ETV Bharat / sports

ಕೊಹ್ಲಿ-ಪ್ಲೆಸಿಸ್‌ ಜೊತೆಗಿನ ಬ್ಯಾಟಿಂಗ್ ಆನಂದಿಸುವೆ: ಅನುಜ್ ರಾವತ್​ - ಐಪಿಎಲ್ 2022

ಶನಿವಾರ ನಡೆದ ಪಂದ್ಯದಲ್ಲಿ ಅನುಜ್ ರಾವತ್​ ಮತ್ತು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್​​ಗಳ ಜಯ ಸಾಧಿಸಿತು. ಟೂರ್ನಿಯಲ್ಲಿ 3ನೇ ಜಯದೊಂದಿಗೆ 3ನೇ ಸ್ಥಾನಕ್ಕೇರಿತು.

Anuj Rawat
ಅನುಜ್ ರಾವತ್​
author img

By

Published : Apr 10, 2022, 5:07 PM IST

ಮುಂಬೈ: ಯುವ ಬ್ಯಾಟರ್​ ಅನುಜ್​​ ರಾವತ್​ ಶನಿವಾರ ಮುಂಬೈ ವಿರುದ್ಧ ಭರ್ಜರಿ ಅರ್ಧಶತಕ ಸಿಡಿಸಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಶನಿವಾರ ನಡೆದ ಪಂದ್ಯದಲ್ಲಿ ರಾವತ್​ ಮತ್ತು ಕೊಹ್ಲಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್​​ಗಳ ಜಯ ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ 3ನೇ ಜಯದೊಂದಿಗೆ 3ನೇ ಸ್ಥಾನಕ್ಕೇರಿತು.

ಪಂದ್ಯದ ನಂತರ ಮಾತನಾಡಿದ ಅನುಜ್​ ರಾವತ್​, ಆರ್​ಸಿಬಿ ಗೆಲುವಿಗಾಗಿ ರನ್​ಗಳಿಸಿದ್ದಕ್ಕೆ ನನ್ನಲ್ಲಿ ಶ್ರೇಷ್ಠ ಭಾವನೆ ಉಂಟಾಗಿದೆ. ನಾನು ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡೆ. ವಿರಾಟ್​ ಕೊಹ್ಲಿ, ಡುಪ್ಲೆಸಿಸ್​ ಅವರಂತಹ ಲೆಜೆಂಡ್ಸ್‌ ಜೊತೆಗೆ ಬ್ಯಾಟಿಂಗ್ ಮಾಡುವುದಕ್ಕೆ ಖುಷಿಯಿದೆ ಮತ್ತು ಅದನ್ನು ಆನಂದಿಸುತ್ತೇನೆ ಎಂದು 21 ವರ್ಷದ ಯುವ ಬ್ಯಾಟರ್​ ಹೇಳಿದ್ದಾರೆ.

ಅನುಜ್ 47 ಎಸೆತಗಳಲ್ಲಿ 66 ರನ್​ಗಳಿಸಿದರು. ಅವರ ಇನ್ನಿಂಗ್ಸ್​ನಲ್ಲಿ 2 ಬೌಂಡರಿ ಮತ್ತು ಭೌರ್ಜರಿ 6 ಸಿಕ್ಸರ್​ಗಳಿದ್ದವು. ಇವರಿಗೆ ಸಾಥ್​ ನೀಡಿದ ಕೊಹ್ಲಿ 36 ಎಸೆತಗಳಲ್ಲಿ 48ರನ್​ಗಳಿಸಿದರು.

ಇದನ್ನೂ ಓದಿ:ಹಳಿಗೆ ಮರಳಲು ಮುಂಬೈಗೆ ಕೇವಲ ಒಂದು ಗೆಲುವು ಸಾಕು: ಜಹೀರ್ ಖಾನ್ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.