ETV Bharat / sports

ವಿಶ್ವಕಪ್​ ಕ್ರಿಕೆಟ್​: ಮಿಚೆಲ್ ಶತಕದಾಟ, ಭಾರತಕ್ಕೆ 274 ರನ್​ ಗುರಿ ನೀಡಿದ ನ್ಯೂಜಿಲೆಂಡ್ - ಭಾರತಕ್ಕೆ 274 ರನ್​ನ ಗುರಿ

ಧರ್ಮಶಾಲಾ ಮೈದಾನದಲ್ಲಿ ಇಂದು ಭಾರತ ತಂಡದ ತ್ರಿವಳಿ ವೇಗಿಗಳು ಉತ್ತಮ ಪ್ರದರ್ಶನ ನೀಡಿದ್ದು, 273 ರನ್​ಗಳಿಗೆ ನ್ಯೂಜಿಲೆಂಡ್ ತಂಡವ​ನ್ನು ಕಟ್ಟಿ ಹಾಕಿದರು.

ICC Cricket World
ICC Cricket World
author img

By ETV Bharat Karnataka Team

Published : Oct 22, 2023, 6:14 PM IST

Updated : Oct 22, 2023, 6:38 PM IST

ಧರ್ಮಶಾಲಾ (ಹಿಮಾಚಲ ಪ್ರದೇಶ): ಆರಂಭಿಕ ಆಟಗಾರರ ವೈಫಲ್ಯದ ನಡುವೆಯೂ ಮೂರನೇ ವಿಕೆಟ್​ಗೆ ರಚಿನ್ ರವೀಂದ್ರ ಮತ್ತು ಡೇರಿಲ್ ಮಿಚೆಲ್ ಅವರ ಶತಕದ ಜತೆಯಾಟದ ಫಲವಾಗಿ ಧರ್ಮಶಾಲಾ ಪಿಚ್​ನಲ್ಲಿಂದು ನಿಗದಿತ ಓವರ್‌ಗಳ ಅಂತ್ಯಕ್ಕೆ ನ್ಯೂಜಿಲೆಂಡ್ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡು 273 ರನ್​ ಕಲೆ ಹಾಕಿತು. 2023ರ ವಿಶ್ವಕಪ್​ನಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿರುವ ಭಾರತ, 274 ರನ್‌ ಗುರಿ​ ಭೇದಿಸಿದಲ್ಲಿ 5ನೇ ಗೆಲುವು ಪಡೆಯಲಿದೆ.

ಟಾಸ್​ ಗೆದ್ದ ರೋಹಿತ್​ ಶರ್ಮಾ ಸಂಜೆಯ ಮಂಜಿನ ಲಾಭ ಪಡೆಯುವ ಉದ್ದೇಶದಿಂದ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್​ಗಿಳಿದ ನ್ಯೂಜಿಲೆಂಡ್​ ಬ್ಯಾಟರ್‌ಗಳು ಮೊಹಮ್ಮದ್​ ಸಿರಾಜ್​ ಮತ್ತು ಜಸ್ಪ್ರೀತ್​ ಬುಮ್ರಾ ಅವರ ಸ್ವಿಂಗ್ ದಾಳಿ ಎದುರಿಸುವಲ್ಲಿ ವಿಫಲರಾದರು. ​ಇದರಿಂದ 1 ಮತ್ತು 4ನೇ ಓವರ್​ನಲ್ಲಿ ಯಾವುದೇ ರನ್​​ ಗಳಿಸಲು ಸಾಧ್ಯವಾಗಲಿಲ್ಲ. ಎಡಗೈ ಆರಂಭಿಕ ಡೆವೊನ್ ಕಾನ್ವೆ ಶೂನ್ಯಕ್ಕೆ ವಿಕೆಟ್​​ ಒಪ್ಪಿಸಿದರು. ನಂತರ ತಂಡಕ್ಕೆ 10 ರನ್​ ಸೇರಿಸುವಷ್ಟರಲ್ಲಿ ವಿಲ್ ಯಂಗ್ ಸಹ ವಿಕೆಟ್​ ಕೊಟ್ಟರು.

