ಬೆಂಗಳೂರು: ಪಾಕಿಸ್ತಾನಕ್ಕೆ ಪ್ಲೇ ಆಫ್ ಪ್ರವೇಶಕ್ಕೆ ವರುಣನ ಸಹಕಾರವೂ ಸಿಕ್ಕಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಡಿಎಲ್ಎಸ್ ನಿಯಮದನ್ವಯ 21 ರನ್ಗಳ ಜಯ ದಾಖಲಿಸಿದೆ. ನ್ಯೂಜಿಲೆಂಡ್ ನೀಡಿದ್ದ 402 ರನ್ ಗುರಿಯನ್ನು ಪಾಕಿಸ್ತಾನ ಬೆನ್ನಟ್ಟಿದಾಗ ಮಳೆ ಬಂದು ಪಂದ್ಯವನ್ನು ನಿಲ್ಲಿಸಲಾಯಿತು. ಮಳೆ ಬರುವ ವೇಳೆಗೆ ಪಾಕ್ ತಂಡ 25.3 ಓವರ್ಗೆ ಫಖರ್ ಜಮಾನ್ 126 ರನ್ ಮತ್ತು ಬಾಬರ್ ಅಜಮ್ 66 ರನ್ಗಳ ಸಹಾಯದಿಂದ 200 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿತ್ತು. ಈ ಗೆಲುವಿನಿಂದ ಪಾಕ್ಗೆ ಸೆಮೀಸ್ ಪ್ರವೇಶದ ಹಾದಿ ಜೀವಂತವಾಗಿ ಉಳಿಸಿಕೊಂಡಿದೆ.
-
🏏 Match Summary 🏏
— Pakistan Cricket (@TheRealPCB) November 4, 2023 " class="align-text-top noRightClick twitterSection" data="
A stunning ton from @FakharZamanLive and a calm knock from @babarazam258 as we earn a crucial win 👏#NZvPAK | #CWC23 | #DattKePakistani pic.twitter.com/eStwvvyUta
">🏏 Match Summary 🏏
— Pakistan Cricket (@TheRealPCB) November 4, 2023
A stunning ton from @FakharZamanLive and a calm knock from @babarazam258 as we earn a crucial win 👏#NZvPAK | #CWC23 | #DattKePakistani pic.twitter.com/eStwvvyUta🏏 Match Summary 🏏
— Pakistan Cricket (@TheRealPCB) November 4, 2023
A stunning ton from @FakharZamanLive and a calm knock from @babarazam258 as we earn a crucial win 👏#NZvPAK | #CWC23 | #DattKePakistani pic.twitter.com/eStwvvyUta
ಈ ವಿಶ್ವಕಪ್ನಲ್ಲಿ ಮೊದಲ ಎರಡು ಪಂದ್ಯಗಳ ಗೆಲುವಿನ ನಂತರ ಪಾಕಿಸ್ತಾನ ನಂತರ ನಾಲ್ಕು ಸೋಲು ಕಂಡಿತ್ತು. ಮತ್ತೆ ಗೆಲುವಿನ ಲಯಕ್ಕೆ ಮರಳಿದ ಪಾಕ್ ಕಳೆದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆದ್ದ ನಂತರ, ಬೆಂಗಳೂರಿನಲ್ಲಿ ಕಿವೀಸ್ ವಿರುದ್ಧ ಜಯ ದಾಖಲಿಸಿದೆ. ಇದರಿಂದ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿರುವ ಬಾಬರ್ ಪಡೆ ಕೊನೆಯ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ. ಆಂಗ್ಲರ ವಿರುದ್ಧ ದೊಡ್ಡ ಗೆಲುವು ಸಾಧಿಸಿ ರನ್ರೇಟ್ ಸುಧಾರಿಸಿ ಕೊಂಡಲ್ಲಿ ಮಾತ್ರ ಸೆಮೀಸ್ ಪ್ರವೇಶ ಸಿಗುವ ಸಾಧ್ಯತೆ ಇದೆ.
ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿದ್ದ ಪಾಕ್ 402 ರನ್ನ ದೊಡ್ಡ ಗುರಿಯನ್ನೇ ಪಡೆದುಕೊಂಡಿತು. ಬಾಬರ್ ಪಡೆಯ ಬೌಲರ್ಗಳನ್ನು ರಚಿನ್ ರವೀಂದ್ರ (108 ಹಾಗೂ ನಾಯಕ ಕೇನ್ ವಿಲಿಯಮ್ಸನ್ (95) ಸರಿಯಾಗಿಯೇ ದಂಡಿಸಿದರು. ಬೆಂಗಳೂರಿನ ಬ್ಯಾಟಿಂಗ್ ಪಿಚ್ಗೆ ಇದು ದೊಡ್ಡ ಮೊತ್ತ ಅಲ್ಲ ಎಂದೇ ಹೇಳಬಹುದಾದರೂ, ಪಾಕಿಸ್ತಾನ ಕಳೆದ ಕೆಲ ಪಂದ್ಯಗಳ ಬ್ಯಾಟಿಂಗೆ ಇದು ಕಠಿಣ ಎಂಬಂತೆ ಕಂಡು ಬರುತ್ತಿತ್ತು.
