ಪುಣೆ (ಮಹಾರಾಷ್ಟ್ರ): ನಡೆಯುತ್ತಿರುವ ವಿಶ್ವಕಪ್ನಲ್ಲಿ ಮತ್ತೊಂದು ದೊಡ್ಡ ಗೆಲುವು ದಾಖಲಿಸಿರುವ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪುಣೆ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ಬೌಲರ್ಗಳು ನ್ಯೂಜಿಲೆಂಡ್ ತಂಡವನ್ನು 36 ಓವರ್ನಲ್ಲಿ167 ರನ್ಗೆ ಆಲ್ಔಟ್ ಮಾಡಿದರು. ಇದರಿಂದ ಹರಿಣಗಳ ತಂಡ ಕಿವೀಸ್ ವಿರುದ್ಧ 190 ರನ್ಗಳ ಅಂತರದ ಗೆಲುವು ದಾಖಲಿಸಿದೆ. 2023ರ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ತಾನು ಮೊದಲು ಬ್ಯಾಟಿಂಗ್ ಮಾಡಿದಲ್ಲಿ ಬೃಹತ್ ಗುರಿ ನೀಡಿ ಎದುರಾಳಿಗಳನ್ನು ಮಣಿಸುತ್ತೇನೆ ಎಂಬುದನ್ನು ಮತ್ತೆ ಸಾಬೀತು ಮಾಡಿದೆ.
-
🇿🇦 PROTEAS DROWN BLACK CAPS
— Proteas Men (@ProteasMenCSA) November 1, 2023 " class="align-text-top noRightClick twitterSection" data="
An batting masterclass from RVD(133) & QDK (114) to earn South Africa a victory in Pune. This was accompanied by brilliant bowling from Keshav Maharaj & Marco Jansen 👏
🇿🇦 move to the top of the #CWC23 standings 🔝#NZvSA #BePartOfIt pic.twitter.com/2cK2Dd9JSf
">🇿🇦 PROTEAS DROWN BLACK CAPS
— Proteas Men (@ProteasMenCSA) November 1, 2023
An batting masterclass from RVD(133) & QDK (114) to earn South Africa a victory in Pune. This was accompanied by brilliant bowling from Keshav Maharaj & Marco Jansen 👏
🇿🇦 move to the top of the #CWC23 standings 🔝#NZvSA #BePartOfIt pic.twitter.com/2cK2Dd9JSf🇿🇦 PROTEAS DROWN BLACK CAPS
— Proteas Men (@ProteasMenCSA) November 1, 2023
An batting masterclass from RVD(133) & QDK (114) to earn South Africa a victory in Pune. This was accompanied by brilliant bowling from Keshav Maharaj & Marco Jansen 👏
🇿🇦 move to the top of the #CWC23 standings 🔝#NZvSA #BePartOfIt pic.twitter.com/2cK2Dd9JSf
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿ ಕಾಕ್ (114), ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ (133), ಮತ್ತು ಡೇವಿಡ್ ಮಿಲ್ಲರ್ (53) ಅವರ ಇನ್ನಿಂಗ್ಸ್ನ ಬಲದಿಂದ 357 ರನ್ ಕಲೆಹಾಕಿತ್ತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಕಿವೀಸ್ಗೆ ಇಂದಿನ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಅನುಪಸ್ಥಿತಿ ಕಾಡಿತು ಎಂದೇ ಹೇಳಬಹುದು.
- " class="align-text-top noRightClick twitterSection" data="">
ಮಾರ್ಕೊ ಜಾನ್ಸೆನ್ ಮತ್ತು ಕೇಶವ್ ಮಹಾರಾಜ್ ಕಿವೀಸ್ಗೆ ಕಾಟಕೊಟ್ಟರು. 2 ರನ್ ಗಳಿಸಿದ್ದ ಡೆವೊನ್ ಕಾನ್ವೇ, 9 ರನ್ ಗಳಿಸಿದ್ದ ರಚಿನ್ ರವೀಂದ್ರ ಅವರ ವಿಕೆಟ್ನ್ನು ಜಾನ್ಸೆನ್ ಕಿತ್ತರು. ಈ ನಡುವೆ ವಿಲ್ ಯಂಗ್ (33) ಸಹ ಔಟ್ ಆದರು. 11ನೇ ಓವರ್ ವೇಳೆಗೆ ತಂಡ 3 ವಿಕೆಟ್ ಕಳೆದುಕೊಂಡಿತ್ತು. ಮೇಲಿನ ಕ್ರಮಾಂಕದ ಕುಸಿತದ ನಂತರ ನ್ಯೂಜಿಲೆಂಡ್ ಸತತ ವಿಕೆಟ್ ನಷ್ಟವನ್ನು ಅನುಭವಿಸಿತು.
