ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸುಧಾರಿತ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡ ಪಾಕಿಸ್ತಾನವನ್ನು 62 ರನ್ಗಳ ಅಂತರದಿಂದ ಮಣಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಆ್ಯಡಂ ಝಂಪಾ ಪಾಕಿಸ್ತಾನಿ ಬ್ಯಾಟರ್ಗಳಿಗೆ ಕಂಠಕವಾದರು. ಪಾಕ್ ಪರ ಆರಂಭಿಕ ಜೋಡಿಯ ದೊಡ್ಡ ಜೊತೆಯಾಟದ ಹೊರತಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ. ಇದರಿಂದ 45.3 ಓವರ್ಗೆ 305ಕ್ಕೆ ಸರ್ವಪತನ ಕಂಡು ಸೋಲುಂಡಿತು.
-
Australia overcome the Pakistan challenge in Bengaluru to make it two in two at #CWC23 👊#AUSvPAK 📝: https://t.co/wMEoG5pZFB pic.twitter.com/wdbshJj2eu
— ICC Cricket World Cup (@cricketworldcup) October 20, 2023 " class="align-text-top noRightClick twitterSection" data="
">Australia overcome the Pakistan challenge in Bengaluru to make it two in two at #CWC23 👊#AUSvPAK 📝: https://t.co/wMEoG5pZFB pic.twitter.com/wdbshJj2eu
— ICC Cricket World Cup (@cricketworldcup) October 20, 2023Australia overcome the Pakistan challenge in Bengaluru to make it two in two at #CWC23 👊#AUSvPAK 📝: https://t.co/wMEoG5pZFB pic.twitter.com/wdbshJj2eu
— ICC Cricket World Cup (@cricketworldcup) October 20, 2023
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ (163) ಮತ್ತು ಮಿಚೆಲ್ ಮಾರ್ಷ್ (121) ಅವರ ಅಮೋಘ ಶತಕದಗಳ ನೆರವಿನಿಂದ 367 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಉತ್ತಮ ಆರಂಭ ಪಡೆಯಿತಾದರೂ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಜೊತೆಯಾಟ ಆಡದ ಕಾರಣ ಸೋಲನುಭವಿಸಬೇಕಾಯಿತು.
-
David Warner entertained the Chinnaswamy crowd with his fireworks 🎇
— ICC Cricket World Cup (@cricketworldcup) October 20, 2023 " class="align-text-top noRightClick twitterSection" data="
He wins the @aramco #POTM for his scintillating 163 ⚡#CWC23 | #AUSvPAK pic.twitter.com/D23R4cLCoz
">David Warner entertained the Chinnaswamy crowd with his fireworks 🎇
— ICC Cricket World Cup (@cricketworldcup) October 20, 2023
He wins the @aramco #POTM for his scintillating 163 ⚡#CWC23 | #AUSvPAK pic.twitter.com/D23R4cLCozDavid Warner entertained the Chinnaswamy crowd with his fireworks 🎇
— ICC Cricket World Cup (@cricketworldcup) October 20, 2023
He wins the @aramco #POTM for his scintillating 163 ⚡#CWC23 | #AUSvPAK pic.twitter.com/D23R4cLCoz
ಆರಂಭಿಕರ ಶತಕದ ಜೊತೆಯಾಟ : ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್ ಪಾಕಿಸ್ತಾನಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಬೆಂಗಳೂರಿನ ಮೈದಾನದಲ್ಲಿ ಲೀಲಾಜಾಲವಾಗಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಮೊದಲ ಪವರ್ ಪ್ಲೇ ಅಂತ್ಯಕ್ಕೆ ವಿಕೆಟ್ನಷ್ಟವಿಲ್ಲದೇ 59 ರನ್ ಕಲೆಹಾಕಿದರು. ಈ ಜೋಡಿ ತಲಾ ಅರ್ಧಶತಕ ಗಳಿಸಿ ಸಂಭ್ರಮಿಸಿತು. 64 ರನ್ ಗಳಿಸಿದ್ದ ಅಬ್ದುಲ್ಲಾ ಶಫೀಕ್ ಸ್ಟೋಯ್ನಿಸ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರಿಂದ 134 ರನ್ ಜೊತೆಯಾಟ ಅಂತ್ಯವಾಯಿತು. ಶಫೀಕ್ ಬೆನ್ನಲ್ಲೇ ಇಮಾಮ್ ಉಲ್ ಹಕ್ ಸಹ 70 ರನ್ಗೆ ಔಟಾದರು.
