ETV Bharat / sports

ವಿಶ್ವಕಪ್​ ಕ್ರಿಕೆಟ್​: ನ್ಯೂಜಿಲೆಂಡ್​ ಮಣಿಸಿ ಫೈನಲ್​ಗೇರಿದ ಭಾರತ; ಸಪ್ತ ವಿಕೆಟ್​ ಪಡೆದು ಮಿಂಚಿದ ಶಮಿ

India won by 70 runs: ನ್ಯೂಜಿಲೆಂಡ್​ ವಿರುದ್ಧ ಭಾರತ ವಾಂಖೆಡೆ ಕ್ರೀಡಾಂಗಣದಲ್ಲಿ 70 ರನ್​ಗಳ ಅಮೋಘ ಜಯ ದಾಖಲಿಸಿದೆ.

ICC Cricket World Cup 2023 India vs New Zealand

author img

By ETV Bharat Karnataka Team

Published : Nov 15, 2023, 10:33 PM IST

Updated : Nov 15, 2023, 11:01 PM IST

ಮುಂಬೈ (ಮಹಾರಾಷ್ಟ್ರ): 2019ರ ವಿಶ್ವಕಪ್​ ಸೆಮೀಸ್​ ಸೇಡನ್ನು ರೋಹಿತ್​ ಪಡೆ ತೀರಿಸಿಕೊಂಡಿದ್ದು, 70 ರನ್​ನಿಂದ ನ್ಯೂಜಿಲೆಂಡ್​ ತಂಡವನ್ನು ಮಣಿಸಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ. ಅಲ್ಲದೇ ಟೀಮ್​ ಇಂಡಿಯಾ 2023ರ ವಿಶ್ವಕಪ್​ನಲ್ಲಿ 10ನೇ ಜಯ ದಾಖಲಿಸಿದೆ. ಚಾಂಪಿಯನ್​ ಪಟ್ಟವನ್ನು ಅಲಂಕರಿಸಲು, ಇನ್ನು ಒಂದು ಹೆಜ್ಜೆ ಮಾತ್ರ ಹಿಂದಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡಕ್ಕೆ ನೆರವಾಗಿದ್ದು ಮೊಹಮ್ಮದ್​ ಶಮಿ. ಸೋಲಿನ ಆತಂಕದಲ್ಲಿದ್ದ ಭಾರತಕ್ಕೆ ಶಮಿ 7 ವಿಕೆಟ್​ ಪಡೆದು ಜಯಕ್ಕೆ ಪ್ರಮುಖ ಕಾರಣರಾದರು. ಕಿವೀಸ್​ನ ಮೊದಲ ಐದು ಪ್ರಮುಖ ವಿಕೆಟ್​ಗಳಾದ ಡೆವೊನ್ ಕಾನ್ವೆ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ ಅವರನ್ನು ಪೆವಿಲಿಯನ್​ಗೆ ಕಳಿಸಿದರು. ಇದೇ ವಿಶ್ವಕಪ್​ನಲ್ಲಿ ಶಮಿ 3ನೇ ಬಾರಿಗೆ 5 ವಿಕೆಟ್​ ಪಡೆದ ಸಾಧನೆ ಮಾಡಿದರು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡ ವಿರಾಟ್​​ ಕೊಹ್ಲಿ (117), ಶ್ರೇಯಸ್​ ಅಯ್ಯರ್​ (105) ಅವರ ಶತಕ ಮತ್ತು ಶುಭಮನ್​ ಗಿಲ್​ (80) ಅವರ ಅರ್ಧಶತಕದ ನೆರವಿನಿಂದ ತಂಡ 4 ವಿಕೆಟ್​ ಕಳೆದುಕೊಂಡು 397 ರನ್​ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಕಿವೀಸ್​ ಆರಂಭಿಕ ಆಘಾತಕ್ಕೆ ಒಳಗಾದರು. ಡೆವೊನ್ ಕಾನ್ವೆ (13) ಮತ್ತು ರಚಿನ್ ರವೀಂದ್ರ (13) ರನ್​ ಗಳಿಸಲಾಗದೇ ವಿಕೆಟ್​ ಕೊಟ್ಟರು.

ಕಿವೀಸ್​ ಪಡೆ ಮೂರನೇ ವಿಕೆಟ್​ಗೆ ಉತ್ತಮ ಕಮ್​ಬ್ಯಾಕ್​ ಮಾಡಿತು. ಡೇರಿಲ್ ಮಿಚೆಲ್ (134) ಮತ್ತು ನಾಯಕ ಕೇನ್ ವಿಲಿಯಮ್ಸನ್ (69) ವಿಕೆಟ್​ ನಿಲ್ಲಿಸಿ ತಂಡಕ್ಕೆ ಆಸರೆ ಆದರು. ಇದರಿಂದ ಕಿವೀಸ್​ ಪಡೆಯಲ್ಲಿ ಗೆಲುವಿನ ಆಸೆ ಚಿಗುರಿತು. ಮಧ್ಯಮ ಕ್ರಮಾಂಕದಲ್ಲಿ ಸ್ಪಿನ್ನರ್​ಗಳು ರನ್​ಗೆ ಕಡಿವಾಣ ಹಾಕಿದರೇ ಹೊರತು ವಿಕೆಟ್​ ತೆಗೆಯುವಲ್ಲಿ ಯಶಸ್ವಿ ಆಗಲಿಲ್ಲ. ಇದು ಭಾರತದ ಹಿನ್ನಡೆಗೆ ಕಾರಣವಾಯಿತು.

