ಅರುಂಡೇಲ್ (ಲಂಡನ್): ಐಪಿಎಲ್ನಲ್ಲಿ ಉತ್ತಮ ರನ್ರೇಟ್ನಿಂದ ಬ್ಯಾಟ್ ಬೀಸಿದ ಅಜಿಂಕ್ಯಾ ರಹಾನೆ 18 ತಿಂಗಳ ನಂತರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ಭಾರತ ತಂಡದ ವೈಟ್ ಜರ್ಸಿಯನ್ನು ತೊಡುತ್ತಿದ್ದಾರೆ. ಈ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿರುವ ರಹಾನೆ, ಇಷ್ಟು ದಿನ ತಂಡದಿಂದ ಹೊರಗುಳಿದಿರುವ ಬಗ್ಗೆ ವಿಷಾದ ಇಲ್ಲಾ ಎಂದಿದ್ದಾರೆ.
ಬಿಸಿಸಿಐ ಟಿವಿಗೆ ನೀಡಿರುವ ಸಂದರ್ಶನದಲ್ಲಿ,"18-19 ತಿಂಗಳ ನಂತರ ಹಿಂತಿರುಗುತ್ತಿದ್ದೇನೆ, ಒಳ್ಳೆಯದು ಅಥವಾ ಕೆಟ್ಟದ್ದೇನಾದರೂ, ನನ್ನ ಹಿಂದಿನ ಬಗ್ಗೆ ಯೋಚಿಸಲು ನಾನು ಬಯಸುವುದಿಲ್ಲ. ನಾನು ಹೊಸದಾಗಿ ಪ್ರಾರಂಭಿಸಲು ಬಯಸುತ್ತೇನೆ ಮತ್ತು ನಾನು ಮಾಡುತ್ತಿರುವುದನ್ನು ಮುಂದುವರಿಸಲು ಬಯಸುತ್ತೇನೆ" ಎಂದು ಹೇಳಿದ್ದಾರೆ.
"ಐಪಿಎಲ್‌ಗೆ ಮುಂಚೆಯೇ ನಾನು ವರ್ಷದ ಎಲ್ಲಾ ಪಂದ್ಯಗಳಲ್ಲೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದೆ, ನಾನು ವೈಯಕ್ತಿಕವಾಗಿ ಚೆನ್ನೈ ಸೂಪರ್ ಕಿಂಗ್ಸ್ಗಾಗಿ ಆಡುವುದನ್ನು ಆನಂದಿಸಿದೆ. ನಾನು ಉತ್ತಮ ದೇಶೀಯ ಋತುವನ್ನು ಹೊಂದಿದ್ದೇನೆ. ಹಾಗಾಗಿ ಈ ಪುನರಾಗಮನವು ನನಗೆ ಸ್ವಲ್ಪ ಭಾವನಾತ್ಮಕವಾಗಿತ್ತು. ನಾನು ಐಪಿಎಲ್ ಮತ್ತು ರಣಜಿ ಟ್ರೋಫಿಯಲ್ಲಿ ಇಲ್ಲಿಗೆ ಬರುವ ಮೊದಲು ಯಾವ ಮನಸ್ಥಿತಿಯೊಂದಿಗೆ ಬ್ಯಾಟ್ ಮಾಡುತ್ತಿದ್ದನೋ ಅದನ್ನೇ ಮುಂದುವರೆಸಲು ಬಯಸುತ್ತೇನೆ. ನಾನು ಟಿ20 ಅಥವಾ ಟೆಸ್ಟ್ ಸ್ವರೂಪದ ಬಗ್ಗೆ ಯೋಚಿಸಲು ಇಷ್ಟಪಡುವುದಿಲ್ಲ. ನಾನು ಈಗ ಹೇಗೆ ಬ್ಯಾಟಿಂಗ್ ಲಯದಲ್ಲಿ ಕಂಡು ಬರುತ್ತಿದ್ದೇನೋ ಅದನ್ನೇ ಮುಂದುವರೆಸಲು ಬಯಸುತ್ತೇನೆ" ಎಂದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ 16ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದು ಚೆನ್ನೈಗೆ ಐಪಿಎಲ್ನ ಐದನೇ ಕಪ್ ಆಗಿದೆ. ಅಜಿಂಕ್ಯಾ ರಹಾನೆ ಫೈನಲ್ ಪಂದ್ಯದಲ್ಲಿ ತಮ್ಮ ಕೊಡುಗೆಯನ್ನು ನೀಡಿದರು. ಅಲ್ಲದೇ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 27 ಬಾಲ್ಗೆ 61 ರನ್ ಕಲೆಹಾಕಿ ಪಂದ್ಯದ ಗತಿಯನ್ನೇ ಬದಲಾಯಿಸಿ ಗೆಲುವಿಗೆ ಕಾರಣರಾಗಿದ್ದು, ರೆಹಾನೆಯ ಕಮ್ಬ್ಯಾಕ್ ಅವಕಾಶ ಮಾಡಿಕೊಟ್ಟಿತ್ತು. ಅಜಿಂಕ್ಯಾ ಈವರೆಗೆ 82 ಟೆಸ್ಟ್‌ಗಳನ್ನು ಆಡಿದ್ದು 4,931 ರನ್ ಕಲೆಹಾಕಿದ್ದಾರೆ. 2021 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ ಕಾರಣರಾಗಿದ್ದ ರಹಾನೆ 2023ರಲ್ಲಿ ಆಸಿಸ್ ವಿರುದ್ಧ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
-
Emotions on #TeamIndia comeback ☺️
