ETV Bharat / sports

ಪುರುಷರ ತಂಡಕ್ಕೆ ಕೋಚ್ ಆಗಿ ಆಯ್ಕೆ.. ಇದು ಉತ್ತಮ ಆರಂಭ, ಆದ್ರೆ ನಾನೇ ಕೊನೆಯಾಗಬಾರದು: ಸಾರಾ ಟೇಲರ್

author img

By

Published : Oct 31, 2021, 7:29 PM IST

ಮಹಿಳಾ ಕ್ರಿಕೆಟ್​ನಲ್ಲಿ ಅತ್ಯಂತ ಶ್ರೇಷ್ಠ ವಿಕೆಟ್ ಕೀಪರ್ ಎಂಬ ಖ್ಯಾತಿಗೆ ಪಾತ್ರರಾಗಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕಿ ಟೇಲರ್​, ಪುರುಷರ ತಂಡಕ್ಕೆ ಸಹಾಯಕ ಕೋಚ್​​ ಆಗಿ ನೇಮಕವಾಗುತ್ತಿದ್ದಂತೆ ಕ್ರಿಕೆಟ್​ ಲೋಕದಲ್ಲಿ ಈ ಸುದ್ದಿ ಭಾರಿ ಸದ್ದು ಮಾಡಿತ್ತು.

Sarah Taylor
ಸಾರಾ ಟೇಲರ್​

ದುಬೈ: ಟಿ10 ಲೀಗ್​ನಲ್ಲಿ ಅಬುಧಾಬಿ ತಂಡಕ್ಕೆ ಸಹಾಯಕ ಕೋಚ್​ ಆಗಿ ನೇಮಕವಾಗಿರುವ ಇಂಗ್ಲೆಂಡ್ ಮಹಿಳಾ ತಂಡದ ಮಾಜಿ ವಿಕೆಟ್ ಕೀಪರ್​​ ಸಾರಾ ಟೇಲರ್​​, ತಾವು ಪುರುಷ ತಂಡಕ್ಕೆ ಮೊದಲ ಮಹಿಳಾ ಕೋಚ್​ ಆಗಿ ಆಯ್ಕೆಯಾಗಿರುವುದಕ್ಕೆ ಖುಷಿಯಿದೆ. ಆದರೆ ಫ್ರಾಂಚೈಸಿ ಕ್ರಿಕೆಟ್​ನಲ್ಲಿ ಈ ರೀತಿ ಏನಾದರೂ ಸಾಧಿಸಿದ ಕೊನೆಯ ಮಹಿಳೆ ನಾನಾಗದಿರಲು ಬಯಸುತ್ತೇನೆ. ನನ್ನಂತೆ ಹಲವಾರು ಮಹಿಳೆಯರು ಇಂತಹ ಹುದ್ದೆಗಳಿಗೆ ಆಯ್ಕೆಯಾಗಬೇಕೆಂದು ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಮಹಿಳಾ ಕ್ರಿಕೆಟ್​ನಲ್ಲಿ ಅತ್ಯಂತ ಶ್ರೇಷ್ಠ ವಿಕೆಟ್ ಕೀಪರ್ ಎಂಬ ಖ್ಯಾತಿಗೆ ಪಾತ್ರರಾಗಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕಿ ಟೇಲರ್​, ಪುರುಷರ ತಂಡಕ್ಕೆ ಸಹಾಯಕ ಕೋಚ್​​ ಆಗಿ ನೇಮಕವಾಗುತ್ತಿದ್ದಂತೆ ಕ್ರಿಕೆಟ್​ ಲೋಕದಲ್ಲಿ ಈ ಸುದ್ದಿ ಭಾರಿ ಸದ್ದು ಮಾಡಿತ್ತು. ಏಕೆಂದರೆ ಟೇಲರ್​ ಈ ಗೌರವಕ್ಕೆ ಪಾತ್ರರಾದ ಮೊದಲ ಮಹಿಳಾ ಕ್ರಿಕೆಟರ್​ ಆಗಿದ್ದರು. ಅವರು ಈ ಹಿಂದೆಯೇ ಕೌಂಟಿ ಪುರುಷರ ತಂಡಕ್ಕೆ ವಿಕೆಟ್​ ಕೀಪರ್ ಕೋಚ್​ ಆಗಿದ್ದರು. ಆದರೆ ಫ್ರಾಂಚೈಸಿ ಕ್ರಿಕೆಟ್​ನಲ್ಲಿ ಇದೇ ಮೊದಲ ಬಾರಿಗೆ ಕೋಚ್​ ಹುದ್ದೆ ಪಡೆದಿದ್ದರು.

