ETV Bharat / sports

ಇನ್ನೂ 3 ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ, ಈ ತಂಡದ ಪರ ಐಪಿಎಲ್​ನಲ್ಲಿ ಆಡುವಾಸೆ: ಅಂಬಾಟಿ ರಾಯುಡು - ಸಿಎಸ್​ಕೆ ಅಂಬಾಟಿ ರಾಯುಡು

ಚೆನ್ನೈ ತಂಡದಲ್ಲಿ ನಾನು ಕಳೆದಿರುವ ಸಮಯ ತುಂಬಾ ವಿಶೇಷವಾಗಿದೆ. ನಾನು ಫ್ರಾಂಚೈಸಿ ಭಾಗವಾದ ನಂತರ ನಾವು ಇಲ್ಲಿಯವರೆಗೆ ಎರಡು IPL ಗಳನ್ನು ಗೆದ್ದಿದ್ದೇವೆ ಮತ್ತು ಒಮ್ಮೆ ಫೈನಲ್​ ಆಡಿದ್ದೇವೆ. ಅದರಲ್ಲೂ 2018ರ ಆವೃತ್ತಿ ನನಗೆ ಬಹಳ ವಿಶೇಷವಾದ ಋತುವಾಗಿದೆ. ಏಕೆಂದರೆ ಅದು ಸಿಎಸ್​ಕೆಗೆ ಪುನರಾಗಮನದ ಆವೃತ್ತಿಯಾಗಿತ್ತು ಮತ್ತು ಮತ್ತು ನಾವು ಆ ವರ್ಷ ಟ್ರೋಫಿ ಗೆದ್ದುಕೊಂಡಿದ್ದೆವು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

Ambati Rayudu
ಅಂಬಾಟಿ ರಾಯುಡು ಸಿಎಸ್​ಕೆ
author img

By

Published : Dec 28, 2021, 7:47 PM IST

ಮುಂಬೈ: ಭಾರತ ತಂಡದಿಂದ ಕಡೆಗಣಿಸಲ್ಪಟ್ಟ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಅಂಬಾಟಿ ರಾಯುಡು ಮುಂದಿನ ಮೂರು ವರ್ಷಗಳ ಕಾಲ ಕ್ರಿಕೆಟ್ ಆಡುವುದಕ್ಕೆ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ಜೊತೆಗೆ 2022ರ ಐಪಿಎಲ್​ನ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಫ್ರಾಂಚೈಸಿ ಮತ್ತೆ ತಮ್ಮನ್ನು ಖರೀದಿಸುವ ಭರವಸೆಯಿದೆ ಎಂದು ಮಂಗಳವಾರ ಹೈದರಾಬಾದ್ ಕ್ರಿಕೆಟಿಗ ತಿಳಿಸಿದ್ದಾರೆ.

36 ವರ್ಷದ ಕ್ರಿಕೆಟಿಗ ಅಂಬಾಟಿ ರಾಯುಡು 2019ರ ಏಕದಿನ ವಿಶ್ವಕಪ್​ ಆಯ್ಕೆಯ ವೇಳೆ ಕಡೆಗಣನೆಗೆ ಒಳಗಾಗದರು. ನಂತರ ತಾವಾಗಿಯೇ ಭಾರತ ತಂಡದ ಆಯ್ಕೆಯಿಂದ ಹಿಂದೆ ಸರಿದರು. ಕೆಲವು ದಿನಗಳ ನಂತರ ನಿವೃತ್ತಿ ಘೋಷಿಸಿ ನಂತರ ಮತ್ತೆ ವಾಪಸ್​ ತೆಗೆದುಕೊಂಡು ದೇಶಿ ಕ್ರಿಕೆಟ್ ಮತ್ತು ಐಪಿಎಲ್​ನಲ್ಲಿ ಆಡುತ್ತಾ ಬರುತ್ತಿದ್ದಾರೆ. 2018ರಲ್ಲಿ ಸಿಎಸ್​ಕೆ ನಿಷೇಧದಿಂದ ಹಿಂತಿರುಗಿದಾಗಿನಿಂದಲೂ ಅವರೂ ಅದೇ ತಂಡದ ಪರ ಆಡುತ್ತಾ ಬರುತ್ತಿದ್ದಾರೆ. ಈ 4 ವರ್ಷಗಳಲ್ಲಿ 2 ಬಾರಿ ಚಾಂಪಿಯನ್​ ಮತ್ತು ಒಮ್ಮೆ ರನ್ನರ್​ ಅಪ್ ಆದ ಸಿಎಸ್​ಕೆ ತಂಡದಲ್ಲಿ ರಾಯುಡು ಪ್ರಮುಖ ಪಾತ್ರ ವಹಿಸಿದ್ದರು.

