ETV Bharat / sports

ಅಬ್ಬರಿಸಿ ಬೊಬ್ಬಿರಿದ ಹರಿಣ ಪಡೆ: ಹಾಲಿ ಚಾಂಪಿಯನ್​ ಇಂಗ್ಲೆಂಡ್​ಗೆ ಮಣ್ಣುಮುಕ್ಕಿಸಿದ ದ.ಆಫ್ರಿಕಾ..  ಆಂಗ್ಲರಿಗೆ 229 ರನ್​​ಗಳ ಹೀನಾಯ ಸೋಲು​ - ದಕ್ಷಿಣ ಆಫ್ರಿಕಾ

ಮುಂಬೈನ ವಾಂಖೆಂಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 400 ರನ್​ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್​ 170ಕ್ಕೆ ಸರ್ವಪತನ ಕಂಡಿದ್ದು, 229 ರನ್​ಗಳಿಂದ ಸೋಲನುಭವಿಸಿದೆ.

Etv Bharat
Etv Bharat
author img

By ETV Bharat Karnataka Team

Published : Oct 21, 2023, 8:47 PM IST

Updated : Oct 21, 2023, 9:17 PM IST

ಮುಂಬೈ (ಮಹಾರಾಷ್ಟ್ರ): ಹಾಲಿ ಚಾಂಪಿಯನ್​ ಇಂಗ್ಲೆಂಡ್ 2023ರ ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನವನ್ನು ಮುಂದುವರೆಸಿದೆ. ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್​ 170 ರನ್​ಗಳಿಗೆ ಸರ್ವಪತನ ಕಂಡು 229 ರನ್​ನಿಂದ ಪರಾಜಯ ಅನುಭವಿಸಿದೆ. ವಿಶ್ವಕಪ್​ನ ನಾಲ್ಕು ಪಂದ್ಯದಲ್ಲಿ ಮೂರು ದೊಡ್ಡ ಸೋಲು ಕಂಡಿರುವ ಆಂಗ್ಲರಿಗೆ ಪ್ಲೇ ಆಫ್​ ಹಾದಿ ಹೆಚ್ಚು ಕಡಿಮೆ ಮುಚ್ಚಿದಂತಾಗಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಹೆನ್ರಿಚ್​ ಕ್ಲಾಸೆನ್ ಶತಕ ಹಾಗೂ ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್​ ಡಸ್ಸೆನ್ ಮತ್ತು ಮಾರ್ಕೊ ಜಾನ್ಸೆನ್ ಅವರ ಅರ್ಧಶತಕದ ಆಟದ ನೆರವಿನಿಂದ 400 ರನ್​ನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್​ ತಂಡ 12ನೇ ಓವರ್​ಗೆ ನಾಲ್ಕು ವಿಕೆಟ್​ಗಳನ್ನು ಕಳೆದುಕೊಂಡಿತು. 9ನೇ ವಿಕೆಟ್​ನಲ್ಲಿ ಗಸ್ ಅಟ್ಕಿನ್ಸನ್ ಮತ್ತು ಮಾರ್ಕ್ ವುಡ್ ಮಾಡಿದ 70 ರನ್​ನ ಜೊತೆಯಾಟ ತಂಡ 120ರ ಒಳಗೆ ಆಲ್​ಔಟ್​ ಆಗುವುದನ್ನು ತಪ್ಪಿಸಿತು.

ಬಲಿಷ್ಠ ಅನುಭವಿ ಬ್ಯಾಟರ್​​ಗಳನ್ನು ಹೊಂದಿರುವ ಇಂಗ್ಲೆಂಡ್​ ಹರಿಣಗಳ ವೇಗದ ದಾಳಿಯ ಮುಂದೆ ಮಂಡಿಯೂರಿತು. 3ನೇ ಓವರ್​ನಲ್ಲಿ ಲುಂಗಿ ಎನ್​ಗಿಡಿ ಜಾನಿ ಬೈರ್‌ಸ್ಟೋವ್ (10) ವಿಕೆಟ್​ ಪಡೆದರು. ನಂತರ 4 ಮತ್ತು 6ನೇ ಓವರ್​ನಲ್ಲಿ ಮಾರ್ಕೊ ಜಾನ್ಸೆನ್ ಡೇವಿಡ್​ ಮಲನ್ (6)​, ಜೋ ರೂಟ್ (2) ವಿಕೆಟ್​ ಕಿತ್ತರು. ವಿಶ್ವಕಪ್​ಗಾಗಿ ನಿವೃತ್ತಿ ಹಿಂಪಡೆದು ತಂಡಕ್ಕೆ ಮರಳಿದ ಬೆನ್​ ಸ್ಟೋಕ್ಸ್ 5 ರನ್​ಗೆ ವಿಕೆಟ್​ ಕೊಟ್ಟರು. 8 ಓವರ್​ಗೆ 38 ರನ್​ಗೆ ಇಂಗ್ಲೆಂಡ್​ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.

