ETV Bharat / sports

ಸ್ಟೀವ್ ಸ್ಮಿತ್ ಔಟ್​ ಮಾಡಲು ನಾನು ಬರೋಬ್ಬರಿ ಆರು ತಿಂಗಳ ಸಂಶೋಧನೆ ಮಾಡಿದ್ದೇನೆ; ಅಶ್ವಿನ್

author img

By

Published : Dec 22, 2021, 5:43 PM IST

ಇತ್ತೀಚೆಗೆ ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ (427 ವಿಕೆಟ್) ದಾಖಲೆಯ ವಿಕೆಟ್​ ಕಿಳುವ ಮೂಲಕ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ (417 ವಿಕೆಟ್) ಅವರನ್ನು ಹಿಂದಿಕ್ಕಿದರು. ಇನ್ನು ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಕಪಿಲ್ ದೇವ್ (434 ವಿಕೆಟ್) ದಾಖಲೆ ಮುರಿಯಲು ಕೇವಲ 8 ವಿಕೆಟ್ ಮಾತ್ರ ಬಾಕಿ ಇವೆ.

I did six months of research for Steve Smith's Out; Ashwin

ಹೈದರಾಬಾದ್​: ಟೀಂ ಇಂಡಿಯಾದ ಅನುಭವಿ ಆಟಗಾರ ಹಾಗೂ ಆಫ್​ ಸ್ಪಿನ್ನರ್​​ ರವಿಚಂದ್ರನ್ ಅಶ್ವಿನ್ ಹಳೆಯ ಘಟನೆಯೊಂದನ್ನು ನನೆಪು ಮಾಡಿಕೊಂಡಿದ್ದಾರೆ. ಕಳೆದ ವರ್ಷ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ಪ್ರವಾಸದ ವೇಳೆ ತಾವು ಎದುರಿಸಿದ ಸಂಗತಿಯೊಂದನ್ನು ಇದೀಗ ಬಗ್ಗೆ ಬಹಿರಂಗಪಡಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ಆರಂಭಕ್ಕೂ ಮುನ್ನ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದ ನಾನು ಬರೋಬ್ಬರಿ ಆರು ತಿಂಗಳುಗಳ ಕಾಲ ಈ ಬಗ್ಗೆ ಸಂಶೋಧನೆ ನಡೆಸಿದ್ದೆ. ಹಲವು ಟ್ರಿಕ್​ ಬಳಕೆಯ ನಂತರ ಅವರನ್ನು ಕೊನೆಗೂ ಔಟ್​ ಮಾಡುವಲ್ಲಿ ಯಶಸ್ವಿಯಾದೆ ಎಂದಿದ್ದಾರೆ.

ಇತ್ತೀಚೆಗೆ ಕ್ರೀಡಾ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಶ್ವಿನ್ ಸರಣಿಯ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಇದು ಸಹ ಒಂದು. ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಮೊದಲ ಬಾರಿಗೆ ಟೆಸ್ಟ್ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದು ಇದನ್ನೂ ಸಹ ಮೆಲುಕು ಹಾಕಿದರು.

ಆಸ್ಟ್ರೇಲಿಯ ಪ್ರವಾಸಕ್ಕೆ ಆರು ತಿಂಗಳ ಮೊದಲು ನಾನು ಸ್ಟೀವ್ ಸ್ಮಿತ್ ಮೇಲೆ ಸಂಪೂರ್ಣ ಗಮನ ಹರಿಸಿದ್ದೆ. ಅವರು ಅದಕ್ಕೂ ಮೊದಲು ಆಡಿದ ಪಂದ್ಯಗಳ ದೃಶ್ಯಾವಳಿಗಳು, ಅವರು ಬಾಲ್​ಗಳನ್ನು ಹೇಗೆಲ್ಲ ಎದುರಿಸುತ್ತಾರೆ ಎಂಬುದರ ಬಗ್ಗೆಯೂ ಅವರಿತುಕೊಂಡಿದ್ದೆ. ಅವರ ಆಲೋಚನಾ ಕ್ರಮ ಮತ್ತು ದೇಹಭಾಷೆಯನ್ನು ಸಹ ಅರ್ಥೈಸಿಕೊಂಡಿದ್ದೆ. ಹಾಗಾಗಿ ಹಲವು ಟ್ರಿಕ್ ಬಳಿಕ ನಾನು ಅವರನ್ನು ಔಟ್ ಮಾಡಲು ಸಾಧ್ಯವಾಯಿತು ಎಂದು ಹಳೆಯ ಘಟನೆ ನನಪು ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ (427 ವಿಕೆಟ್) ದಾಖಲೆಯ ವಿಕೆಟ್​ ಕಿಳುವ ಮೂಲಕ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ (417 ವಿಕೆಟ್) ಅವರನ್ನು ಹಿಂದಿಕ್ಕಿದರು. ಇನ್ನು ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಕಪಿಲ್ ದೇವ್ (434 ವಿಕೆಟ್) ದಾಖಲೆ ಮುರಿಯಲು ಕೇವಲ 8 ವಿಕೆಟ್ ಮಾತ್ರ ಬಾಕಿ ಇವೆ.

ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಈ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ. ಅಶ್ವಿನ್ ಕಪಿಲ್ ದೇವ್ ದಾಖಲೆ ಮುರಿದರೆ ಟೆಸ್ಟ್ ಮಾದರಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಭಾರತದ ಪರ ಮಾಜಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ (619 ವಿಕೆಟ್) ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ; ಪಾಕ್‌ ವಿರುದ್ಧ ಭಾರತಕ್ಕೆ 4-3 ಗೋಲುಗಳ ರೋಚಕ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.