ETV Bharat / sports

ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆಡಲಿದ್ದೇನೆ : ಗೊಂದಲಕ್ಕೆ ತೆರೆ ಎಳೆದ ವಿರಾಟ್ ಕೊಹ್ಲಿ - ದಕ್ಷಿಣಾ ಆಫ್ರಿಕಾ ವಿರುದ್ಧದ ಏಕದಿನ ಸರಣಿ

ದಕ್ಷಿಣಾ ಆಫ್ರಿಕಾ ವಿರುದ್ಧದ ಸರಣಿಗೆ ಲಭ್ಯವಿರುವುದಾಗಿ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ನಾನು ವಿಶ್ರಾಂತಿ ಪಡೆಯುವ ಕುರಿತು ಬಿಸಿಸಿಐ ಜೊತೆ ಮಾತುಕತೆ ನಡೆಸಿಯೇ ಇಲ್ಲ ಎಂದಿದ್ದಾರೆ..

kohli
ವಿರಾಟ್ ಕೊಹ್ಲಿ
author img

By

Published : Dec 15, 2021, 1:50 PM IST

Updated : Dec 15, 2021, 2:05 PM IST

ಮುಂಬೈ : ನಾನೆಂದು ಬಿಸಿಸಿಐ ಜೊತೆ ವಿಶ್ರಾಂತಿ ಕುರಿತು ಮಾತನಾಡಿಯೇ ಇಲ್ಲ ಎಂದು ಭಾರತ ಟೆಸ್ಟ್ ಕ್ರಿಕೆಟ್​ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಏಕದಿನ ತಂಡದ ನೂತನ ನಾಯಕ ರೋಹಿತ್ ಶರ್ಮಾ ಹಾಗೂ ತನ್ನ ನಡುವಿನ ಮನಸ್ತಾಪದ ಕುರಿತು ಪ್ರತಿಕ್ರಿಯಿಸಿದ್ದಾರೆ.

ತಂಡದ ಆಯ್ಕೆಗೆ ಎಲ್ಲಾ ಸಮಯದಲ್ಲೂ ನಾನು ಲಭ್ಯವಿದ್ದೇನೆ. ನಾನು ವಿಶ್ರಾಂತಿಗಾಗಿ ಬಿಸಿಸಿಐಯೊಂದಿಗೆ ಮಾತುಕತೆ ನಡೆಸಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ಸರಣಿಗೆ ನಾನು ಲಭ್ಯವಿದ್ದೇನೆ ಎಂದಿದ್ದಾರೆ. ಈ ಮೂಲಕ ಆಫ್ರಿಕಾ ಸರಣಿಯಿಂದ ಕೊಹ್ಲಿ ಹೊರಗುಳಿಯಲಿದ್ದಾರೆ ಎಂಬ ಸುದ್ದಿಗೆ ತೆರೆ ಎಳೆದಿದ್ದಾರೆ.

ಇದಕ್ಕೂ ಮೊದಲು ದಕ್ಷಿಣಾ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಗಾಯದ ಸಮಸ್ಯೆಯಿಂದಾಗಿ ಅವರು ಹೊರಗುಳಿಯಲಿದ್ದಾರೆ ಎಂದಿತ್ತು. ಇದರ ಬೆನ್ನಲ್ಲೆ ಏಕದಿನ ಸರಣಿಯಿಂದ ಕೊಹ್ಲಿ ಹೊರಗುಳಿಯಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು.

ಇದನ್ನೂ ಓದಿ: ಒಬ್ಬರ ನಾಯಕತ್ವದಲ್ಲಿ ಮತ್ತೊಬ್ಬರಾಡಲು ಇಷ್ಟವಿಲ್ವೆ?: ರೋಹಿತ್​-ಕೊಹ್ಲಿ ನಿರ್ಧಾರ ಪ್ರಶ್ನಿಸಿದ ಫ್ಯಾನ್ಸ್​

Last Updated : Dec 15, 2021, 2:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.