ETV Bharat / sports

ವಿರಾಟ್​ ಕೊಹ್ಲಿ ಜರ್ಸಿ ಸಂಖ್ಯೆ 18.. ಇದರ ಹಿಂದಿದೆ ಭಾವನಾತ್ಮಕ ಕಥೆ - ETV Bharath Kannada news

ದಾಖಲೆಗಳ ಸರದಾರ ವಿರಾಟ್​ ಕೊಹ್ಲಿ ಅವರ ಜರ್ಸಿ ಸಂಖ್ಯೆ 18 ಆಗಿರುವುದಕ್ಕೆ ಕಾರಣ ಏನು ಎಂಬುದಕ್ಕೆ ಇಲ್ಲಿದೆ ಮಾಹಿತಿ..

Here is the reason why Virat Kohli jersey number 18
ವಿರಾಟ್​ ಕೊಹ್ಲಿ ಜರ್ಸಿ ಸಂಖ್ಯೆ 18 ಏಕೆ ನಿಮಗೆ ತಿಳಿದಿದೆಯೇ
author img

By

Published : Mar 26, 2023, 3:03 PM IST

ರನ್​ ಮಷಿನ್​ ವಿರಾಟ್​ ಕೊಹ್ಲಿ ಒಂದು ಬ್ರ್ಯಾಂಡ್​ ಆಗಿ ಬೆಳೆದಿದ್ದಾರೆ. ಕ್ರಿಕೆಟ್​ ಅಭಿಮಾನಿಗಳಲ್ಲದೇ ಯುವ ವರ್ಗಕ್ಕೆ ವಿರಾಟ್​ ಒಂದು ರೀತಿ ಸ್ಫೂರ್ತಿ. ಅವರು ಕ್ರಿಕೆಟ್​ಗಾಗಿ ಈವರೆಗೂ ಫಿಟ್​​ನೆಸ್ ಕಾಯ್ದುಕೊಂಡಿದ್ದು,​ ಕ್ರೀಡಾ ಜಗತ್ತಿನಲ್ಲಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಭಾರತದ ಕ್ರಿಕೆಟ್​ ದೇವರು ಸಚಿನ್​ ನಂತರ ಫಾರ್ಮ್​ ಇಲ್ಲ ಎಂಬ ಕಾರಣಕ್ಕೆ ತಂಡದಿಂದ ಹೊರಗುಳಿಯದ ಮತ್ತೊಬ್ಬ ಆಟಗಾರ ಇದ್ದರೆ ಅದು ವಿರಾಟ್ ಕೊಹ್ಲಿ. ಅವರ ಜರ್ಸಿ ಸಂಖ್ಯೆ 18 ಏಕೆ ಎಂಬ ಪ್ರಶ್ನೆ ಹಲವರಿಗೆ ಕಾಡಿರಬಹುದು, ಅದಕ್ಕೆ ಉತ್ತರ ಇಲ್ಲಿದೆ.

ಟೀಂ ಇಂಡಿಯಾ ಹಾಗೂ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವಾಗ ಭಾರತದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಯಾವಾಗಲೂ ನಂಬರ್ 18 ಜರ್ಸಿಯನ್ನು ಧರಿಸುತ್ತಾರೆ. ವಿರಾಟ್ ಕೊಹ್ಲಿ ಆಡುವಾಗ 18 ನಂಬರ್ ಜರ್ಸಿ ಧರಿಸಿರುವುದಕ್ಕೆ ಬಲವಾದ ಭಾವನಾತ್ಮಕ ಕಾರಣವಿದೆ.

ವಿರಾಟ್ ಕೊಹ್ಲಿ ಅವರು 2008 ರಲ್ಲಿ ವಿಶ್ವಕಪ್ ವಿಜೇತ ಅಂಡರ್-19 ತಂಡದ ನಾಯಕರಾಗಿದ್ದಾಗ ಅವರ ಅಂಡರ್-19 ದಿನಗಳಿಂದಲೂ 18 ನೇ ನಂಬರ್ ಜರ್ಸಿಯನ್ನು ಧರಿಸುತ್ತಾ ಬಂದಿದ್ದಾರೆ. 2018 ರಲ್ಲಿ ವಿರಾಟ್ ಕೊಹ್ಲಿ ಭಾರತ ತಂಡದಲ್ಲಿ ಹೆಸರಿಸಿದಾಗ, ಭಾರತದ ಅಂತಾರಾಷ್ಟ್ರೀಯ ತಂಡದಲ್ಲಿ ಯಾರೂ ನಂಬರ್ 18 ಜರ್ಸಿ ಬಳಸುತ್ತಿರಲಿಲ್ಲ. ವಿರಾಟ್​ ಅಂಡರ್​ 19ನ ಜರ್ಸಿ ಸಂಖ್ಯೆಯಲ್ಲೇ ಮುಂದುವರೆದರು.

