ಮೆಲ್ಬೋರ್ನ್ : ಭದ್ರತೆಯ ಹೆಸರನ್ನೇಳಿ ನಮ್ಮ ತಂಡದ ಕೆಲವು ಆಟಗಾರರು ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದನ್ನು ತಿರಸ್ಕರಿಸಿದರೆ, ಅದರಿಂದ ನನಗೇನು ಆಶ್ಚರ್ಯವಾಗುವುದಿಲ್ಲ ಎಂದು ಆಸೀಸ್ ವೇಗಿ ಜೋಶ್ ಹೇಜಲ್ವುಡ್ ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡ 24 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದೆ. 1998ರಲ್ಲಿ ಮಾರ್ಕ್ ಟೇಲರ್ ನೇತೃತ್ವದಲ್ಲಿ ಆಸೀಸ್ ತಂಡದ ಕೊನೆಯ ಬಾರಿ ಏಷ್ಯನ್ ರಾಷ್ಟ್ರಕ್ಕೆ ಪ್ರವಾಸ ಕೈಗೊಂಡಿತ್ತು. ಆದರೆ, ಇಷ್ಟು ವರ್ಷಗಳಲ್ಲಿ ಭದ್ರತಾ ಸಮಸ್ಯೆಯ ಕಾರಣ ಪಾಕ್ ಪ್ರವಾಸಕ್ಕೆ ಸಿಎ ಒಪ್ಪಿರಲಿಲ್ಲ.
"ಈ ಪ್ರವಾಸಕ್ಕಾಗಿ ತೆರೆಯ ಹಿಂದೆ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯಾ ಕ್ರಿಕೆಟರ್ ಅಸೋಸಿಯೇಷನ್ ಸಾಕಷ್ಟು ಕೆಲಸ ಮಾಡುತ್ತಿವೆ. ಆದ್ದರಿಂದ ಆಟಗಾರರಲ್ಲಿ ನಂಬಿಕೆಯು ಸಾಕಷ್ಟು ಹೆಚ್ಚಾಗಿದೆ. ಆದರೆ, ಖಂಡಿತವಾಗಿಯೂ ಕೆಲವು ಆಟಗಾರರಲ್ಲಿ ಪ್ರವಾಸ ಕುರಿತು ಕಾಳಜಿಯಿದೆ. ಅವರಲ್ಲಿ ಕೆಲವರು ಪ್ರವಾಸದಿಂದ ಹಿಂದೆ ಸರಿದರೆ ನನಗೆ ಆಶ್ಚರ್ಯವಾಗುವುದಿಲ್ಲ" ಎಂದು cricket.com.auಗೆ ನೀಡಿದ ಸಂದರ್ಶನದಲ್ಲಿ ಹೇಜಲ್ವುಡ್ ಹೇಳಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಆಟಗಾರರಲ್ಲಿ ಈ ಆಲೋಚನೆ ಬಂದರೆ ಅದು ನ್ಯಾಯೋಚಿತ ಕೂಡ. ಅವರು ಈ ಕುರಿತು ತಮ್ಮ ಕುಟುಂಬದ ಜೊತೆ ಚರ್ಚಿಸುತ್ತಾರೆ. ನಂತರ ನಿರ್ಧಾರಕ್ಕೆ ಬರುತ್ತಾರೆ ಮತ್ತು ಎಲ್ಲರೂ ಅದನ್ನು ಗೌರವಿಸುತ್ತಾರೆ ಎಂದು ಆಸ್ಟ್ರೇಲಿಯನ್ ಸ್ಟಾರ್ ವೇಗಿ ಹೇಳಿದ್ದಾರೆ. ಆಸ್ಟ್ರೇಲಿಯಾ ಪಾಕಿಸ್ತಾನ ಪ್ರವಾಸದಲ್ಲಿ 3 ಟೆಸ್ಟ್, 3 ಏಕದಿನ ಮತ್ತು ಏಕೈಕ ಟಿ20 ಪಂದ್ಯವನ್ನಾಡಲಿದೆ.
ಮಾರ್ಚ್ 3ರಿಂದ 7ರವರೆಗೆ ಕರಾಚಿಯಲ್ಲಿ ಮೊದಲ ಟೆಸ್ಟ್ , ಮಾರ್ಚ್ 12ರಿಂದ16 ರಾವಲ್ಫಿಂಡಿಯಲ್ಲಿ 2ನೇ ಟೆಸ್ಟ್ ಮತ್ತು ಲಾಹೋರ್ನಲ್ಲಿ ಮಾರ್ಚ್ 21ರಿಂದ 25ರವರೆಗೆ 3ನೇ ಟೆಸ್ಟ್ ಪಂದ್ಯ ನಡೆಯಲಿದೆ. ಮಾರ್ಚ್ 29ರಿಂದ ಏಪ್ರಿಲ್ 5ರವರೆಗೆ ವೈಟ್ಬಾಲ್ ಸರಣಿ ನಡೆಯಲಿವೆ.
ಇದನ್ನೂ ಓದಿ: ಅಂಡರ್ 19 ವಿಶ್ವಕಪ್ : ಆಫ್ಘಾನ್ ವಿರುದ್ಧ ಭರ್ಜರಿ ಜಯದೊಂದಿಗೆ 24 ವರ್ಷದ ಬಳಿಕ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್