ಮುಂಬೈ: 2022ರಿಂದ 2025ರ ಮಹಿಳಾ ಕ್ರಿಕೆಟ್ ಪ್ರವಾಸದ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಇಂದು ಬಿಡುಗಡೆಗೊಳಿಸಿದೆ. ಇದರಲ್ಲಿ ಒಟ್ಟು 301 ಅಂತಾರಾಷ್ಟ್ರೀಯ ಪಂದ್ಯಗಳಿವೆ. ಮುಖ್ಯವಾಗಿ 7 ಟೆಸ್ಟ್ ಪಂದ್ಯ, 135 ಏಕದಿನ ಹಾಗೂ 159 ಟಿ20 ಪಂದ್ಯಗಳು ಸೇರಿವೆ. ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗಳಲ್ಲಿ ಭಾಗಿಯಾಗಲಿದೆ. ವೇಳಾಪಟ್ಟಿಯಂತೆ ಒಟ್ಟು 10 ಮಹಿಳಾ ತಂಡಗಳು ಟೂರ್ನಿಗಳಲ್ಲಿ ಪಾಲ್ಗೊಳ್ಳಲಿವೆ.
ಇದನ್ನೂ ಓದಿ: ಜಿಂಬಾಬ್ವೆ ಸರಣಿಯಿಂದ ವಾಷಿಂಗ್ಟನ್ ಸುಂದರ್ ಔಟ್: RCBಯ ಈ ಆಟಗಾರನಿಗೆ ಅವಕಾಶ
2022-25ರ ಅವಧಿಯಲ್ಲಿ ಒಟ್ಟು 7 ಟೆಸ್ಟ್ ಪಂದ್ಯಗಳು ನಿಗದಿಯಾಗಿವೆ. ಭಾರತ ತಂಡ ಡಿಸೆಂಬರ್ 2023 ರಲ್ಲಿ ಇಂಗ್ಲೆಂಡ್ ಮತ್ತು ಅಸ್ಟ್ರೇಲಿಯಾ ವಿರುದ್ಧ ತಲಾ ಒಂದೊಂದು ಟೆಸ್ಟ್ ಪಂದ್ಯ ಆಡಲಿದೆ. ಈ ಪಂದ್ಯಗಳು ಭಾರತದಲ್ಲಿ ಆಯೋಜನೆಗೊಳ್ಳಲಿವೆ. ಮಹಿಳಾ ಚಾಂಪಿಯನ್ಶಿಪ್ ಸಹ ಇದರಲ್ಲಿ ಸೇರಿದ್ದು, 2025ರಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಲಿದೆ. ಉಳಿದಂತೆ ಕೆಲವು ದ್ವಿಪಕ್ಷೀಯ ಸರಣಿಗಳು ನಡೆಯಲಿವೆ.
ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳು ಯಾವುವು? ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಇಂಡಿಯಾ, ಐರ್ಲೆಂಡ್, ನ್ಯೂಜಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್