ETV Bharat / sports

ಇನ್ಮುಂದೆ ನಿಮ್ಮನ್ನು ಆಯ್ಕೆ ಮಾಡಲ್ಲ, ಯುವ ಪ್ರತಿಭೆ ಎದುರು ನೋಡುತ್ತಿದ್ದೇವೆ ಅಂದಿದ್ದಾರೆ: ಸಹಾ ಸ್ಫೋಟಕ ಹೇಳಿಕೆ - Wriddhiman Saha on Dravid

ಶ್ರೀಲಂಕಾ ಸರಣಿಗೆ ತಂಡವನ್ನು ಪ್ರಕಟಿಸುವ ಮುನ್ನ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್​ ಶರ್ಮಾ ನನಗೆ ಕರೆ ಮಾಡಿ, ನಿಮ್ಮನ್ನು ಮುಂಬರುವ ಟೆಸ್ಟ್​ ಸರಣಿಗೆ ಆಯ್ಕೆ ಮಾಡುತ್ತಿಲ್ಲ ಎಂದರು, ನಾನು ಈ ಸರಣಿಗೆ ಮಾತ್ರವಾ ಅಥವಾ ಅದನ್ನೂ ಮೀರಿದೆಯಾ? ಎಂದು ಕೇಳಿದೆ, ಅವರು ಒಂದು ಕ್ಷಣ ಮಾತನಾಡದೆ, ನಂತರ ಇಲ್ಲಿ ಮುಂದೆ ನಿಮ್ಮನ್ನು ತಂಡಕ್ಕೆ ಆಯ್ಕೆ ಮಾಡುವುದಿಲ್ಲ ಎಂದರು.

Wriddhiman Saha
ವೃದ್ಧಿಮಾನ್ ಸಹಾ
author img

By

Published : Feb 20, 2022, 6:08 PM IST

ಮುಂಬೈ: ಶ್ರೀಲಂಕಾ ವಿರುದ್ಧ ಮುಂಬರುವ ಟೆಸ್ಟ್​ ಸರಣಿಗೆ ಭಾನುವಾರ ಬಿಸಿಸಿಐ ರೋಹಿತ್ ನೇತೃತ್ವದ 18 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಈ ತಂಡದಿಂದ ಹಿರಿಯ ವಿಕೆಟ್ ಕೀಪರ್​ ವೃದ್ಧಿಮಾನ್ ಸಹಾರನ್ನು ಕೈಬಿಡಲಾಗಿದೆ. ಅಲ್ಲದೆ ಟೀಮ್​ ಮ್ಯಾನೇಜ್​ಮೆಂಟ್​ ತಮ್ಮನ್ನು ಇನ್ನು ಟೆಸ್ಟ್​ ತಂಡಕ್ಕೆ ಆಯ್ಕೆ ಮಾಡುವುದಿಲ್ಲ ಎಂದು ತಿಳಿಸಿದೆ ಎಂದು ಸಹಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿದಲ್ಲಿ 3ನೇ ಟೆಸ್ಟ್​ ಪಂದ್ಯವನ್ನು ಸೋತ ನಂತರ ವೃದ್ಧಿಮಾನ್​ ಸಹಾ ಜೊತೆಗೆ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ತಮ್ಮ ಭವಿಷ್ಯದ ಆಯ್ಕೆ ಕುರಿತು ಮಾತನಾಡಿರುವ ವಿಚಾರವನ್ನು ಸಹಾ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.

