್​ ಮಾಡಿದ್ದು ಬಿಟ್ಟರೆ, ಮಿಕ್ಕ 6 ಜನ 6+ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದರು. ಹಸನ್ ಮಹಮ್ಮದ್ 2, ಶಕೀಬ್ ಅಲ್ ಹಸನ್, ಮೆಹಿದಿ ಹಸನ್ ಮಿರಾಜ್ ಮತ್ತು ಶೋರಿಫುಲ್ ಇಸ್ಲಾಂ ತಲಾ ಒಂದು ವಿಕೆಟ್​ ಪಡೆದರು.

ಇದನ್ನೂ ಓದಿ: '8 ಕೆ.ಜಿ ಮಟನ್ ತಿಂದರೆ ಎಲ್ಲಿರುತ್ತೆ ಫಿಟ್ನೆಸ್‌?': ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಪಾಕಿಸ್ತಾನ ತಂಡದ ವಿರುದ್ಧ ವಾಸಿಂ ಅಕ್ರಮ್ ವಾಗ್ದಾಳಿ

Last Updated : Oct 24, 2023, 6:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.