ETV Bharat / sports

ವಯಸ್ಸಿನ ಬಗ್ಗೆ ಯೋಚಿಸಲಾರೆ, ಆತ್ಮವಿಶ್ವಾಸದಿಂದ ಇರುವುದಕ್ಕೆ ನನ್ನ ಆದ್ಯತೆ: ಶೆಫಾಲಿ ವರ್ಮಾ - Indian woman cricketer =

ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಆರಂಭಿಕರಾದ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಮೊದಲ ವಿಕೆಟ್​ಗೆ 167 ರನ್​ಗಳ ಜೊತೆಯಾಟ ನೀಡಿದರು. ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಶೆಫಾಲಿ ಟೆಸ್ಟ್​ ಕ್ರಿಕೆಟ್​ನಲ್ಲೂ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

Shafali Verma
ಶೆಫಾಲಿ ವರ್ಮಾ
author img

By

Published : Jun 18, 2021, 8:03 AM IST

ಬ್ರಿಸ್ಟಲ್: ಇಂಗ್ಲೆಂಡ್​ ಮಹಿಳಾ ತಂಡದ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್​ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ ಭಾರತೀಯ ವನಿತೆಯರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ಶೆಫಾಲಿ ವರ್ಮಾ ಪದಾರ್ಪಣೆ ಪಂದ್ಯದಲ್ಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿಸಿದ್ದು ಕೇವಲ 4 ರನ್ನುಗಳಿಂದ ಶತಕ ವಂಚಿತರಾಗಿದ್ದರು.

ಪಂದ್ಯದ ಎರಡನೇ ದಿನದ ಅಂತ್ಯದ ನಂತರ ಮಾತನಾಡಿದ ಶೆಫಾಲಿ, 'ನಾನು ಎಂದಿಗೂ ನನ್ನ ವಯಸ್ಸಿನ ಬಗ್ಗೆ ಯೋಚಿಸುವುದಿಲ್ಲ. ಯಾವುದೇ ಪಂದ್ಯ ಆಡುವಾಗ ಆತ್ಮವಿಶ್ವಾಸದಿಂದ ಇರುವುದಕ್ಕೆ ಗಮನ ನೀಡುತ್ತೇನೆ' ಎಂದು ಹೇಳಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ವನಿತೆಯರು 9 ವಿಕೆಟ್ ಕಳೆದುಕೊಂಡು 396 ರನ್​ಗಳಿಸಿದ್ದರು. ಈ ವೇಳೆ ತಂಡ ಡಿಕ್ಲೇರ್ ಘೋಷಿಸಿಕೊಂಡಿತು. ನಾಯಕಿ ಹೀದರ್​ ನೈಟ್​ 95, ಸೋಫಿಯಾ ಡಂಕ್ಲೇ 74 ಹಾಗೂ ಟಮ್ಮಿ ಬ್ಯೂಮಾಂಟ್ 66 ತಾಳ್ಮೆಯ ಆಟವಾಡಿದರು.

ಭಾರತದ ಪರ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಸ್ನೇಹ್ ರಾಣಾ, 4 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 3 ವಿಕೆಟ್ ಪಡೆದು ಮಿಂಚಿದರು. ಗೋಸ್ವಾಮಿ ಮತ್ತು ಪೂಜಾ ವಸ್ತ್ರಾಕರ್​ ತಲಾ ಒಂದು ವಿಕೆಟ್ ಪಡೆದರು.

ಶೆಫಾಲಿ ವರ್ಮಾ 152 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 96 ರನ್​ಗಳಿಸಿದರು. ಈ ವೇಳೆ ಕೇಟ್​ ಕ್ರಾಸ್​ ಬೌಲಿಂಗ್​ನಲ್ಲಿ ಶ್ರೂಬ್ಸೋಲ್​ಗೆ ಕ್ಯಾಚ್​ ನೀಡಿ ಔಟಾದರು.

ಇನ್ನು ಶೆಫಾಲಿಗೆ ಬೆಂಬಲ ನೀಡಿದ ಅನುಭವಿ ಮಂಧಾನ 155 ಎಸೆತಗಳಲ್ಲಿ 14 ಬೌಂಡರಿ ಸಹಿತ 78 ರನ್​ಗಳಿಸಿ ಔಟಾದರು. ನಂತರ ಬಂದ ಪೂನಮ್​ ರಾವುತ್(2), ಶಿಖಾ ಪಾಂಡೆ (0), ನಾಯಕಿ ಮಿಥಾಲಿ ರಾಜ್ ಕೇವಲ 2ರನ್​ಗಳಿಸಿ ನಿರಾಸೆ ಮೂಡಿಸಿದರು. ಭಾರತಿಯ ವನಿತೆಯರ ತಂಡ ಎರಡನೇ ದಿನದ ಅಂತ್ಯದ ವೇಳೆಗೆ 5 ವಿಕೆಟ್​ ಕಳೆದುಕೊಂಡು 187 ರನ್​ ಗಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.