ಹೈದರಾಬಾದ್: ಐಸಿಸಿ 2023ರ ವಿಶ್ವಕಪ್‌ನ 'ಟೂರ್ನಮೆಂಟ್‌ನ ತಂಡ'ವನ್ನು ಪ್ರಕಟಿಸಿದೆ. ಭಾರತದ ನಾಯಕ ರೋಹಿತ್ ಶರ್ಮಾ, ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ ಅವರನ್ನು ಸೇರಿದಂತೆ ಒಟ್ಟು ಆರು ಟೀಮ್ ಇಂಡಿಯಾದ ಆಟಗಾರರು ಸ್ಥಾನ ಪಡೆದಿದ್ದಾರೆ. ಭಾನುವಾರ ನಡೆದ ಫೈನಲ್ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಜಯ ದಾಖಲಿಸಿ ಏಕದಿನ ಕ್ರಿಕೆಟ್ನ ಚಾಂಪಿಯನ್ ಆಗಿ ಹೊರಹೊಮ್ಮಿತು. ಭಾರತದ 10 ಪಂದ್ಯಗಳ ಅಜೇಯ ಗೆಲುವಿನ ಸರಣಿ ಕೊನೆಗೊಂಡಿದ್ದು ಪೈನಲ್ನಲ್ಲಿ.
-
Best of the best 😍
— ICC (@ICC) November 20, 2023 " class="align-text-top noRightClick twitterSection" data="
Revealing the official CWC23 Team of the Tournament 👇https://t.co/WBmJnsdZ0e
">Best of the best 😍
— ICC (@ICC) November 20, 2023
Revealing the official CWC23 Team of the Tournament 👇https://t.co/WBmJnsdZ0eBest of the best 😍
— ICC (@ICC) November 20, 2023
Revealing the official CWC23 Team of the Tournament 👇https://t.co/WBmJnsdZ0e
2023ರ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ ಹಾಗೇ ಹೆಚ್ಚು ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ ಟೂರ್ನಮೆಂಟ್‌ನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟೂರ್ನಮೆಂಟ್‌ನ ತಂಡದ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆ ಆಗಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ನಾಯಕನೇ ಈ ಟೂರ್ನಿಯ ಬೆಸ್ಟ್ ಕ್ಯಾಪ್ಟನ್ ಎಂದೂ ಸಹ ಹೇಳಬಹುದಾಗಿದೆ.
-
6 Indians in the ICC team of the tournament but still we couldn't win the trophy. Sad. pic.twitter.com/RfYV0957UH
— R A T N I S H (@LoyalSachinFan) November 20, 2023 " class="align-text-top noRightClick twitterSection" data="
">6 Indians in the ICC team of the tournament but still we couldn't win the trophy. Sad. pic.twitter.com/RfYV0957UH
— R A T N I S H (@LoyalSachinFan) November 20, 20236 Indians in the ICC team of the tournament but still we couldn't win the trophy. Sad. pic.twitter.com/RfYV0957UH
— R A T N I S H (@LoyalSachinFan) November 20, 2023
ರೋಹಿತ್ ಶರ್ಮಾ: 2023ರ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ತಮ್ಮ ಬಿರುಸಿನ ಬ್ಯಾಟಿಂಗ್ನಿಂದಲೇ ಖ್ಯಾತಿ ಪಡೆದರು. ದೊಡ್ಡ ಇನ್ನಿಂಗ್ಸ್ಗಳನ್ನು ಕಟ್ಟದಿದ್ದರೂ, ಬಿರುಸಿನ ಆಟದ ನೆರವಿನಿಂದ 597 ರನ್ ಕಲೆಹಾಕಿದ್ದಾರೆ. 2019ರ ವಿಶ್ವಕಪ್ನಲ್ಲಿ ರೋಹಿತ್ 648 ರನ್ ಸೇರಿಸಿದ್ದರು. ಅಂದು ಸಹ ಟೂರ್ನಮೆಂಟ್‌ನ ತಂಡದಲ್ಲಿ ಸ್ಥಾನ ಪಡೆದಿದ್ದರು. ಈ ಬಾರಿಯ ವಿಶ್ವಕಪ್ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ರೋಹಿತ್ ಆಗಿದ್ದಾರೆ. ಅಲ್ಲದೇ ಇವರ ನಾಯಕತ್ವದಲ್ಲಿ ಅತಿ ಹೆಚ್ಚು ಪಂದ್ಯವನ್ನು ಭಾರತ ಈ ವಿಶ್ವಕಪ್ನಲ್ಲಿ ಗೆದ್ದುಕೊಂಡಿದೆ.
ವಿರಾಟ್ ಕೊಹ್ಲಿ: ಈ ಟೂರ್ನಿಯ 'ಮ್ಯಾನ್ ಆಫ್ ದಿ ಸಿರೀಸ್' ಪ್ರಶಸ್ತಿಗೆ ಭಾಜನರಾಗಿರುವ ಅತಿ ಹೆಚ್ಚು ರನ್ ಕಲೆಹಾಕಿರುವ ವಿರಾಟ್ ಕೊಹ್ಲಿ (765) ಮೂರನೇ ಕ್ರಮಾಂಕದ ಬ್ಯಾಟರ್ ಆಗಿರಲಿದ್ದಾರೆ. 2003ರಲ್ಲಿ ಸಚಿನ್ ತೆಂಡೂಲ್ಕರ್ ಗಳಿಸಿದ್ದ 673 ರನ್ಗಳನ್ನು ದಾಟಿ ವಿಶ್ವಕಪ್ನಲ್ಲಿ ವಿರಾಟ್ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಅಲ್ಲದೇ ಅವರ ಬ್ಯಾಟ್ನಿಂದ 2023ರ ವಿಶ್ವಕಪ್ನಲ್ಲಿ 3 ಶತಕ ಮತ್ತು 6 ಅರ್ಧಶತಕ ದಾಖಲಾಗಿದೆ.