ಬೃಹತ್​ ಗುರಿಯನ್ನು ಬೆನ್ನಟ್ಟುವ ಉದ್ದೇಶದಿಂದ ಎಲ್ಲಾ ಆಟಗಾರರು ಬಿರುಸಿನ ಆಟಕ್ಕೆ ಮುಂದಾಗಿ ವಿಕೆಟ್​ ಕೊಟ್ಟರು. ಯಾರೂ ಸಹ ವಿಕೆಟ್​ ಕಾಯ್ದು ಇನ್ನಿಂಗ್ಸ್​ ಕಾಯ್ದುಕೊಳ್ಳಲೇ ಇಲ್ಲ. ತಂಡ 16 ಓವರ್​ಗೆ 100 ರನ್​ ತಲುಪಿತ್ತು. ಈ ವೇಳೆಗೆ ಹ್ಯಾರಿ ಬ್ರೂಕ್ (17), ಜೋಶ್ ಬಟ್ಲರ್(15), ಡೇವಿಡ್ ವಿಲ್ಲಿ (12), ಆದಿಲ್ ರಶೀದ್ (10) ವಿಕೆಟ್​ ಪತನವಾಗಿತ್ತು. ಸೂರ್ಯ ಮುಳುಗದ ನಾಡಿನ ಆಟಗಾರರಿಗೆ ಪಂದ್ಯ ಗೆಲ್ಲುವುದು ಈ ಹಂತಕ್ಕೆ ಕಠಿಣವೇ ಆಗಿತ್ತು. ಮುಂದಿನ ಎಲ್ಲಾ ಐದು ಪಂದ್ಯಗಳನ್ನು ಗೆದ್ದಲ್ಲಿ ರನ್​ರೇಟ್​ಗೆ ಸಮಸ್ಯೆ ಆಗಬಾರದು ಎಂದು ಕೊನೆಯ ಬ್ಯಾಟರ್​ಗಳು ಆದಷ್ಟೂ ರನ್​ ಕಲೆಹಾಕಲು ಪ್ರಯತ್ನಿಸಿದರು.

ಗಸ್, ವುಡ್ ವ್ಯರ್ಥ ಜೊತೆಯಾಟ: ಗಸ್ ಅಟ್ಕಿನ್ಸನ್ (35) ಮತ್ತು ಮಾರ್ಕ್ ವುಡ್ (43*) ಕೊನೆಯಲ್ಲಿ ತಂಡಕ್ಕೆ ಬಿರುಸಿನ 70 ರನ್​ನ ಜೊತೆಯಾಟ ನೀಡಿದರು . ಇದು ತಂಡದ ಗೆಲುವಿಗೆ ನೆರವಾಗುವುದಿಲ್ಲ ಎಂಬುದು ಉಭಯ ಬ್ಯಾಟರ್​ಗಳಿಗೂ ತಿಳಿದಿತ್ತು. ಕಳೆಪೆ ರನ್​ರೇಟ್​ನಿಂದ ಹೊರ ತರಲು ಸಕಲ ಪ್ರಯತ್ನ ಮಾಡಿದರು. ತಂಡ 170 ರನ್ ಗಳಿಸಿದ್ದಾಗ ಗಸ್ ಅಟ್ಕಿನ್ಸನ್ ವಿಕೆಟ್​ ಪತನದೊಂದಿಗೆ ಇಂಗ್ಲೆಂಡ್​ 229 ರನ್​ನ ಸೋಲನುಭವಿಸಿತು. ವಿಶ್ವಕಪ್​ ಲೀಗ್ ಹಂತದಲ್ಲಿ ಮೂರು ಸೋಲು ಕಂಡ ಇಂಗ್ಲೆಂಡ್​ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿತ ಕಂಡಿತು.

  • " class="align-text-top noRightClick twitterSection" data="">

ಹರಿಣಗಳ ಪರ ಜೆರಾಲ್ಡ್ ಕೊಯೆಟ್ಜಿ 3 ಮತ್ತು ಲುಂಗಿ ಎನ್​ಗಿಡಿ, ಮಾರ್ಕೊ ಜಾನ್ಸೆನ್ 2 ವಿಕೆಟ್​ ಕಬಳಿಸಿದರೆ, ಕೇಶವ್ ಮಹಾರಾಜ್ ಮತ್ತು ಕಗಿಸೊ ರಬಾಡ ತಲಾ ಒಂದೊಂದು ವಿಕೆಟ್​ ಪಡೆದರು. 67 ಬಾಲ್​ನಲ್ಲಿ 109 ರನ್​ನ ಅಮೂಲ್ಯ ಇನ್ನಿಂಗ್ಸ್​ ಆಡಿದ ಹೆನ್ರಿಚ್​ ಕ್ಲಾಸೆನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ಸ್ಯಾಂಟ್ನರ್ ಐಪಿಎಲ್​ ಅನುಭವ ಧರ್ಮಶಾಲಾದಲ್ಲಿ ತಂಡಕ್ಕೆ ನೆರವಾಗಲಿದೆ: ಟಾಮ್​ ಲ್ಯಾಥಮ್

Last Updated : Oct 21, 2023, 9:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.