-
Fakhar Zaman's sizzling century helps him win the @aramco #POTM in Bengaluru 👊#CWC23 | #NZvPAK 📝: https://t.co/O0c6JDidVC pic.twitter.com/Xy7iUKSEcx
— ICC Cricket World Cup (@cricketworldcup) November 4, 2023 " class="align-text-top noRightClick twitterSection" data="
">Fakhar Zaman's sizzling century helps him win the @aramco #POTM in Bengaluru 👊#CWC23 | #NZvPAK 📝: https://t.co/O0c6JDidVC pic.twitter.com/Xy7iUKSEcx
— ICC Cricket World Cup (@cricketworldcup) November 4, 2023Fakhar Zaman's sizzling century helps him win the @aramco #POTM in Bengaluru 👊#CWC23 | #NZvPAK 📝: https://t.co/O0c6JDidVC pic.twitter.com/Xy7iUKSEcx
— ICC Cricket World Cup (@cricketworldcup) November 4, 2023
ಗುರಿಯನ್ನು ಬೆನ್ನಟ್ಟಿದ ಪಾಕ್ ಟಿಮ್ ಸೌಥಿ ಆರಂಭಿಕ ಆಘಾತವನ್ನು ನೀಡಿದರು. ಕಳೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 68 ರನ್ಗ ಇನ್ನಿಂಗ್ಸ್ ಆಡಿದ್ದ ಅಬ್ದುಲ್ಲಾ ಶಫೀಕ್ ಇಂದು 4ಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ನಂತರ ಎರಡನೇ ವಿಕೆಟ್ಗೆ ಒಂದಾದ ಫಖರ್ ಜಮಾನ್ ಮತ್ತು ಬಾಬರ್ ಅಜಮ್ ಜೋಡಿ ಭರ್ಜರಿ ಬ್ಯಾಟಿಂಗ್ ಮಾಡಿತು. ಮೊದಲ ಇನ್ನಿಂಗ್ಸ್ ಮುಗಿದ ಬೆನ್ನಲ್ಲೇ ಮಳೆ ಬಂದದ್ದು ಪಾಕ್ ತಂಡಕ್ಕೆ ಬ್ಯಾಟಿಂಗ್ ವರದಾನ ಆಯಿತು ಎಂದರೆ ತಪ್ಪಾಗದು.
ತೇವಾಂಶದ ಹೊರಾಂಗಣದಿಂದಾಗಿ ಕಿವೀಸ್ ಬೌಲರ್ಗಳಿಗೆ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ. ಇದನ್ನೇ ಲಾಭವಾಗಿಸಿಕೊಂಡ ಫಖರ್ ಜಮಾನ್ 68 ಬಾಲ್ನಲ್ಲಿ ಶತಕವನ್ನು ದಾಖಲಿಸಿದರು. ವಿಶ್ವಕಪ್ ಕೊನೆಯ ಹಂತಕ್ಕೆ ತಲುಪುವ ವೇಳೆಗೆ ಭಾರತದ ಪಿಚ್ಗಳಿಗೆ ಹೊಂದಿಕೊಂಡ ಬಾಬರ್ ಅಜಮ್ ಅರ್ಧಶತಕ ದಾಖಲಿಸಿಕೊಂಡರು.
- " class="align-text-top noRightClick twitterSection" data="">
ಪಂದ್ಯಕ್ಕೆ ಮಳೆ ಅಡ್ಡಿ: 22ನೇ ಓವರ್ ಚಾಲ್ತಿಯಲ್ಲಿದ್ದಾಗ ಮಳೆ ಬಂದ ಕಾರಣ ಸುಮಾರು 2 ಗಂಟೆಗೂ ಹೆಚ್ಚು ಕಾಲ ಪಂದ್ಯವನ್ನು ನಿಲ್ಲಿಸಲಾಗಿತ್ತು. ಮಳೆ ನಿಂತ ಬಳಿಕ 41 ಓವರ್ಗೆ ಪಂದ್ಯವನ್ನು ಕಡಿತಗೊಳಿಸಿ 342ರನ್ ಗುರಿ ನೀಡಲಾಗಿತ್ತು. ಆದರೆ, ವರುಣ ಬಿಡುವು ಕೊಟ್ಟು ಮೈದಾನಕ್ಕಿಳಿದು 2 ಓವರ್ ಮಾಡುತ್ತಿದ್ದಂತೆ ಮತ್ತೆ ಮಳೆ ಸುರಿಯಿತು. ಇದರಿಂದ ಡಿಎಲ್ಎಸ್ ನಿಯಮದ ಅನ್ವಯ ಪಾಕಿಸ್ತಾನವನ್ನು 21 ರನ್ಗಳಿಂದ ವಿಜೇತ ಎಂದು ಘೋಷಿಸಲಾಯಿತು.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಬದಲಿಗೆ ಪ್ರಸಿದ್ಧ್ ಕೃಷ್ಣ ಎಷ್ಟು ಸೂಕ್ತ?: ಆಯ್ಕೆ ಸಮಿತಿಗೆ ಮಾಜಿ ಆಟಗಾರರ ಪ್ರಶ್ನೆ