ಕೆಎಲ್ ರಾಹುಲ್: ಭಾರತ ತಂಡಕ್ಕೆ 5ನೇ ಸ್ಥಾನದಲ್ಲಿ ಆಡುತ್ತಿರುವ ಕೆಎಲ್ ರಾಹುಲ್, ಈ ವಿಶ್ವಕಪ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. 2023ರ ವಿಶ್ವಕಪ್ನಲ್ಲಿ ರನ್ ಗಳಿಸಿದವರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿ ರಾಹುಲ್ ಇದ್ದಾರೆ. 5ನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಬಂದರೂ ರಾಹುಲ್ 1 ಶತಕ ಮತ್ತು 2 ಅರ್ಧಶತಕದ ಸಹಾಯದಿಂದ 452 ರನ್ ಕಲೆಹಾಕಿದ್ದಾರೆ. ಇದು ಕೆಳ ಹಂತದ ಬ್ಯಾಟರ್ ಆಗಿ ಕಲೆಹಾಕಿದ ದೊಡ್ಡ ಮೊತ್ತ ಆಗಿದೆ.
ಮೂವರು ಭಾರತೀಯ ಬೌಲರ್ಗಳು: ಭಾರತದ ವೇಗದ ಬೌಲರ್ಗಳಾದ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಸಹ ತಂಡದಲ್ಲಿದ್ದಾರೆ. 2023 ವಿಶ್ವಕಪ್ನಲ್ಲಿ ಶಮಿ 24 ವಿಕೆಟ್ಗಳನ್ನು ಕಬಳಿಸಿದ್ದಾರೆ. ಟೂರ್ನಿಯ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಶಮಿ 7 ಇನ್ನಿಂಗ್ಸ್ ಆಡಿದ್ದು, 1 ಬಾರಿ 4 ವಿಕೆಟ್ ಮತ್ತು 3 ಬಾರಿ 5 ವಿಕೆಟ್ ಪಡೆದಿದ್ದಾರೆ. 11 ಇನ್ನಿಂಗ್ಸ್ ಆಡಿದ ಬುಮ್ರಾ 1 ಬಾರಿ 4 ವಿಕೆಟ್ ಕಿತ್ತು, ಒಟ್ಟು ಟೂರ್ನಿಯಲ್ಲಿ 20 ವಿಕೆಟ್ ಪಡೆದಿದ್ದಾರೆ. ಟೀಮ್ ಇಂಡಿಯಾದ ಆಲ್ರೌಂಡರ್ ಜಡೇಜಾ ಸಹ ಟೂರ್ನಮೆಂಟ್‌ನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ವಿಶ್ವಕಪ್ನಲ್ಲಿ ಜಡೇಜಾ ಬ್ಯಾಟಿಂಗ್ನಲ್ಲಿ ತಂಡಕ್ಕೆ ಹೇಳುವಂತಹ ಕೊಡುಗೆ ನೀಡದಿದ್ದರೂ, 11 ಇನ್ನಿಂಗ್ಸ್ ಬೌಲಿಂಗ್ ಮಾಡಿರುವ ಅವರು ಒಮ್ಮೆ ಐದು ವಿಕೆಟ್ ಸಹಿತ ಒಟ್ಟು 16 ವಿಕೆಟ್ ಕಬಳಿಸಿದ್ದಾರೆ.
ಉಳಿದಂತೆ ಟೂರ್ನಮೆಂಟ್‌ನ ತಂಡ: ತಂಡದಲ್ಲಿ ಸ್ಥಾನ ಪಡೆದಿರುವ ಉಳಿದ ವಿದೇಶಿ ಆಟಗಾರರೆಂದೆರ, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್, ನ್ಯೂಜಿಲೆಂಡ್ನ ಡೆರಿಲ್ ಮಿಚೆಲ್, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಆಡಮ್ ಝಂಪಾ ಹಾಗೇ ಶ್ರೀಲಂಕಾದ ದಿಲ್ಶನ್ ಮಧುಶಂಕ. 12ನೇ ಆಟಗಾರನಾಗಿ ದಕ್ಷಿಣ ಆಫ್ರಿಕಾ ಜೆರಾಲ್ಡ್ ಕೋಟ್ಜಿ ಸ್ಥಾನ ಪಡೆದಿದ್ದಾರೆ.
2023ರ ವಿಶ್ವಕಪ್‌ನ ಐಸಿಸಿ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಡೆರಿಲ್ ಮಿಚೆಲ್, ಕೆಎಲ್ ರಾಹುಲ್, ಗ್ಲೆನ್ ಮ್ಯಾಕ್ಸ್‌ವೆಲ್, ಜಸ್ಪ್ರೀತ್ ಬುಮ್ರಾ, ದಿಲ್ಶನ್ ಮಧುಶಂಕ, ಆಡಮ್ ಝಂಪಾ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜೆರಾಲ್ಡ್ ಕೋಟ್ಜಿ.
ಇದನ್ನೂ ಓದಿ: ೈನಲ್‌ನ ಶಾಪ: ಭಾರತ ಐಸಿಸಿ ಈವೆಂಟ್ನ ಹೊಸ ಚೋಕರ್ಸ್?