ವಿರಾಟ್ ಕೊಹ್ಲಿ 18 ನಂಬರ್ ಜರ್ಸಿಯನ್ನು ಏಕೆ ಧರಿಸುತ್ತಾರೆ?: ವಿರಾಟ್​ ಕೊಹ್ಲಿ 17 ವರ್ಷದವರಿದ್ದಾಗ ತಮ್ಮ ತಂದೆಯನ್ನು ಕಳೆದುಕೊಂಡರು. ಅವರ ತಂದೆ ಡಿಸೆಂಬರ್​ 18, 2006 ರಂದು ಮೃತಪಟ್ಟರು. ಅಂದು ವಿರಾಟ್​​ ದೆಹಲಿ ಪರ ರಣಜಿ ಆಟ ಆಡುತ್ತಿದ್ದರು. ತಂದೆಯ ಮರಣದ ನಂತರ ಮಾರನೇ ದಿನವೇ ಮತ್ತೆ ತಂಡ ಸೇರಿಕೊಂಡಿದ್ದರು. ಅಂದು ಅವರು ಅವಿಸ್ಮರಣೀಯ ಆಟವನ್ನು ಡೆಲ್ಲಿಗಾಗಿ ಆಡಿದ್ದರು. ಅವರ ಬ್ಯಾಟ್​ನಿಂದ ಬಂದಿದ್ದ 90 ರನ್​ನಿಂದ ಡೆಲ್ಲಿ ತಂಡ ಫಾಲೋ-ಆನ್ ತಪ್ಪಿಸಿಕೊಂಡಿತ್ತು.

"ನನ್ನ ತಂದೆ ತೀರಿಕೊಂಡ ರಾತ್ರಿ ನನಗೆ ಇನ್ನೂ ನೆನಪಿದೆ. ಏಕೆಂದರೆ ಅದು ನನ್ನ ಜೀವನದಲ್ಲಿ ಅತ್ಯಂತ ಕಷ್ಟಕರ ಸಮಯವಾಗಿತ್ತು. ಆದರೆ ನನ್ನ ತಂದೆಯ ಮರಣದ ನಂತರ ಬೆಳಗ್ಗೆ ಆಡಲು ಕರೆ ನನಗೆ ಸಹಜವಾಗಿಯೇ ಬಂದಿತು. ನಾನು ಬೆಳಗ್ಗೆ ನನ್ನ (ದೆಹಲಿ) ಕೋಚ್‌ಗೆ ಕರೆ ಮಾಡಿದೆ. ನಾನು ಆಡಲು ಬಯಸುತ್ತೇನೆ ಎಂದು ನಾನು ಹೇಳಿದೆ. ಅದು ವ್ಯಕ್ತಿಯಾಗಿ ನನ್ನನ್ನು ಬದಲಿಸಿದ ಕ್ಷಣ. ನನ್ನ ಜೀವನದಲ್ಲಿ ಈ ಕ್ರೀಡೆಗೆ ಇರುವ ಪ್ರಾಮುಖ್ಯತೆ ತುಂಬಾ ಹೆಚ್ಚು" ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

"ಅಂಡರ್​-19 ತಂಡದಲ್ಲಿ ನನ್ನ ಆರಂಭದ ಜರ್ಸಿ ಸಂಖ್ಯೆ 18 ಆಗಿತ್ತು. ಭಾರತಕ್ಕೆ ಪದಾರ್ಪಣೆ ಮಾಡಿದ ನಂತರವೂ ಅದೇ ಜರ್ಸಿ ನಂಬರ್​ ಮುಂದುವರೆಯಿತು. ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದು 18 ರಂದು, ದುರದೃಷ್ಟವಶಾತ್ ನನ್ನ ತಂದೆ 18 ರಂದು ನಿಧನರಾದರು. ನನ್ನ ಜರ್ಸಿ 18 ಆಗಿ ಮುಂದುವರೆಯಿತು" ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: IPL 2023: ಆರ್​ಸಿಬಿಗೆ ಗಾಯದ ಸಮಸ್ಯೆ, ಮೂವರು ಆಟಗಾರರು ಮಿಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.