  • Congratulations to Team India!

    India puts up a superlative performance and enters the Finals in remarkable style.

    Fantastic batting and good bowling sealed the match for our team.

    Best wishes for the Finals!

    — Narendra Modi (@narendramodi) November 15, 2023 " class="align-text-top noRightClick twitterSection" data=" ">

ಮತ್ತೆ ಶಮಿ ಮಿಂಚು: ಮೊದಲೆರಡು ವಿಕೆಟ್​ ಪಡೆದಿದ್ದ ಶಮಿ 33ನೇ ಓವರ್​ನಲ್ಲಿ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲ್ಯಾಥಮ್ ವಿಕೆಟ್​ ಕಬಳಿಸಿದರು. ಗ್ಲೆನ್ ಫಿಲಿಪ್ಸ್ ಬುಮ್ರಾಗೆ, ಮಾರ್ಕ್ ಚಾಪ್ಮನ್ ಕುಲ್ದೀಪ್​ಗೆ ಹಾಗೂ ಮಿಚೆಲ್ ಸ್ಯಾಂಟ್ನರ್ ಜಡೇಜಾಗೆ ವಿಕೆಟ್​ ಒಪ್ಪಿಸಿದರು. ಈ ವೇಳೆಗೆ ಪಂದ್ಯದ ದಿಕ್ಕೇ ಬದಲಾಗಿತ್ತು. ಡೇರಿಲ್ ಮಿಚೆಲ್ ಏಕಾಂಗಿಯಾಗಿ ಕ್ರೀಸ್​ನಲ್ಲಿ ನಿಂತಿದ್ದರು. ಅವರನ್ನು ಶಮಿ ತಮ್ಮ ತೆಕ್ಕೆಗೆ ತೆಗೆದುಕೊಂಡರು.

ಮಧ್ಯಮ ಓವರ್​ಗಳ ರನ್ ಕಡಿವಾಣದಿಂದಾಗಿ ಕೊನೆಯ ಓವರ್​ಗಳಲ್ಲಿ ನ್ಯೂಜಿಲೆಂಡ್​ ತಂಡಕ್ಕೆ ರನ್​ರೇಟ್​ನ ಒತ್ತಡ ಉಂಟಾಯಿತು. ಇದರಿಂದ ದೊಡ್ಡ ಹೊಡೆತಗಳಿಗೆ ಪ್ರಯತ್ನಿಸಿದ ಆಟಗಾರರು ವಿಕೆಟ್​ ಕಳೆದುಕೊಂಡರು. ಕೊನೆಯಲ್ಲಿ ಟಿಮ್ ಸೌಥಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್ ರನ್​ ಗಳಿಸುವುದಿರಲಿ ವಿಕೆಟ್​ ರಕ್ಷಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಇದರಿಂದ ನ್ಯೂಜಿಲೆಂಡ್​ 48.5 ಓವರ್​ಗೆ 327ರನ್​ ಗಳಿಗೆ ಸರ್ವಪತನ ಕಂಡಿತು.

ಶಮಿ ಪಂದ್ಯ ಶ್ರೇಷ್ಠ: ಭಾರತದ ಯಾವುದೇ ಬೌಲರ್​ಗಳು ವಿಕೆಟ್​ ಪಡೆಯುವಲ್ಲಿ ಯಶಸ್ವಿ ಆಗದಿದ್ದಾಗ ಶಮಿ ಮಾತ್ರ ಎದುರಾಳಿಗಳನ್ನು ಕಾಡಿದರು. 9.5 ಓವರ್​ ಮಾಡಿದ ಶಮಿ 5.80 ಎಕಾನಮಿಯಲ್ಲಿ ಬೌಲಿಂಗ್​ ಮಾಡಿ 57 ರನ್​ ಕೊಟ್ಟು 7 ವಿಕೆಟ್​ ಕಬಳಿಸಿದರು. ಏಕದಿನ ಇತಿಹಾಸದಲ್ಲೇ 7 ವಿಕೆಟ್​ ಪಡೆದ ಮೊದಲ ಬೌಲರ್​ ಎಂಬ ಖ್ಯಾತಿಗೆ ಶಮಿ ಒಳಗಾದರು. ಅಲ್ಲದೇ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಶಮಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಇದನ್ನೂ ಓದಿ: Virat Kohli: ಏಕದಿನ ಶತಕಗಳ ಅರ್ಧಶತಕ ದಾಖಲಿಸಿದ ವಿರಾಟ್​: ಸಚಿನ್​ ದಾಖಲೆ ಉಡೀಸ್​

Last Updated : Nov 15, 2023, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.