ನಾನು ಫಿಟ್​ ಮತ್ತು ಫಾರ್ಮ್​ನಲ್ಲಿರುವವರೆಗೂ ಕ್ರಿಕೆಟ್​ ಆಡುವುದಕ್ಕೆ ಇಷ್ಟಪಡುತ್ತೇನೆ. ಮುಂದಿನ ಮೂರು ವರ್ಷಗಳ ಸೈಕಲ್​ಗೆ ನಾನು ಸಿದ್ಧನಾಗಿದ್ದೇನೆ ಮತ್ತು ಫಿಟ್​ನೆಸ್​ ಕಾಪಾಡಿಕೊಳ್ಳಲು ಸಾಕಷ್ಟು ಕಠಿಣ ಪರಿಶ್ರಮ ಪಡುತ್ತಿದ್ದೇನೆ. ಇತ್ತೀಚೆಗೆ ನಡೆದ ವಿಜಯ ಹಜಾರೆ ಟ್ರೋಫಿಯಲ್ಲಿ 6 ದಿನಗಳಲ್ಲಿ ನಾನು 5 ಏಕದಿನ ಪಂದ್ಯಗಳನ್ನಾಡಿದ್ದೇನೆ. ಆದ್ದರಿಂದ ನಾನು ಉತ್ತಮ ಶೇಪ್​ನಲ್ಲಿದ್ದು ಕಡಿಮೆ ಎಂದರೂ ಮುಂದಿನ 3 ವರ್ಷಗಳ ಕಾಲ ಕ್ರಿಕೆಟ್ ಆಡುವ ವಿಶ್ವಾಸವಿದೆ ಎಂದು ರಾಯುಡು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಧೋನಿ ಪ್ರಭಾವ..

ಧೋನಿ ಭಾಯ್ ನನ್ನಿಂದ ಅತ್ಯುತ್ತಮ ಪ್ರದರ್ಶನ ತರಲು ಪ್ರಭಾವ ಬೀರಿದ್ದಾರೆ. ನನ್ನಲ್ಲಿ ಮಾತ್ರವಲ್ಲದೆ ಅವರು ತಂಡದ ಪ್ರತಿಯೊಬ್ಬರ ಮೇಲೂ ಪ್ರಭಾವ ಬೀರಿದ್ದಾರೆ ಮತ್ತು ಎಲ್ಲರಿಂದಲೂ ಅತ್ಯುತ್ತಮವಾದದ್ದನ್ನು ಹೊರ ತರುತ್ತಾರೆ. ಹಾಗಾಗಿಯೇ ಅವರು ಭಾರತ ಕಂಡ ಅತ್ಯುತ್ತಮ ನಾಯಕರಾಗಿದ್ದಾರೆ ಎಂದು ರಾಯುಡು ಬಣ್ಣಿಸಿದ್ದಾರೆ.

ಚೆನ್ನೈ ತಂಡದಲ್ಲಿ ಮತ್ತೆ ಆಡುವ ಆಸೆಯಿದೆ

ಚೆನ್ನೈ ತಂಡದಲ್ಲಿ ನಾನು ಕಳೆದಿರುವ ಸಮಯ ತುಂಬಾ ವಿಶೇಷವಾಗಿದೆ. ನಾನು ಫ್ರಾಂಚೈಸಿ ಭಾಗವಾದ ನಂತರ ನಾವು ಇಲ್ಲಿಯವರೆಗೆ ಎರಡು IPL ಗಳನ್ನು ಗೆದ್ದಿದ್ದೇವೆ ಮತ್ತು ಒಮ್ಮೆ ಫೈನಲ್​ ಆಡಿದ್ದೇವೆ. ಅದರಲ್ಲೂ 2018ರ ಆವೃತ್ತಿ ನನಗೆ ಬಹಳ ವಿಶೇಷವಾದ ಋತುವಾಗಿದೆ. ಏಕೆಂದರೆ ಅದು ಸಿಎಸ್​ಕೆಗೆ ಪುನರಾಗಮನದ ಆವೃತ್ತಿಯಾಗಿತ್ತು ಮತ್ತು ಮತ್ತು ನಾವು ಆ ವರ್ಷ ಟ್ರೋಫಿ ಗೆದ್ದುಕೊಂಡಿದ್ದೆವು.

ಹಾಗಾಗಿ ನಾನು ಮತ್ತೆ ಸಿಎಸ್​ಕೆ ಪರ ಆಡುವುದಕ್ಕೆ ಇಷ್ಟಪಡುತ್ತೇನೆ. ಇಲ್ಲಿಯವರೆಗೆ ಯಾವುದೇ ಔಪಚಾರಿಕ ಮಾತುಕತೆ ನಡೆದಿಲ್ಲ. ಆದರೆ ಮತ್ತೆ ಫ್ರಾಂಚೈಸಿ ನನ್ನನ್ನು ಹರಾಜಿನಲ್ಲಿ ಖರೀದಿಸಲಿದೆ ಎನ್ನುವ ಭರವಸೆಯಿದೆ. ನಾವು ಮತ್ತೊಂದು ಯಶಸ್ವಿ ಆವೃತ್ತಿಯನ್ನು ಹೊಂದಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​ ಹರಾಜಿಗೂ ಮುನ್ನ ರವೀಂದ್ರ ಜಡೇಜಾ, ಎಂಎಸ್ ಧೋನಿ , ಮೊಯೀನ್ ಅಲಿ ಮತ್ತು ಋತುರಾಜ್ ಗಾಯಕ್ವಾಡ್​ ರನ್ನು ರಿಟೈನ್ ಮಾಡಿಕೊಂಡಿತ್ತು.

ಇದನ್ನೂ ಓದಿ:ಇಂಗ್ಲೆಂಡ್​ 68ಕ್ಕೆ ಆಲೌಟ್​ : ಭಾರತವನ್ನು ಗೇಲಿ ಮಾಡಿದ್ದ ಮೈಕಲ್​ ವಾನ್​​ರನ್ನು ಟ್ರೋಲ್​ ಮಾಡಿದ ಜಾಫರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.