ರಾಹುಲ್ ಭಾಯ್​ ಕೊನೆಯ ಟೆಸ್ಟ್​ ಪಂದ್ಯದ ನಂತರ ನನ್ನನ್ನು ಅವರ ರೂಮಿಗೆ ಕರೆದರು. ಅವರು ಪ್ಲೇಯಿಂಗ್ ಇಲೆವೆನ್​ನಲ್ಲಿ ನನ್ನನ್ನು ಏಕೆ ಆಯ್ಕೆ ಮಾಡಲಿಲ್ಲ ಎಂದು ಕಾರಣ ಹೇಳಲು ಕರೆದಿರಬಹುದು ಎಂದು ಭಾವಿಸಿದ್ದೆ. ಏಕೆಂದರೆ ನ್ಯೂಜಿಲ್ಯಾಂಡ್​ ವಿರುದ್ಧ ಕಾನ್ಪುರ ಟೆಸ್ಟ್​ನಲ್ಲಿ ನಾನು ಪೇಯ್ನ್​ ಕಿಲ್ಲರ್​ ತೆಗೆದುಕೊಂಡು ಬ್ಯಾಟಿಂಗ್ ಮಾಡಿದ್ದಾಗ ದಾದಿ(ಗಂಗೂಲಿ) ನನಗೆ ಅಭಿನಂದನೆ ಸಲ್ಲಿಸಿದ್ದರು. ಇದು ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಹಾಗಾಗಿ ದ್ರಾವಿಡ್​ ಭಾಯ್​ ನನ್ನನ್ನು ಕರೆದಾಗ, ಅವರ ಯೋಜನೆಗಳನ್ನು ನನ್ನ ಬಳಿ ಹೇಳಬಹುದೇನೊ ಎಂದುಕೊಂಡಿದ್ದೆ.

ಆದರೆ, ನಾವು ಮಾತನಾಡಲು ಶುರು ಮಾಡಿದಾಗ ದ್ರಾವಿಡ್​ ಭಾಯ್, ಈ ವಿಚಾರವನ್ನು ಹೇಗೆ ಹೇಳಬೇಕೊ ನನಗೆ ತಿಳಿಯುತ್ತಿಲ್ಲ. ಆದರೆ, ಸ್ವಲ್ಪ ದಿನಗಳಿಂದ, ಕೆಲವು ಆಯ್ಕೆಗಾರರು ಮತ್ತು ಟೀಮ್​ ಮ್ಯಾನೇಜ್​ಮೆಂಟ್​​ ಹೊಸ ವಿಕೆಟ್​ ಕೀಪರ್​ ಪ್ರಯತ್ನಿಸಲು ಬಯಸುತ್ತಿದ್ದಾರೆ ಎಂದರು. ನಾನು ಅವರನ್ನು ಈ ನಿರ್ಧಾರಕ್ಕೆ ನನ್ನ ವಯಸ್ಸು ಅಥವಾ ಫಿಟ್​ನೆಸ್​ ಕಾರಣವಾಗಿದೆಯೇ ಎಂದು ಕೇಳಿದೆ. ಅದಕ್ಕೆ ಅವರು, ಇದು ನಿಮ್ಮ ವಯಸ್ಸು ಅಥವಾ ಕಾರ್ಯಕ್ಷಮತೆಯ ವಿಷಯವಲ್ಲ. ಅವರು ಯುವ ಪ್ರತಿಭೆಯ ಕಡೆ ನೋಡುತ್ತಿದ್ದಾರೆ ಮತ್ತು ನೀವು 11ರಬಳಗದಲ್ಲಿ ಆಡುತ್ತಿಲ್ಲವಾದ್ದರಿಂದ ನಾವು ಯುವ ಪ್ರತಿಭೆಯ ಕಡೆಗೆ ನೋಡುತ್ತಿದ್ದೇವೆ ಎಂದು ಹೇಳಿದರೆಂದು ಸಹಾ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ನಿವೃತ್ತಿ ಸಲಹೆ.. ಶ್ರೀಲಂಕಾ ಸರಣಿಗೆ ಆಯ್ಕೆಗಾರರು ನಿಮ್ಮನ್ನು ಆಯ್ಕೆ ಮಾಡದಿದ್ದರೆ, ಇದರಲ್ಲಿ ಯಾವುದೇ ಅಚ್ಚರಿಯಿಲ್ಲ ಎಂದು ದ್ರಾವಿಡ್​ ಹೇಳಿದರೆಂದು 37 ವರ್ಷದ ಸಹಾ ತಿಳಿಸಿದ್ದಾರೆ.

