ಹೈದರಾಬಾದ್: ಭಾರತಕ್ಕೆ 2012ರ ಅಂಡರ್ 19 ವಿಶ್ವಕಪ್ ತಂದುಕೊಟ್ಟಿದ್ದ ನಾಯಕ ಉನ್ಮುಕ್ತ್ ಚಾಂದ್ ಯುಎಸ್ಎ ಟಿ20 ಲೀಗ್ನಲ್ಲಿ ಭಾಗವಹಿಸಲು ಅಮೆರಿಕಗೆ ಬಂದಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಮಿ ಇಸ್ಲಾಮ್ ಹೇಳಿಕೆಯನ್ನು ಚಾಂದ್ ನಿರಾಕರಿಸಿದ್ದಾರೆ.
ತಾವೂ ಸಂಬಂಧಿಕರ ಮನೆಗೆ ಬಂದಿದ್ದೇನೆ. ಇದು ಕೇವಲ ವಿರಾಮದ ಪ್ರವಾಸ. ಅಲ್ಲದೇ ನಾನು ಇಲ್ಲಿನ ಯಾವುದೇ ಯುಎಸ್ಎ ಲೀಗ್ನೊಡನೆ ಔಪಚಾರಿಕ ಒಪ್ಪಂದವನ್ನು ಮಾಡಿಕೊಂಡಿಲ್ಲ ಎಂದು ಚಾಂದ್ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
" ನನ್ನ ಸಂಬಂಧಿಕರನ್ನು ಭೇಟಿ ಮಾಡಲು ನಾನು ಅಮೆರಿಕಕ್ಕೆ ಬಂದಿದ್ದೇನೆ. ಮತ್ತು ಇಲ್ಲಿಗೆ ಬಂದಾಗ, ಒಂದೆರಡು ಬ್ಯಾಟ್ಗಳನ್ನು ಅಭ್ಯಾಸಕ್ಕಾಗಿ ತಂದಿದ್ದೆ. ಕೇವಲ ತರಬೇತಿಗಾಗಿ ಅಲ್ಲಿಗೆ ಹೋಗಿದ್ದೆ, ಆದರೆ ನಾನು ಯುಎಸ್ಎ ಬೋರ್ಡ್ ಜೊತೆ ಯಾವುದೇ ಒಪ್ಪಂದಕ್ಕೆ ಸಹಿ ಮಾಡಿಕೊಂಡಿಲ್ಲ" ಎಂದು ಚಾಂದ್ ಪ್ರಮುಖ ಮಾಧ್ಯಮ ಸಂಸ್ಥೆಗೆ ತಿಳಿಸಿದ್ದಾರೆ.
ಸೋಮವಾರ ಪಾಕಿಸ್ತಾನವನ್ನು ಬಿಟ್ಟು ಅಮೆರಿಕ ಸೇರಿರುವ ಸಮಿ ಅಸ್ಲಾಮ್ ಚಾಂದ್ ಸೇರಿದಂತೆ ಹಲವಾರು ವಿದೇಶಿ ಆಟಗಾರರು ಅಮೆರಿಕ ಕ್ರಿಕೆಟ್ ಬೋರ್ಡ್ ಆಯೋಜಿಸುವ ಟಿ-20 ಲೀಗ್ನಲ್ಲಿ ಭಾಗವಹಿಸಲು ಬಂದಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಸುದ್ದಿ ಬಿರುಗಾಳಿಯಂತೆ ಹಬ್ಬಿತ್ತು.
ಇತ್ತೀಚೆಗೆ ಭಾರತದ ಮಾಜಿ ಅಂಡರ್ 19 ಕ್ರಿಕೆಟಿಗರು ಸೇರಿದಂತೆ 30 - 40 ವಿದೇಶಿ ಕ್ರಿಕೆಟಿಗರು ಅಮೆರಿಕಕ್ಕೆ ಧಾವಿಸಿದ್ದಾರೆ. ಇದರಲ್ಲಿ ಉನ್ಮುಕ್ತ್ ಚಾಂದ್, ಸ್ಮಿತ್ ಪಟೇಲ್ ಮತ್ತು ಹರ್ಮೀತ್ ಸಿಂಗ್ ಕೂಡ ಇದ್ದಾರೆ ಎಂದು ಅಸ್ಲಾಮ್ ತಿಳಿಸಿದ್ದರು.
ಬಿಸಿಸಿಐ ಯಾವುದೇ ವಿದೇಶಿ ಟಿ-20 ಲೀಗ್ಗಳಲ್ಲಿ ಆಡುವುದಕ್ಕೆ ಅನುಮತಿ ನೀಡುವುದಿಲ್ಲ. ಒಂದು ವೇಳೆ ಆಡಬೇಕೆಂದರೆ ಎಲ್ಲ ಮಾದರಿಯ ಕ್ರಿಕೆಟ್ಗೆ ರಾಜಿನಾಮೆ ಸಲ್ಲಿಸಿದ ನಂತರ ಎನ್ಒಸಿ ಪಡೆಯಬೇಕಾಗುತ್ತದೆ. ಒಮ್ಮೆ ಎನ್ಒಸಿ ಪಡೆದ ನಂತರ ಮತ್ತೆ ಬಿಸಿಸಿಐನ ಯಾವುದೇ ಕ್ರಿಕೆಟ್ನಲ್ಲಿ ಆಡುವ ಅವಕಾಶವಿರುವುದಿಲ್ಲ.
ಇದನ್ನು ಓದಿ: ಅವಕಾಶದ ಕೊರತೆ, ಯುಎಸ್ ತಂಡಕ್ಕೆ ಆಡಲು ಸಜ್ಜಾದ್ರ ಭಾರತಕ್ಕೆ U19 ವಿಶ್ವಕಪ್ ತಂದುಕೊಟ್ಟ ನಾಯಕ!