ETV Bharat / sports

ದ್ರಾವಿಡ್​ರಿಂದ ಕಲಿತ ಪ್ರತಿ ತಂತ್ರ, ಸಲಹೆಗಳನ್ನ ಪುಸ್ತಕದಲ್ಲಿ ಬರೆದಿಟ್ಟಿರುವೆ : ಸಂಜು ಸಾಮ್ಸನ್ - ರಾಹುಲ್ ದ್ರಾವಿಡ್​ ಕೋಚ್​

ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಸಂಜು ಸಾಮ್ಸನ್ ಅವಕಾಶ ಪಡೆದಾಗ ಅವರಿಗೆ 18 ವರ್ಷ. ಆ ಸಂದರ್ಭದಲ್ಲಿ ರಾಹುಲ್ ದ್ರಾವಿಡ್​ ರಾಯಲ್ಸ್ ತಂಡದ ನಾಯಕನಾಗಿದ್ದರು. ದ್ರಾವಿಡ್​ ರಾಜಸ್ಥಾನ್​ ರಾಯಲ್ಸ್​, ಡೆಲ್ಲಿ ಡೇರ್​ಡೇವಿಲ್ಸ್ ಮತ್ತು ಭಾರತ ತಂಡಕ್ಕೆ ಕೋಚ್​ ಆಗುವ ಮುನ್ನ ಇವರಿಬ್ಬರೂ ಕೆಲವು ಸಮಯ ಟೀಮ್​ ಮೇಟ್​ಗಳಾಗಿದ್ದರು..

Rahul Dravid, Sanju Samson
ರಾಹುಲ್ ದ್ರಾವಿಡ್​- ಸಂಜು ಸಾಮ್ಸನ್​
author img

By

Published : May 3, 2022, 6:50 PM IST

ಮುಂಬೈ : ಭಾರತ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್​ರನ್ನು ಪ್ರಶಂಸಿರುವ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸಾಮ್ಸನ್​, ಲೆಜೆಂಡರಿ ಬ್ಯಾಟರ್​ ಜೊತೆ ಒಟ್ಟಿಗೆ ಆಡುವಾಗ ಅವರಿಂದ ಎಷ್ಟು ಸಾಧ್ಯವೋ ಅಷ್ಟನ್ನು ಕಲಿಯಲು ಪ್ರಯತ್ನಿಸುತ್ತಿದ್ದೆ ಎಂದು ಬಹಿರಂಗಪಡಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಸಂಜು ಸಾಮ್ಸನ್ ಅವಕಾಶ ಪಡೆದಾಗ ಅವರಿಗೆ 18 ವರ್ಷ. ಆ ಸಂದರ್ಭದಲ್ಲಿ ರಾಹುಲ್ ದ್ರಾವಿಡ್​ ರಾಯಲ್ಸ್ ತಂಡದ ನಾಯಕನಾಗಿದ್ದರು. ದ್ರಾವಿಡ್​ ರಾಜಸ್ಥಾನ್​ ರಾಯಲ್ಸ್​, ಡೆಲ್ಲಿ ಡೇರ್ ​ಡೇವಿಲ್ಸ್ ಮತ್ತು ಭಾರತ ತಂಡಕ್ಕೆ ಕೋಚ್​ ಆಗುವ ಮುನ್ನ ಇವರಿಬ್ಬರೂ ಕೆಲವು ಸಮಯ ಟೀಮ್​ ಮೇಟ್​ಗಳಾಗಿದ್ದರು.

ಗೌರವ್ ಕಪೂರ್​ ಅವರ ಬ್ರೇಕ್​ ಫಾಸ್ಟ್ ವಿತ್​ ಚಾಂಪಿಯನ್ಸ್​ ಕಾರ್ಯಕ್ರಮದಲ್ಲಿ ತಮ್ಮ ಕೆರಿಯರ್​ ರೂಪಿಸಿಕೊಳ್ಳುವುದಕ್ಕೆ ದ್ರಾವಿಡ್​ ಹೇಗೆ ನೆರವಾದರು ಎಂಬುದರ ಬಗ್ಗೆ ಸಾಮ್ಸನ್​ ಮನಬಿಚ್ಚಿ ಮಾತನಾಡಿದ್ದಾರೆ. ದ್ರಾವಿಡ್ ಅವರು ನಾನು ಕ್ರಿಕೆಟಿಗ ಮತ್ತು ಒಬ್ಬ ವ್ಯಕ್ತಿಯಾಗಿ ಬೆಳೆಯಲು ಸಹಾಯ ಮಾಡಿದ್ದಾರೆ. ನಾನು ನನ್ನ ವ್ಯಕ್ತಿತ್ವದಲ್ಲಿ ಭಾರತೀಯ ಕೋಚ್‌ನ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತೇನೆ ಎಂದು ಸಾಮ್ಸನ್ ಹೇಳಿದ್ದಾರೆ.

"ನಾವೆಲ್ಲರು ರಾಹುಲ್ ದ್ರಾವಿಡ್ ಅವರಿಂದ ಕಲಿತ ಅನುಭವಗಳನ್ನು ಹೊಂದಿದ್ದೇವೆ. ನಾನು ಅವರೊಂದಿಗೆ 3-4 ವರ್ಷಗಳು ಕಳೆದಿದ್ದು, ಅವರಿಗೆ ನಾನು ಕ್ರಿಕೆಟ್ ಕುರಿತು ಪ್ರತಿಯೊಂದನ್ನು ಕೇಳಿದ್ದೇನೆ ಎಂದು ನನಗನ್ನಿಸುತ್ತದೆ. ನನ್ನಷ್ಟು ಅವರಿಗೆ ಯಾರೂ ಕೇಳಿಲ್ಲ ಎಂದು ಭಾವಿಸುತ್ತೇನೆ. ಅಷ್ಟೇ ಅಲ್ಲ, ಅವರಿಂದ ಪಡೆದ ಸಲಹೆಗಳು, ಕಲಿತ ತಂತ್ರಗಳನ್ನು ನನ್ನ ನೋಟ್‌ಬುಕ್‌ನಲ್ಲಿ ಎಲ್ಲವನ್ನೂ ಬರೆದುಕೊಂಡಿದ್ದೇನೆ.

ಈಗಲೂ ಅವರೊಂದಿಗೆ ಮಾತನಾಡಿದ ನಂತರ, ನಾನು ನನ್ನ ರೂಮಿಗೆ ಹಿಂತಿರುಗುತ್ತೇನೆ ಮತ್ತು ಅವರು ಹೇಳಿದ್ದನ್ನು ಬೇಗೆ ಬರೆದಿಡುತ್ತೇನೆ ಎಂದು ಸಂಜು ತಿಳಿಸಿದ್ದಾರೆ. 2022ರ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಆಡಿರುವ 10 ಪಂದ್ಯಗಳಲ್ಲಿ 6 ಗೆಲುವು ಮತ್ತು 4 ಸೋಲು ಕಂಡಿದ್ದು, 12 ಅಂಕ ಪಡೆದು 3ನೇ ಸ್ಥಾನದಲ್ಲಿದೆ.

ಇದನ್ನೂ ಓದಿ:ಕಾಟ್ರೆಲ್​ಗೆ ಸಿಡಿಸಿದ ಆ ಸಿಕ್ಸರ್​ಗಳು ತೆವಾಟಿಯಾ ಆತ್ಮವಿಶ್ವಾಸ ಹೆಚ್ಚಳಕ್ಕೆ ಕಾರಣ: ಗವಾಸ್ಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.