ಮಧ್ಯಮ ಕ್ರಮಾಂಕದ ಕುಸಿತ: ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ರನ್ ಸೇರಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ನಾಯಕ ಬಾಬರ್ ಅಜಮ್ (18) ಮತ್ತೆ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಎಡವಿದರು. ಸೌದ್ ಶಕೀಲ್ (30), ಇಫ್ತಿಕರ್ ಅಹ್ಮದ್ (26) ಮತ್ತು ಮೊಹಮ್ಮದ್ ನವಾಜ್ (14) ಬೇಗ ವಿಕೆಟ್ ಕೊಟ್ಟರು. ತಂಡಕ್ಕೆ ಆಸರೆಯ ಇನ್ನಿಂಗ್ಸ್ನ್ನು ಆಡುತ್ತಿದ್ದ ರಿಜ್ವಾನ್ ಸಹ 46 ರನ್ಗೆ ಪೆವಿಲಿಯನ್ ಹಾದಿ ಹಿಡಿದರು.
- " class="align-text-top noRightClick twitterSection" data="">
ಮಧ್ಯಮ ಮತ್ತು ಕೆಳ ಕ್ರಮಾಂಕದ ಕುಸಿತ ಕಂಡ ಬಳಿಕ ಪಾಕ್ ತಂಡ ಸೋಲಿನತ್ತ ಮುಖ ಮಾಡಿತು. ಈ ವೇಳೆ ರನ್ರೇಟ್ ಕುಸಿಯದಂತೆ ನೋಡಿಕೊಳ್ಳಲು ಪಾಕ್ ಬಾಲಂಗೋಚಿಗಳು ಪ್ರಯತ್ನಿಸಿದರು. ಆದರೆ ಅವರಿಂದಲೂ ಸಂಪೂರ್ಣ ಓವರ್ ಆಡಲು ಸಾಧ್ಯವಾಗಲಿಲ್ಲ. 45.3 ಓವರ್ನಲ್ಲಿ 305 ರನ್ ಗಳಿಸಿದ್ದಾಗ ಪಾಕಿಸ್ತಾನ ಸರ್ವಪತನ ಕಂಡಿತು. ವಿಶ್ವಕಪ್ನ ನಾಲ್ಕು ಪಂದ್ಯದಲ್ಲಿ ಪಾಕ್ ಎರಡು ಸೋಲು ಹಾಗೂ ಎರಡು ಗೆಲುವು ಕಂಡಂತಾಯಿತು.
ಆಸ್ಟ್ರೇಲಿಯಾ ಪರ ಆ್ಯಡಂ ಝಂಪಾ 4 ವಿಕೆಟ್ ಪಡೆದು ಉತ್ತಮ ಬೌಲಿಂಗ್ ನಿರ್ವಹಣೆ ಮಾಡಿದರು. ಉಳಿದಂತೆ ಪ್ಯಾಟ್ ಕಮಿನ್ಸ್, ಮಾರ್ಕಸ್ ಸ್ಟೊಯ್ನಿಸ್ ತಲಾ 2, ಸ್ಟಾರ್ಕ್, ಜೋಶ್ ಹೇಜಲ್‌ವುಡ್ ತಲಾ ಒಂದೊಂದು ವಿಕೆಟ್ ಪಡೆದರು. 163 ರನ್ ಗಳಿಸಿದ ಡೇವಿಡ್ ವಾರ್ನರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: ವಾಂಖೆಡೆ ಮೈದಾನದಲ್ಲಿ ಸಚಿನ್ ಪ್ರತಿಮೆ ನಿರ್ಮಾಣ: ನವೆಂಬರ್ 1ರಂದು ಅನಾವರಣ