ETV Bharat / sports

WTC ಫೈನಲ್​ನಲ್ಲಿ ಇಶಾಂತ್ ಬದಲಿಗೆ ಈತನನ್ನು ಆಡಿಸಲು ಬಯಸುತ್ತೇನೆ: ಹರ್ಭಜನ್ ಸಿಂಗ್ - ಇಶಾಂತ್ ಬದಲಿಗೆ ಸಿರಾಜ್​ಗೆ ಅವಕಾಶ

ಪ್ರಸ್ತುತ ಸನ್ನಿವೇಶದಲ್ಲಿ ಸಿರಾಜ್​ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಬ್ರಿಸ್ಬೇನ್​ನಲ್ಲಿ ಭಾರತ ಗೆಲ್ಲಬೇಕಾದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸಿರಾಜ್​ರಲ್ಲಿ ಫಾರ್ಮ್​ ಜೊತೆಗೆ ವೇಗ ಮತ್ತು ಆತ್ಮವಿಶ್ವಾಸವಿರುವುದರಿಂದ ಅವರು ಫೈನಲ್ ಪಂದ್ಯಕ್ಕೆ ಅತ್ಯುತ್ತಮ. ಅವರ ಕಳೆದ 6 ತಿಂಗಳ ಫಾರ್ಮ್​ ಗಮನಿಸಿದರೆ, ಆತ ಅವಕಾಶಕ್ಕಾಗಿ ಹಸಿವಿನಿಂದ ಕಾಯುತ್ತಿರುವ ಬೌಲರ್ ಆಗಿದ್ದಾರೆ ಎಂದು ಆಫ್ ಸ್ಪಿನ್ನರ್ ಹೇಳಿದ್ದಾರೆ.

ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್
author img

By

Published : Jun 10, 2021, 10:25 PM IST

ಮುಂಬೈ: ಟೆಸ್ಟ್​ ಕ್ರಿಕೆಟ್​ನಲ್ಲಿ ಗಮನಾರ್ಹ ಸುಧಾರಣೆ ಕಾಣುತ್ತಿರುವ ವೇಗದ ಬೌಲರ್​ ಮೊಹಮ್ಮದ್ ಸಿರಾಜ್​ರನ್ನು ನ್ಯೂಜಿಲ್ಯಾಂಡ್ ವಿರುದ್ಧದ WTC ಫೈನಲ್​ ಪಂದ್ಯದಲ್ಲಿ ಇಶಾಂತ್ ಶರ್ಮಾ ಬದಲಿಗೆ ಆಡಿಸಲು ಬಯಸುತ್ತೇನೆ ಎಂದು ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್​ ಸಿಂಗ್ ಹೇಳಿದ್ದಾರೆ.

ಜೂನ್​ 18ರಂದು ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಚೊಚ್ಚಲ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ನಡೆಯಲಿದೆ. ಭಾರತ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕರ ಹೊರತಾಗಿ ಹೆಚ್ಚೇನು ಗೊಂದಲಗಳಿಲ್ಲ, ಆದರೆ ವೇಗದ ಬೌಲರ್​ಗಳ ಆಯ್ಕೆಯಲ್ಲಿ ಟೀಮ್ ಇಂಡಿಯಾ ಕೊಂಚ ತಲೆ ನೋವು ತಂದಿದೆ. ತಂಡದಲ್ಲಿ ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಉಮೇಶ್​ ಯಾದವ್​ ಅಂತಹ ಹಿರಿಯ ಬೌಲರ್​ಗಳ ಜೊತೆಗೆ ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್ ಅಂತಹ ಗಮನಾರ್ಗ ಪ್ರದರ್ಶನ ತೋರಿದ ಬೌಲರ್​ಗಳು ತಂಡದಲ್ಲಿದ್ದಾರೆ. ಅದರಲ್ಲೂ ಸಿರಾಜ್​ ಆಸ್ಟ್ರೇಲಿಯಾದಲ್ಲಿ ನೀಡಿರುವ ಪ್ರದರ್ಶನ ಅವರನ್ನು ತಂಡದಿಂದ ಕೈಬಿಡಲು ಅಸಾಧ್ಯವೆನಿಸಿದೆ.

ನಾನೇದಾರೂ ನಾಯಕನಾದರೆ ಮೂರು ಅತ್ಯುತ್ತಮ ವೇಗಿಗಳನ್ನು ಆಯ್ಕೆ ಮಾಡಲು ಬಯಸುತ್ತಿದ್ದೆ. ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಸಹಜ ಆಯ್ಕೆಯಾದರೆ ಮತ್ತೊಬ್ಬ ವೇಗಿಯಾಗಿ ಇಶಾಂತ್ ಶರ್ಮಾ ಬದಲಿಗೆ ಮೊಹಮ್ಮದ್ ಸಿರಾಜ್​ರೊಂದಿಗೆ ಹೋಗಲು ನಾನು ಬಯಸುತ್ತೇನೆ. ಇಶಾಂತ್ ಶರ್ಮಾ ಕೂಡ ಅತ್ಯುತ್ತಮ ಬೌಲರ್​, ಆದರೆ ಈ ಪಂದ್ಯಕ್ಕಾಗಿ ನನ್ನ ಆಯ್ಕೆ ಸಿರಾಜ್ , ಏಕೆಂದರೆ ಅವರು ಕಳೆದ 2 ವರ್ಷಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ ಎಂದು ಹೇಳಿದ್ದಾರೆ ಎಂದು ಭಜ್ಜಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಸನ್ನಿವೇಶದಲ್ಲಿ ಸಿರಾಜ್​ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಬ್ರಿಸ್ಬೇನ್​ನಲ್ಲಿ ಭಾರತ ಗೆಲ್ಲಬೇಕಾದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿರಾಜ್​ರಲ್ಲಿ ಫಾರ್ಮ್​ ಜೊತೆಗೆ ವೇಗ ಮತ್ತು ಆತ್ಮವಿಶ್ವಾಸವಿರುವುದರಿಂದ ಅವರು ಫೈನಲ್ ಪಂದ್ಯಕ್ಕೆ ಅತ್ಯುತ್ತಮ. ಅವರ ಕಳೆದ 6 ತಿಂಗಳ ಫಾರ್ಮ್​ ಗಮನಿಸಿದರೆ, ಆತ ಅವಕಾಶಕ್ಕಾಗಿ ಹಸಿವಿನಿಂದ ಕಾಯುತ್ತಿರುವ ಬೌಲರ್ ಆಗಿದ್ದಾರೆ ಎಂದು ಆಫ್ ಸ್ಪಿನ್ನರ್ ಹೇಳಿದ್ದಾರೆ.

ಇದನ್ನು ಓದಿ: ’ಪಾಕಿಸ್ತಾನ ತಂಡಕ್ಕೆ ಧೋನಿಯಂತಹ ನಾಯಕ, ಫಿನಿಷರ್​ನ​ ಅವಶ್ಯಕತೆಯಿದೆ’

ETV Bharat Logo

Copyright © 2025 Ushodaya Enterprises Pvt. Ltd., All Rights Reserved.