ನವದೆಹಲಿ: ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಹೀತ್ ಸ್ಟ್ರೀಕ್ ನಿಧನರಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅವರ ಸಹ ಆಟಗಾರ ಮತ್ತು ಸ್ನೇಹಿತ ಹೆನ್ರಿ ಒಲೊಂಗಾ ಅವರು ಮರಣ ಹೊಂದಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ. ಹೀತ್ ಸ್ಟ್ರೀಕ್ ಜೊತೆಗೆ ಮಾಡಿದ ವಾಟ್ಸಾಪ್ ಸಂದೇಶವನ್ನು ಎಕ್ಸ್ ಆ್ಯಪ್ (ಹಿಂದಿನ ಟ್ವಿಟರ್)ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹೀತ್ ಸ್ಟ್ರೀಕ್ ನಿಧನರಾಗಿದ್ದಾರೆ ಎಂದು ಮುಂಜಾನೆ ಹೆನ್ರಿ ಒಲೊಂಗಾ ಅವರೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ನಂತರ ಅವರನ್ನು ಸಂಪರ್ಕಿಸಿ ಮಾತನಾಡಿದ ಹಳೆಯ ಪೋಸ್ಟ್ನ್ನು ಡಿಲೀಟ್ ಮಾಡಿ ಹೀತ್ ಸ್ಟ್ರೀಕ್ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಹಂಚಿಕೊಂಡು,"ಹೀತ್ ಸ್ಟ್ರೀಕ್ ಅವರ ನಿಧನದ ವದಂತಿಗಳು ಬಹಳ ಉತ್ಪ್ರೇಕ್ಷಿತವಾಗಿವೆ ಎಂದು ನಾನು ದೃಢೀಕರಿಸಬಲ್ಲೆ. ನಾನು ಅವನಿಂದ ಕೇಳಿದ್ದೇನೆ. ಮೂರನೇ ಅಂಪೈರ್ ಅವರನ್ನು ಮರಳಿ ಕರೆದಿದ್ದಾರೆ. ಅವರು ಜೀವಂತವಾಗಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
ಹೀತ್ ಸ್ಟ್ರೀಕ್ ಅನಾರೋಗ್ಯದಿಂದ ಬಳಲುತ್ತಿದ್ದು, ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಕೊಲೊನ್ ಮತ್ತು ಲಿವರ್ ಕ್ಯಾನ್ಸರ್ಗೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಸ್ನೇಹಿತರು ಮತ್ತು ಆಪ್ತ ಬಳಗ ತಿಳಿಸಿದೆ.
ಜಿಂಬಾಬ್ವೆಯ ಪತ್ರಿಕೆಯೊಂದರ ಜೊತೆ ಮಾತನಾಡಿದ ಮಾಜಿ ಆಲ್ ರೌಂಡರ್ ಹೀತ್ ಸ್ಟ್ರೀಕ್ ವಂದಂತಿಗಳೆಲ್ಲ ಸುಳ್ಳೆಂದು ತಿಳಿಸಿದ್ದಾರೆ. "ವ್ಯಕ್ತಿ ಸಾವಿನ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಶೀಲಿಸದೇ ಹರಡುವುದು ತುಂಬಾ ಬೇಸರದ ಸಂಗತಿ" ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.
-
I can confirm that rumours of the demise of Heath Streak have been greatly exaggerated. I just heard from him. The third umpire has called him back. He is very much alive folks. pic.twitter.com/LQs6bcjWSB
— Henry Olonga (@henryolonga) August 23, 2023 " class="align-text-top noRightClick twitterSection" data="
">I can confirm that rumours of the demise of Heath Streak have been greatly exaggerated. I just heard from him. The third umpire has called him back. He is very much alive folks. pic.twitter.com/LQs6bcjWSB
— Henry Olonga (@henryolonga) August 23, 2023I can confirm that rumours of the demise of Heath Streak have been greatly exaggerated. I just heard from him. The third umpire has called him back. He is very much alive folks. pic.twitter.com/LQs6bcjWSB
— Henry Olonga (@henryolonga) August 23, 2023
ಹೆನ್ರಿ ಒಲೊಂಗಾ ಅವರು ಮೊದಲು,"ಬೇಸರದ ಸುದ್ದಿ, ಹೀತ್ ಸ್ಟ್ರೀಕ್ ನಮ್ಮನ್ನು ಅಗಲಿದ್ದಾರೆ, ಆರ್ಐಪಿ @ಹೀತ್ ಸ್ಟ್ರೀಕ್ ಲೆಂಜೆಂಡ್. ನಾವು ಕಂಡ ಶ್ರೇಷ್ಠ ಆಲ್ ರೌಂಡರ್. ನಿಮ್ಮೊಂದಿಗೆ ಆಟವಾಡಿರುವುದಕ್ಕೆ ಸಂತೋಷವಾಯಿತು" ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದರು. ಇದನ್ನು ಕಂಡ ಕೆಲ ಕ್ರಿಕೆಟಿಗರು ಸಂತಾಪ ವ್ಯಕ್ತಪಡಿಸಿದ್ದರು.
ಸ್ಟ್ರೀಕ್ ಜಿಂಬಾಬ್ವೆಯ ಅತ್ಯತ್ತಮ ಆಲ್ರೌಂಡ್ ಆಟಗಾರರಾಗಿ ಗುರುತಿಸಿಕೊಂಡವರು. 65 ಟೆಸ್ಟ್‌ಗಳು ಮತ್ತು 189 ಏಕದಿನ ಪಂದ್ಯಗಳನ್ನು ಆಡಿದ ಅವರು 4933 ರನ್ ಮಾಡಿದ್ದಾರೆ ಮತ್ತು ಎರಡು ಮಾದರಿಯ ಕ್ರಿಕೆಟ್ನಿಂದ 455 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಟೆಸ್ಟ್‌ನಲ್ಲಿ 1000 ರನ್ ಮತ್ತು 100 ವಿಕೆಟ್ ಗಳಿಸಿದ ಜಿಂಬಾಬ್ವೆಯ ಮೊದಲ ಕ್ರಿಕೆಟಿಗ ಹಾಗೆಯೇ ಏಕದಿನದಲ್ಲಿ 2000 ರನ್ ಮತ್ತು 200 ವಿಕೆಟ್‌ಗಳನ್ನು ಪಡೆದ ಮೊದಲಿಗ ಎಂಬ ದಾಖಲೆ ಬರೆದಿದ್ದಾರೆ. ಅಲ್ಲದೇ ಜಿಂಬಾಬ್ವೆ ಪರ ಟೆಸ್ಟ್ ಮತ್ತು ಒನ್ಡೇ ಮಾದರಿಯಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮುಂದುವರಿದಿದ್ದಾರೆ. (IANS)
ಇದನ್ನೂ ಓದಿ: ಚೆಸ್ ವಿಶ್ವಕಪ್ ಫೈನಲ್: ಪ್ರಜ್ಞಾನಂದ vs ಕಾರ್ಲ್‌ಸನ್ ಮೊದಲ ಪಂದ್ಯ ಡ್ರಾ, ನಾಳೆ 2ನೇ ಫೈಟ್