ETV Bharat / sports

ಹೈದರಾಬಾದ್​ ವರ್ಸಸ್​ ಡೆಲ್ಲಿ: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ರಿಷಭ್ ಪಂತ್ ಪಡೆ

ಎಂ. ಚಿದಂಬರಂ ಮೈದಾನದಲ್ಲಿ ಡೆಲ್ಲಿ-ಹೈದರಾಬಾದ್ ತಂಡಗಳ ನಡುವೆ 20ನೇ ಐಪಿಎಲ್​ ಪಂದ್ಯ ನಡೆಯುತ್ತಿದ್ದು, ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ಬ್ಯಾಟಿಂಗ್​ ಆಯ್ದುಕೊಂಡಿದೆ.

Hyderabad vs Delhi
Hyderabad vs Delhi
author img

By

Published : Apr 25, 2021, 7:34 PM IST

ಚೆನ್ನೈ: ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಇಂದಿನ ಎರಡನೇ ಪಂದ್ಯದಲ್ಲಿ ಹೈದರಾಬಾದ್​​- ಡೆಲ್ಲಿ ಕ್ಯಾಪಿಟಲ್​ ಮುಖಾಮುಖಿಯಾಗಿದ್ದು, ಟಾಸ್​ ಗೆದ್ದ ರಿಷಭ್ ಪಂತ್​​ ಪಡೆ ಬ್ಯಾಟಿಂಗ್​ ಆಯ್ದುಕೊಂಡಿದೆ.

ಉಭಯ ತಂಡಗಳು ಈಗಾಗಲೇ ನಾಲ್ಕು ಪಂದ್ಯಗಳನ್ನಾಡಿದ್ದು, ಡೆಲ್ಲಿ ಮೂರು ಪಂದ್ಯಗಳಲ್ಲಿ ಗೆದ್ದು ಪಾಯಿಂಟ್​ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹೈದರಾಬಾದ್ ಕೇವಲ 1 ಪಂದ್ಯದಲ್ಲಿ ಜಯ ಸಾಧಿಸಿ 7ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯಕ್ಕಾಗಿ ಡೆಲ್ಲಿ ತಂಡ ಒಂದು ಬದಲಾವಣೆ ಮಾಡಿಕೊಂಡಿದ್ದು, ಲಲಿತ್​ ಸ್ಥಾನಕ್ಕೆ ಅಕ್ಸರ್ ಪಟೇಲ್​ ಆಯ್ಕೆಯಾಗಿದ್ದಾರೆ. ಹಾಗೇ ಸನ್​ರೈಸರ್ಸ್ ಭುವನೇಶ್ವರ್​ ಕುಮಾರ್​ ಬದಲಿಗೆ ಸುಚಿತ್ರಗೆ ಅವಕಾಶ ನೀಡಿದೆ. ಡೇವಿಡ್​ ವಾರ್ನರ್ ನೇತೃತ್ವದ ಸನ್​ರೈಸರ್ಸ್​ ಹೈದರಾಬಾದ್​ಗೆ ಇಂದಿನ ಪಂದ್ಯ ಗೆಲ್ಲಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ: ಜಡೇಜಾ ಸ್ಫೋಟಕ ಅರ್ಧಶತಕ : ಆರ್​ಸಿಬಿಗೆ 192 ರನ್​ಗಳ ಬೃಹತ್ ಗುರಿ ನೀಡಿದ ಸಿಎಸ್​ಕೆ

ಆಡುವ 11ರ ಬಳಗ ಇಂತಿದೆ

ಡೆಲ್ಲಿ ಕ್ಯಾಪಿಟಲ್ಸ್​​: ಪೃಥ್ವಿ ಶಾ, ಶಿಖರ್​ ಧವನ್​, ಸ್ಟೀವ್​ ಸ್ಮಿತ್​, ರಿಷಭ್​ ಪಂತ್​(ಕ್ಯಾಪ್ಟನ್​, ವಿ.ಕೀ), ಶಿಮ್ರಾನ್ ಹೆಟ್ಮಾಯರ್​, ಸ್ಟೋನಿಸ್​, ಅಕ್ಸರ್ ಪಟೇಲ್​, ಆರ್​. ಅಶ್ವಿನ್​, ರಬಾಡಾ, ಅಮಿತ್ ಮಿಶ್ರಾ, ಅವಿಶ್ ಖಾನ್​

ಸನ್​ರೈಸರ್ಸ್ ಹೈದರಾಬಾದ್​: ಡೇವಿಡ್​ ವಾರ್ನರ್​(ಕ್ಯಾಪ್ಟನ್​), ಬೈರ್​ಸ್ಟೋವ್​(ವಿ,ಕೀ), ಕೇನ್​ ವಿಲಿಯಮ್ಸನ್​, ವಿರಾಟ್​ ಸಿಂಗ್​, ವಿಜಯ್​ ಶಂಕರ್​, ಅಭಿಷೇಕ್​ ಶರ್ಮಾ, ಕೇದಾರ್​ ಜಾಧವ್​, ರಾಶೀದ್ ಖಾನ್​, ಜಗದ್ದೀಶ್​ ಸುಚಿತ್ರ, ಖಲೀಲ್ ಅಹ್ಮದ್​, ಸಿದ್ಧಾರ್ಥ್​ ಕೌಲ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.