3ನೇ ವಿಕೆಟ್​ಗೆ ದಾಖಲೆಯ ಜತೆಯಾಟ: 10 ಓವರ್‌ನೊಳಗೆ ಇಬ್ಬರು ಆರಂಭಿಕರ ವಿಕೆಟ್​ ಉರುಳಿದ್ದಲ್ಲದೇ, ಭಾರತೀಯ ವೇಗಿಗಳೆದುರು ಕೇವಲ 34 ರನ್​ ಗಳಿಸಲಷ್ಟೇ ಶಕ್ತವಾಗಿದ್ದರು. ಆದರೆ ಮೂರನೇ ವಿಕೆಟ್​ಗೆ ಒಂದಾದ ರಚಿನ್ ರವೀಂದ್ರ ಮತ್ತು ಡೇರಿಲ್ ಮಿಚೆಲ್ ನಿಧಾನಗತಿಯಲ್ಲಿ ಇನ್ನಿಂಗ್ಸ್ ಬೆಳೆಸಿದರು. ಈ ಜೋಡಿ ರನ್ ಗಳಿಸುವುದರ ಜತೆಗೆ ವಿಕೆಟ್​ ಕಾಯ್ದುಕೊಂಡು ಬ್ಯಾಟಿಂಗ್​ ಮಾಡಿತು. ಇಬ್ಬರೂ ಬ್ಯಾಟರ್​​ಗಳು 100 ಸ್ಟ್ರೈಕ್​ರೇಟ್​ನಲ್ಲೇ ಬ್ಯಾಟಿಂಗ್​ ಮಾಡಿದರು. ಯಾವುದೇ ಅನಾವಶ್ಯಕ ಹೊಡೆತಗಳಿಗೆ ಮುಂದಾಗದೆ ಎಚ್ಚರಿಕೆಯ ಬ್ಯಾಟಿಂಗ್​ ಮಾಡಿದರು.

  • " class="align-text-top noRightClick twitterSection" data="">

9ನೇ ಓವರ್​​ಗೆ ಒಂದಾದ ಈ ಇಬ್ಬರು ಬ್ಯಾಟರ್​ಗಳು 34ನೇ ಓವರ್‌ವರೆಗೆ ಭಾರತೀಯ ಬೌಲರ್​ಗಳನ್ನು ಕಾಡಿ 159 ರನ್​ಗಳ ಜತೆಯಾಟ ಮಾಡಿದರು. ಕೇನ್​ ವಿಲಿಯಮ್ಸನ್​ ಬದಲಾಗಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್​ ಮಾಡುತ್ತಿರುವ ರಚಿನ್​ ಅವರಂತೆ ತಾಳ್ಮೆ ಪ್ರದರ್ಶಿಸಿದರು. 12 ರನ್​ ಗಳಿಸಿದ್ದಾಗ ಜಡೇಜಾ ಕ್ಯಾಚ್​ ಚೆಲ್ಲಿದ್ದರಿಂದ ರಚಿನ್​ಗೆ ಒಂದು ಜೀವದಾನವೂ ಸಿಕ್ಕಿತ್ತು. ಇದನ್ನು ಸಂಪೂರ್ಣವಾಗಿ ಬಳಸಿಕೊಂಡ ರಚಿನ್​ 87 ಎಸೆತ​ ಎದುರಿಸಿ 6 ಬೌಂಡರಿ ಮತ್ತು 1 ಸಿಕ್ಸ್​ನ ನೆರವಿನಿಂದ 75 ರನ್​ ಕೆಲೆಹಾಕಿದರು.