" ಈ ಅವಕಾಶ ಸಿಕ್ಕಿರುವುದು ಮೊದಲ ಹೆಜ್ಜೆ ಎಂದು ನಾನು ಭಾವಿಸುತ್ತೇನೆ. ಮಹಿಳಾ ಆಟಗಾರ್ತಿಯರಿಗೆ ಈ ರೀತಿಯ ಉದ್ಯೋಗಗಳು ಮತ್ತು ಪಾತ್ರಗಳು ಮುಂದೆ ಸಾಮಾನ್ಯವಾಗಿ ಸಿಗಬಹುದು ಎಂದು ತೋರುತ್ತಿದೆ. ಆಶಾದಾಯಕವಾಗಿ, ಇದು ಹೀಗೆ ಮುಂದುವರಿಯುತ್ತದೆ ಎಂಬ ವಿಶ್ವಾಸವಿದೆ. ಆದರೆ ನಮ್ಮನ್ನು ಕೋಚ್​ ಎಂದು ನೋಡಬೇಕೆ ಹೊರತು, ಮಹಿಳಾ ಕೋಚ್​ ಎಂದು ನೋಡಬಾರದು" ಎಂದು ಭಾನುವಾರ ನಡೆದ ಸಂವಾದವೊಂದರಲ್ಲಿ ಟೇಲರ್​ ಹೇಳಿದ್ದಾರೆ.

ಈ ಅವಕಾಶ ಸಿಕ್ಕಿರುವುದು ನನಗೆ ಆಶ್ಚರ್ಯಕ್ಕೀಡು ಮಾಡಿತ್ತು. ನಾನು ಅಬುಧಾಬಿಗೆ ತೆರಳಲು ದಿನಗಳನ್ನು ಎಣಿಸುತ್ತಿದ್ದೇನೆ. ನಾನೊಬ್ಬಳು ಒಳ್ಳೆಯ ಕೋಚ್​ ಎಂದು ಗುರುತಿಸಿಕೊಳ್ಳಲು ಬಯಸುತ್ತೇನೆ. ಈ ಹಿಂದೆ ಸಸೆಕ್ಸ್​ ತಂಡದಲ್ಲಿ ಸಾಕಷ್ಟು ಕಲಿತಿದ್ದೇನೆ. ಅದು ನನ್ನ ಮೊದಲ ಕೋಚ್​ ಹುದ್ದೆಯಾಗಿತ್ತು. ಅಲ್ಲಿ ನನಗೆ ಹಲವಾರು ಉತ್ತಮ ಮಾರ್ಗದರ್ಶಕರು ನನ್ನ ಬೆನ್ನಿಗೆ ನಿಂತಿದ್ದರು. ಹಾಗಾಗಿ ಕೋಚ್​ ಆಗಿ ನಿರ್ವಹಿಸಬೇಕಾದ ಜವಾಬ್ದಾರಿಯ ಬಗ್ಗೆ ಕಲಿತಿದ್ದೇನೆ. ನನ್ನ ರೀತಿ ಕ್ರಿಕೆಟ್​ನಲ್ಲಿ ಮಹಿಳಾ ಕೋಚ್​ಗಳ ಹುದ್ದೆಗೇರುವುದನ್ನು ನೋಡಲು ಬಯಸುತ್ತೇನೆ ಎಂದು ಸಾರಾ ಹೇಳಿಕೊಂಡಿದ್ದಾರೆ.

ಇದನ್ನು ಓದಿ:ಸೆಮಿಫೈನಲ್ಸ್, ಫೈನಲ್ಸ್​ ತಂಡಗಳನ್ನು ಹೆಸರಿಸಿದ ಶೇನ್​ ವಾರ್ನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.