ETV Bharat / sports

ವಿಶ್ವಕಪ್​ ಕ್ರಿಕೆಟ್​: ಪಾಲ್ ವ್ಯಾನ್ ಮೀಕೆರೆನ್ ಬೌಲಿಂಗ್​ ದಾಳಿಗೆ ಬಾಂಗ್ಲಾ ತತ್ತರ; ಡಚ್ಚರಿಗೆ 87 ರನ್​ ಗೆಲುವು - ETV Bharath Karnataka

ಕೋಲ್ಕತ್ತಾದ ಈಡನ್​ಗಾರ್ಡ್​ನ್​ ಮೈದಾನದಲ್ಲಿ ಬಾಂಗ್ಲಾ ವಿರುದ್ಧ ನೆದರ್ಲೆಂಡ್ಸ್​ 87 ರನ್​ಗಳ ಜಯ ದಾಖಲಿಸಿದೆ.

ICC Cricket World Cup 2023
ವಿಶ್ವಕಪ್​ ಕ್ರಿಕೆಟ್​
author img

By ETV Bharat Karnataka Team

Published : Oct 28, 2023, 9:33 PM IST

Updated : Oct 28, 2023, 10:20 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಮಣಿಸಿದ ಡಚ್ಚರು ಕೋಲ್ಕತ್ತಾದ ಈಡನ್​ಗಾರ್ಡನ್​ ಮೈದಾನದಲ್ಲಿ ಬಾಂಗ್ಲಾದೇಶವನ್ನು 87 ರನ್​ನಿಂದ ಸೋಲಿಸಿದ್ದಾರೆ. ನೆದರ್ಲೆಂಡ್ಸ್​​​ ನೀಡಿದ್ದ 230 ರನ್​ನ ಗುರಿಯನ್ನು ಬೆನ್ನತ್ತಿದ್ದ ಬಾಂಗ್ಲಾದೇಶ 42.2 ಓವರ್​ಗೆ 142 ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡಿತು. ನೆದರ್ಲೆಂಡ್ಸ್​ ಟೂರ್ನಿಯಲ್ಲಿ ತನ್ನ ಎರಡನೇ ಜಯವನ್ನು ದಾಖಲಿಸಿದೆ. ಇದರಿಂದ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಅಂಕಪಟ್ಟಿಯಲ್ಲಿ ತಳಮಟ್ಟಕ್ಕೆ ಇಳಿದಿದೆ.

ನೆದರ್ಲೆಂಡ್ಸ್ ತಂಡ ಬೌಲಿಂಗ್​ ಬಲದಿಂದ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಚೇಸಿಂಗ್​ ಮಾಡದಂತೆ ಕಟ್ಟಿಹಾಕಿತ್ತು. ಅದೇ ರೀತಿ ಬಾಂಗ್ಲಾದೇಶದ ಮೇಲೂ ಪ್ರಬಲ್ಯ ಪ್ರದರ್ಶಿಸಿತು. 6 ರಲ್ಲಿ 5 ಪಂದ್ಯವನ್ನು ಸೋಲು ಕಂಡಿರುವ ಬಾಂಗ್ಲಾದೇಶ ಪ್ಲೇ ಆಫ್​ನಿಂದ ಹೆಚ್ಚು ಕಡಿಮೆ ಹೊರಬಿದ್ದಿದೆ.

  • And that's that! 👊

    PVM has his 4th and we celebrate in Kolkata at a time when the whole city is in a festive mood!