159 ರನ್​ಗಳ ಜತೆಯಾಟ ಬ್ರೇಕ್​ ಆಗುತ್ತಿದ್ದಂತೆ ಮಣಿಕಟ್ಟಿನ ಸ್ಪಿನ್ನರ್​ ಕುಲ್ದೀಪ್​ ಯಾದವ್​ ತಮ್ಮ ಕೈಚಳಕ ತೋರಿದರು. ನಾಯಕ ಟಾಮ್ ಲ್ಯಾಥಮ್ (5) ಎಲ್​ಬಿಡಬ್ಲೂಗೆ ಬಲಿಯಾದರು. ನಂತರ ಗ್ಲೆನ್ ಫಿಲಿಪ್ಸ್ ಮಿಚೆಲ್​ ಜತೆಗೆ ಪಾಲುದಾರಿಕೆ ಮಾಡುವಂತೆ ಕಂಡುಬಂದರು. ಆದರೆ ಕುಲ್ದೀಪ್ ಅವರ ಬಾಲ್​ ಜಡ್ಜ್​ ಮಾಡುವುದರಲ್ಲಿ ಎಡವಿದ ಗ್ಲೆನ್ ಫಿಲಿಪ್ಸ್ (23) ನಾಯಕ ರೋಹಿತ್​ಗೆ ಕ್ಯಾಚ್​ ಕೊಟ್ಟರು. ಫಿಲಿಫ್ಸ್​ ಬೆನ್ನಲ್ಲೇ ಮಾರ್ಕ್ ಚಾಪ್ಮನ್ (6) ಪರಿಣಾಮ ಬೀರದೇ ಬುಮ್ರಾಗೆ ವಿಕೆಟ್​ ಕೊಟ್ಟರು.

ಶಮಿಗೆ 5 ವಿಕೆಟ್: ವಿಲ್​ ಯಂಗ್​ ಮತ್ತು 75 ರನ್​ ಗಳಿಸಿದ್ದ ರಚಿನ್ ವಿಕೆಟ್​ ಪಡೆದಿದ್ದ ಮೊಹಮ್ಮದ್​ ಶಮಿ ಬಾಲಂಗೋಚಿಗಳನ್ನು ಕಾಡಿದರು. ಪರಿಣತ ಯಾರ್ಕರ್​ ಬೌಲ್​ಗಳಿಂದ ಕೊನೆಯ ಮೂರು ವಿಕೆಟ್​ಕಿತ್ತರು. ಮಿಚೆಲ್ ಸ್ಯಾಂಟ್ನರ್ (1) ಮತ್ತು ಮ್ಯಾಟ್ ಹೆನ್ರಿ (0) ಕ್ರೀಸ್​ಗೆ ಬಂದಹಾಗೆ ತೆರಳಿದರು. 127 ಬಾಲ್​ನಲ್ಲಿ 130 ರನ್​ ಗಳಿಸಿ ಆಡುತ್ತಿದ್ದ ಡೇರಿಲ್ ಮಿಚೆಲ್ ಸಿಕ್ಸ್​ ಗಳಿಸಲು ಹೋಗಿ ಡೆತ್​ ಓವರ್​ನಲ್ಲಿ ಔಟಾದರು. ವಿಶ್ವಕಪ್​ನಲ್ಲಿ ಐದು ವಿಕೆಟ್​ ಪಡೆದ ಸಾಧನೆಯನ್ನು ಶಮಿ ಮಾಡಿದರು. ಇನ್ನುಳಿದಂತೆ ಕುಲ್ದೀಪ್​ 2, ಸಿರಾಜ್​ ಮತ್ತು ಬುಮ್ರಾ ತಲಾ ಒಂದೊಂದು ವಿಕೆಟ್​ ಕಬಳಿಸಿದರು.

ಇದನ್ನೂ ಓದಿ: ಫೀಲ್ಡಿಂಗ್ ಮಾಂತ್ರಿಕ ಜಡೇಜಾ ಕೈ ತಪ್ಪಿದ ಸರಳ ಕ್ಯಾಚ್!- ವಿಡಿಯೋ

Last Updated : Oct 22, 2023, 6:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.