— BCCI (@BCCI) June 3, 2023 " class="align-text-top noRightClick twitterSection" data="
Preps for the #WTC23 🙌
Support from family & friends 👍
In conversation with comeback man @ajinkyarahane88 👌👌 - By @RajalArora
Full Interview 🎥🔽
https://t.co/hUBvZ5rvYD pic.twitter.com/vJINbplobY
">Emotions on #TeamIndia comeback ☺️
— BCCI (@BCCI) June 3, 2023
Preps for the #WTC23 🙌
Support from family & friends 👍
In conversation with comeback man @ajinkyarahane88 👌👌 - By @RajalArora
Full Interview 🎥🔽
https://t.co/hUBvZ5rvYD pic.twitter.com/vJINbplobYEmotions on #TeamIndia comeback ☺️
— BCCI (@BCCI) June 3, 2023
Preps for the #WTC23 🙌
Support from family & friends 👍
In conversation with comeback man @ajinkyarahane88 👌👌 - By @RajalArora
Full Interview 🎥🔽
https://t.co/hUBvZ5rvYD pic.twitter.com/vJINbplobY
"ಈಗ ತಂಡದಲ್ಲಿ ಸಂಸ್ಕೃತಿ ನಿಜವಾಗಿಯೂ ಚೆನ್ನಾಗಿದೆ ಎಂದು ನಾನು ಭಾವಿಸಿದೆ. ರೋಹಿತ್ ಮತ್ತು ರಾಹುಲ್ ಭಾಯ್ ತಂಡವನ್ನು ನಿಜವಾಗಿಯೂ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಅದು ಸಹ ತಂಡದಲ್ಲಿ ಸಹಾಯ ಮಾಡುತ್ತದೆ ಮತ್ತು ತಂಡದಲ್ಲಿ ಆಟಗಾರರ ನಡುವೆಯೂ ವಾತಾವರಣ ಉತ್ತಮವಾಗಿದೆ. ಪ್ರತಿಯೊಬ್ಬರು ಹೊಂದಿಕೊಂಡು ತಂಡ ಉತ್ತಮವಾಗಿ ಕಂಡುಬರುತ್ತಿದೆ" ಎಂದರು.
ರಾಷ್ಟ್ರೀಯ ತಂಡದಿಂದ ದೂರವಿರುವಾಗ ಸಿಕ್ಕ ಬೆಂಬಲಕ್ಕಾಗಿ ರಹಾನೆ ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ. "ಇದು ನನಗೆ ಭಾವನಾತ್ಮಕ ಕ್ಷಣವಾಗಿತ್ತು. ನಾನು ಕೈಬಿಟ್ಟಾಗ, ನನ್ನ ಕುಟುಂಬದಿಂದ ನನಗೆ ದೊರೆತ ಬೆಂಬಲವು ದೊಡ್ಡದಾಗಿತ್ತು ಮತ್ತು ಭಾರತಕ್ಕಾಗಿ ಆಡುವ ಕನಸು ಮತ್ತೂ ದೊಡ್ಡದಾಗಿತ್ತು. ಭಾರತಕ್ಕಾಗಿ ಆಡುವುದು ನನಗೆ ತುಂಬಾ ಮುಖ್ಯವಾಗಿದೆ. ಅದಕ್ಕಾಗಿ ನಾನು ಶ್ರಮಿಸಿದೆ, ನನ್ನ ಫಿಟ್‌ನೆಸ್ ಮತ್ತು ದೇಶೀಯ ಕ್ರಿಕೆಟ್‌ಗೆ ಹಿಂತಿರುಗಿದೆ. ಬಿಸಿಸಿಐ ಮತ್ತು ಆಯ್ಕೆದಾರರಿಗೆ ಧನ್ಯವಾದಗಳು. ದೇಶೀಯ ಕ್ರಿಕೆಟ್ನಲ್ಲಿ ಆಡುವಾಗ ನಾನು ದಿನಾಲು ಅಂತಾರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಉದ್ದೇಶದಿಂದಲೇ ಆಡುತ್ತಿದ್ದೆ" ಎಂದಿದ್ದಾರೆ.
ಇದನ್ನೂ ಓದಿ: ಕಾಂಗರೂ ಪಡೆಯ ವಿರುದ್ಧ ಕೊಹ್ಲಿಯೇ ವಿರಾಟ: ದಾಖಲೆಯ ಸನಿಹದಲ್ಲಿ ರನ್ ಮಷಿನ್