ನೀವು ಯಾವುದೇ ನಿರ್ಧಾರ(ನಿವೃತ್ತಿ) ತೆಗೆದುಕೊಳ್ಳಲು ಬಯಸಿದರೆ, ಪರಿಗಣಿಸಬಹುದು ಎಂದರು. ಅದಕ್ಕೆ ನಾನು ಈಗಲೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ನನ್ನಲ್ಲಿ ಸಾಕಷ್ಟು ಕ್ರಿಕೆಟ್​ ಇದೆ ಮತ್ತು ಐಪಿಎಲ್ ಕೂಡ ಬರುತ್ತಿದೆ. ನಾನು ಪ್ರೀತಿಸುವ ಕ್ರಿಕೆಟ್​ ಅನ್ನು ಆಡುವುದಕ್ಕೆ ಯಾವಾಗಲೂ ಇಷ್ಟಪಡುತ್ತೇನೆ. ನನಗೆ ಇನ್ನೂ ಸಮಯವಿದ್ದು, ಆಡುವ ಮೂಲಕ ಆನಂದಿಸುತ್ತೇನೆ ಎಂದು ತಿಳಿಸಿದೆ ಎಂದು ಸಹಾ ಹೇಳಿದ್ದಾರೆ.

ಆಯ್ಕೆ ಪರಿಗಣಿಸಲ್ಲ ಎಂದ ಆಯ್ಕೆ ಸಮಿತಿ.. ಶ್ರೀಲಂಕಾ ಸರಣಿಗೆ ತಂಡವನ್ನು ಪ್ರಕಟಿಸುವ ಮುನ್ನ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್​ ಶರ್ಮಾ ನನಗೆ ಕರೆ ಮಾಡಿ, ನಿಮ್ಮನ್ನು ಮುಂಬರುವ ಟೆಸ್ಟ್​ ಸರಣಿಗೆ ಆಯ್ಕೆ ಮಾಡುತ್ತಿಲ್ಲ ಎಂದರು. ನಾನು ಈ ಸರಣಿಗೆ ಮಾತ್ರವಾ ಅಥವಾ ಅದನ್ನೂ ಮೀರಿದೆಯಾ? ಎಂದು ಕೇಳಿದೆ. ಅವರು ಒಂದು ಕ್ಷಣ ಮಾತನಾಡದೆ, ನಂತರ ಇಲ್ಲಿ ಮುಂದೆ ನಿಮ್ಮನ್ನು ತಂಡಕ್ಕೆ ಆಯ್ಕೆ ಮಾಡುವುದಿಲ್ಲ ಎಂದರು.

ನಾನು ಅವರಿಗೂ ನನ್ನನ್ನು ಆಯ್ಕೆ ಪರಿಗಣಿಸದಿರಲೂ ವಯಸ್ಸು ಅಥವಾ ನನ್ನ ಕಾರ್ಯಕ್ಷಮತೆ ಕಾರಣವೇ ಎಂದು ಕೇಳಿದೆ. ಅದಕ್ಕೆ ಅವರೂ, ನಾವು ಯುವ ಪ್ರತಿಭೆಯನ್ನು ಎದುರು ನೋಡುತ್ತಿದ್ದೇವೆ ಎಂದರಲ್ಲದೆ, ನೀವು ರಣಜಿಯಲ್ಲಿ ಆಡಿ ಎಂದು ಸಲಹೆ ನೀಡಿದರು. ನಿಮಗೆ ಇಷ್ಟವಾದರೆ ಮಾತ್ರ ಎಂದು ತಿಳಿಸಿದರು.

ಇದನ್ನೂ ಓದಿ:ರಣಜಿ ಟ್ರೋಫಿ : ಪದಾರ್ಪಣೆ ಪಂದ್ಯದಲ್ಲೇ 2 ಶತಕ ಸಿಡಿಸಿ ದಾಖಲೆ ಬರೆದ ಯಶ್​ ಧುಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.