    Thank you, Kolkata. Thank you for making a part of these celebrations.🧡#NEDvBAN #CWC23 pic.twitter.com/injvZQgdn9

    — Cricket🏏Netherlands (@KNCBcricket) October 28, 2023 " class="align-text-top noRightClick twitterSection" data=" ">

230 ರನ್​ನ ಸಾಮಾನ್ಯ ಗುರಿಯನ್ನು ಸಾಧಿಸುವಲ್ಲಿ ಬಾಂಗ್ಲಾ ಟೈಗರ್ಸ್​ ವಿಫಲರಾದರು. ಡಚ್​ ಬೌಲರ್​ಗಳು ನಾಯಕ ಇರಿಸಿದ್ದ ನಂಬಿಕೆಯನ್ನು ಉಳಿಸಿಕೊಂಡರು. ಬಾಂಗ್ಲಾದ ಮೆಹಿದಿ ಹಸನ್ ಮಿರಾಜ್ 35, ಮಹಮ್ಮದುಲ್ಲಾ 20 ಮತ್ತು ಮುಸ್ತಾಫಿಜುರ್ ರೆಹಮಾನ್ 20 ರನ್​ ಗಳಿಸಿದ್ದು ಬಿಟ್ಟರೆ, ಮತ್ತೆಲ್ಲಾ ಬ್ಯಾಟರ್​​ಗಳು 20 ರನ್​ ಗಳಿಸಲೂ ವಿಫಲರಾದರು. ತಂಝಿದ್ ಹಸನ್ (3), ಲಿಟ್ಟನ್ ದಾಸ್ (15), ನಜ್ಮುಲ್ ಹೊಸೈನ್ ಶಾಂಟೊ (9), ಶಕೀಬ್ ಅಲ್ ಹಸನ್ (5), ಮುಶ್ಫಿಕರ್ ರಹೀಮ್ (1) ಮತ್ತು ಮೆಹದಿ ಹಸನ್ (11) ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರರು.

ವೇಗಿಗಳ ಕಮಾಲ್: ಪಾಲ್ ವ್ಯಾನ್ ಮೀಕೆರೆನ್ 4 ವಿಕೆಟ್​ ಮತ್ತು ಬಾಸ್ ಡಿ ಲೀಡೆ ಪ್ರಮುಖ ಎರಡು ವಿಕೆಟ್​ ಕಬಳಿಸಿದರು. ನೆದರ್ಲೆಂಡ್ಸ್​ ಮಾಡಿದ ಕರಾರುವಾಕ್​ ದಾಳಿಗೆ ಬಾಂಗ್ಲಾ ಟೈಗರ್ಸ್​ ಜೊತೆಯಾಟ ಆಡಲೇ ಇಲ್ಲ. ಸತತ 15, 20 ರನ್​ ಜತೆಯಾಟ ಬೆಳವಣಿಗೆ ಆಗುತ್ತಿದ್ದಂತೆ ವಿಕೆಟ್​ ಒಪ್ಪಿಸಿದರು. ಇದರಿಂದ ಬಾಂಗ್ಲಾಕ್ಕೆ ಗೆಲುವು ಕಠಿಣವಾಗುತ್ತಾ ಬಂತು. ಮಧ್ಯಮ ಕ್ರಮಾಂಕದಲ್ಲಿ ನಜ್ಮುಲ್ ಹೊಸೈನ್ ಶಾಂಟೊ (9), ಶಕೀಬ್ ಅಲ್ ಹಸನ್ (5), ಮುಶ್ಫಿಕರ್ ರಹೀಮ್ (1) ವಿಫಲತೆ ತಂಡಕ್ಕೆ ದೊಡ್ಡ ಹೊಡೆತವನ್ನು ನೀಡಿತು.

7.2 ಓವರ್​ಗೆ 23 ರನ್​ ಬಿಟ್ಟು ಕೊಟ್ಟು ನಾಲ್ಕು ವಿಕೆಟ್​ ಕಬಳಿಸಿದ ಪಾಲ್ ವ್ಯಾನ್ ಮೀಕೆರೆನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​: ಕಾಂಗರೂ ಪಡೆಯ ಬಿಗಿ ಕ್ಷೇತ್ರ ರಕ್ಷಣೆ.. ಕಿವೀಸ್​ಗೆ 5 ರನ್​ನಿಂದ ಸೋಲು

Last Updated : Oct 28, 2023, 10:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.