ಹೈದರಾಬಾದ್ (ತೆಲಂಗಾಣ): ಸತತ ಎರಡು ವಿಶ್ವಕಪ್ನಲ್ಲಿ ರನ್ನರ್‌ಅಪ್ ಆಗಿರುವ ನ್ಯೂಜಿಲೆಂಡ್ ತಂಡ ಈ ಬಾರಿ ಆರಂಭದಿಂದಲೇ ಪ್ರಬಲ ತಂಡವಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರಮುಖ ಆಟಗಾರರ ಹೊರತಾಗಿಯೂ ಲೀಗ್ನಲ್ಲಿ ಸತತ ಎರಡು ಪಂದ್ಯಗಳನ್ನು ಉತ್ತಮ ರನ್ರೇಟ್ನಿಂದ ಜಯಿಸಿದೆ. ಇಂದು ನಡೆದ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್ ಮತ್ತು ಮ್ಯಾಟ್ ಹೆನ್ರಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು ಕಿವೀಸ್ 99 ರನ್‌ಗಳ ಅಂತರದ ಗೆಲುವಿ ಪಡೆಯಿತು. ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ ತಂಡ ಅಗ್ರಸ್ಥಾನ ಉಳಿಸಿಕೊಂಡಿದೆ.
-
New Zealand consolidate their top position in the #CWC23 points table with another win 🎉#NZvNED 📝: https://t.co/s8xJZL69dc pic.twitter.com/iKumdGRbgR
— ICC Cricket World Cup (@cricketworldcup) October 9, 2023 " class="align-text-top noRightClick twitterSection" data="
">New Zealand consolidate their top position in the #CWC23 points table with another win 🎉#NZvNED 📝: https://t.co/s8xJZL69dc pic.twitter.com/iKumdGRbgR
— ICC Cricket World Cup (@cricketworldcup) October 9, 2023New Zealand consolidate their top position in the #CWC23 points table with another win 🎉#NZvNED 📝: https://t.co/s8xJZL69dc pic.twitter.com/iKumdGRbgR
— ICC Cricket World Cup (@cricketworldcup) October 9, 2023
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಡಚ್ಚರು ಮೊದಲು ಕ್ಷೇತ್ರ ರಕ್ಷಣೆಗೆ ಮುಂದಾದರು. ಮೊದಲು ಬ್ಯಾಟ್ ಮಾಡಿದ ಕಿವೀಸ್ 323 ರನ್‌ಗಳ ಬೃಹತ್ ಗುರಿಯನ್ನು ನೆದರ್ಲೆಂಡ್‌ಗೆ ನೀಡಿದರು. ಈ ಗುರಿಯನ್ನು ಬೆನ್ನತ್ತಿದ ಡಚ್ಚರಿಗೆ ಬೃಹತ್ ಜೊತೆಯಾಟದ ಕೊರತೆ ಕಾಡಿತು. ಇದು ಅಂತಿಮವಾಗಿ ಪಂದ್ಯದ ಸೋಲಿಗೆ ಕಾರಣವಾಯಿತು. ಪಾಕಿಸ್ತಾನದ ವಿರುದ್ಧವೂ ದೊಡ್ಡ ಪಾಲುದಾರಿಕೆ ಮಾಡುವಲ್ಲಿ ಎಡವಿದ ತಂಡ ಸೋಲನುಭವಿಸಿತು. ಸತತ ಎರಡು ಸೋಲು ಕಂಡ ನೆದರ್ಲೆಂಡ್ ಅಂಕಪಟ್ಟಿಯ ಕೊನೆಗೆ ಜಾರಿತು.
ಕಿವೀಸ್ ವಿರುದ್ಧ ಡಚ್ಚರು ಉತ್ತಮ ಹೋರಾಟ ತೋರಿದರು. 46.3 ಓವರ್‌ಗವರೆಗೆ ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್ ಮತ್ತು ರಚಿನ್ ರವೀಂದ್ರ ಅವರಂತಹ ಟಾಪ್ ಕ್ಲಾಸ್ ಬೌಲರ್ಗಳನ್ನು ಯಶಸ್ವಿಯಾಗಿ ಎದುರಿಸಿ 223 ರನ್ಗಳಿಸಿದರು. 'ಕ್ರಿಕೆಟ್ ಶಿಶು' ಎಂದು ಕರೆಸಿಕೊಳ್ಳುವ ನೆದರ್ಲೆಂಡ್ ಕಿವೀಸ್ ವಿರುದ್ಧ ನೀಡಿದ ಈ ಪ್ರದರ್ಶನ ಸೋಲಿನಲ್ಲೂ ಮೆಚ್ಚುವಂತಿತ್ತು.