ಡ್ಯಾರಿಲ್ ಮಿಚೆಲ್ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ನಿಲ್ಲಿಸಲು ಪ್ರಯತ್ನಿಸಿದರಾದರೂ ಅವರಿಗೆ ಯಾರೂ ಸಾಥ್ ನೀಡಲಿಲ್ಲ. 24 ರನ್ಗೆ ಮಿಚೆಲ್ ಹೋರಾಟವೂ ಅಂತ್ಯವಾಗಿತ್ತು. ಅವರ ಬೆನ್ನಲ್ಲೇ ಟಾಮ್ ಲ್ಯಾಥಮ್ (4), ಜೇಮ್ಸ್ ನೀಶಮ್ (0), ಮಿಚೆಲ್ ಸ್ಯಾಂಟ್ನರ್ (7), ಟಿಮ್ ಸೌಥಿ (7), ಟ್ರೆಂಟ್ ಬೌಲ್ಟ್ (9)
ಫಿಲಿಪ್ಸ್ ವ್ಯರ್ಥ ಅರ್ಧಶತಕದ ಹೋರಾಟ: ತಂಡ ಬೃಹತ್ ಮೊತ್ತದ ಅಂತರದಲ್ಲಿ ಸೋಲು ಕಂಡರೆ ರನ್ರೇಟ್ ಮೇಲೆ ಪರಿಣಾಮ ಬೀರುತ್ತದೆ ಎಂಬ ಉದ್ದೇಶದಿಂದ ಗ್ಲೆನ್ ಫಿಲಿಪ್ಸ್ (60) ಕೊನೆಯ ವರೆಗೂ ತಮ್ಮ ಹೋರಾಟವನ್ನು ನಡೆಸಿದರು. ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ಗೆ ಈ ಸೋಲು ಸೆಮೀಸ್ ಪ್ರವೇಶಕ್ಕೆ ಮುಳುವಾಗಿದೆ. ಉಳಿದ 2 ಪಂದ್ಯಗಳನ್ನು ಗೆದ್ದಲ್ಲಿ ಮಾತ್ರ ಸೆಮೀಸ್ ಪಕ್ಕಾ ಆಗಲಿದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ರನ್ರೇಟ್ ಸಮಸ್ಯೆ ತಂಡಕ್ಕೆ ಎದುರಾಗಲಿದೆ. ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಅಂಕಪಟ್ಟಿಯ 4ನೇ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿವೆ. ಕೊನೆಯಲ್ಲಿ ಮ್ಯಾಟ್ ಹೆನ್ರಿ ಫಿಲಿಪ್ಸ್ಗೆ ಸಾಥ್ ನೀಡಿದರು. ಇದರಿಂದ ನ್ಯೂಜಿಲೆಂಡ್ 35.3 ಓವರ್ಗೆ 167 ರನ್ ಗಳಸಿ ಆಲ್ಔಟ್ ಆಯಿತು.
-
Rassie van der Dussen masters the conditions to bring up his second #CWC23 ton 👌@mastercardindia Milestones 🏏#NZvSA pic.twitter.com/MtP7ILrSDo
— ICC Cricket World Cup (@cricketworldcup) November 1, 2023 " class="align-text-top noRightClick twitterSection" data="
">Rassie van der Dussen masters the conditions to bring up his second #CWC23 ton 👌@mastercardindia Milestones 🏏#NZvSA pic.twitter.com/MtP7ILrSDo
— ICC Cricket World Cup (@cricketworldcup) November 1, 2023Rassie van der Dussen masters the conditions to bring up his second #CWC23 ton 👌@mastercardindia Milestones 🏏#NZvSA pic.twitter.com/MtP7ILrSDo
— ICC Cricket World Cup (@cricketworldcup) November 1, 2023
ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡಿತು. ಕೇಶವ್ ಮಹಾರಾಜ್ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಿತ್ತರೆ, ಮಾರ್ಕೊ ಜಾನ್ಸೆನ್ 3 ವಿಕೆಟ್ ಪಡೆದರು. ಉಳಿದಂತೆ ಜೆರಾಲ್ಡ್ ಕೊಯೆಟ್ಜಿ 2 ಮತ್ತು ಕಗಿಸೊ ರಬಾಡ ತಲಾ ಒಂದೊಂಡು ವಿಕೆಟ್ ಪಡೆದರು.
ಪಂದ್ಯ ಶ್ರೇಷ್ಠ: 133 ರನ್ಗಳ ಬೃಹತ್ ಇನ್ನಿಂಗ್ಸ್ ಆಡಿದ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: ವಿಶ್ವಕಪ್ನಲ್ಲಿ ಇಂಗ್ಲೆಂಡ್ ಕಳಪೆ ಪ್ರದರ್ಶನ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಆಲ್ರೌಂಡರ್