ತಂಡದಲ್ಲಿ ಆರಂಭದಿಂದ ಜೊತೆಯಾಟ ನಿರ್ಮಾಣವಾಗಲಿಲ್ಲ. ಕಾಲಿನ್ ಅಕರ್ಮನ್ 69 ರನ್‌ಗಳ ಇನ್ನಿಂಗ್ಸ್ ಕಟ್ಟಿದ್ದು ಬಿಟ್ಟರೆ ಬಾಕಿ ಆಟಗಾರರು ಕಿವೀಸ್ ದಾಳಿಯ ಮುಂದೆ ವಿಕೆಟ್ ರಕ್ಷಿಸಿಕೊಳ್ಳಲು ಪ್ರಯತ್ನಿಸಿದರು. ಸ್ಕಾಟ್ ಎಡ್ವರ್ಡ್ಸ್ (30), ಸೈಬ್ರಾಂಡ್ ಎಂಗಲ್ಬ್ರೆಕ್ಟ್ (29) ಮತ್ತು ತೇಜ ನಿಡಮನೂರು (21) ಮಧ್ಯಮ ಕ್ರಮಾಂಕದಲ್ಲಿ ಕಿವೀಸ್ಗೆ ಪ್ರತಿರೋಧ ಒಡ್ಡಿದ್ದು ಬಿಟ್ಟರೆ ಮತ್ತಾರೂ ರನ್ ಗಳಿಸುವಲ್ಲಿ ಸಫಲರಾಗಲಿಲ್ಲ.
-
Mitchell Santner picks the first five-wicket haul of #CWC23 🔥@mastercardindia Milestones 🏏#CWC23 | #NZvNED pic.twitter.com/UAtapXI8RZ
— ICC Cricket World Cup (@cricketworldcup) October 9, 2023 " class="align-text-top noRightClick twitterSection" data="
">Mitchell Santner picks the first five-wicket haul of #CWC23 🔥@mastercardindia Milestones 🏏#CWC23 | #NZvNED pic.twitter.com/UAtapXI8RZ
— ICC Cricket World Cup (@cricketworldcup) October 9, 2023Mitchell Santner picks the first five-wicket haul of #CWC23 🔥@mastercardindia Milestones 🏏#CWC23 | #NZvNED pic.twitter.com/UAtapXI8RZ
— ICC Cricket World Cup (@cricketworldcup) October 9, 2023
ಸ್ಯಾಂಟ್ನರ್‌ಗೆ 5 ವಿಕೆಟ್ ಗುಚ್ಚ: ನ್ಯೂಜಿಲೆಂಡ್ ಪರ ಸ್ಯಾಂಟ್ನರ್ ಐದು ವಿಕೆಟ್ ಕಿತ್ತು ಸ್ಟಾರ್ ಆದರು. ಈ ಮೂಲಕ 2023 ವಿಶ್ವಕಪ್ನಲ್ಲಿ ಐದು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು. ವಿಶ್ವಕಪ್ನಲ್ಲಿ 5 ವಿಕೆಟ್ ಕಿತ್ತ ಮೂರನೇ ಎಡಗೈ ಸ್ಪಿನ್ನರ್ ಎಂಬ ಪಟ್ಟಿಗೂ ಸೇರ್ಪಡೆಯಾದರು. ಈ ಮೊದಲು ಯುವರಾಜ್ ಸಿಂಗ್ (2011), ಶಕೀಬ್ ಅಲ್ ಹಸನ್ (2019) ಈ ಸಾಧನೆ ಮಾಡಿದ್ದರು. ಉಳಿದಂತೆ, ಮ್ಯಾಟ್ ಹೆನ್ರಿ 3 ಮತ್ತು ರಚಿನ್ ರವೀಂದ್ರ 1 ವಿಕೆಟ್ ಕಬಳಿಸಿದರು. ಪಂದ್ಯದಲ್ಲಿ ಐದು ವಿಕೆಟ್ ಪಡೆದ ಸ್ಯಾಂಟ್ನರ್ 'ಪಂದ್ಯ ಶ್ರೇಷ್ಠ' ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: ಪಾಕ್ ವಿರುದ್ಧದ ಪಂದ್ಯಕ್ಕೆ ಮಹೇಶ್ ತೀಕ್ಷಣ ಸೇರ್ಪಡೆ: ಶ್ರೀಲಂಕಾ ಸಹಾಯಕ ಕೋಚ್